Vijayapura: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವ

Vijayapura: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವ
ಸಾಂದರ್ಭಿಕ ಚಿತ್ರ

Vijayapura News: ತಿಕೋಟ ಸೇರಿ ತಾಲೂಕಿನ ಹಲವೆಡೆ ಭೂಕಂಪನ ಅನುಭವ ಆಗಿದೆ. ಸಂಜೆ 6.34ರ ಸುಮಾರಿಗೆ ಭೂಮಿ ಕಂಪಿಸಿರುವ ಅನುಭವ ಆಗಿದೆ ಎಂದು ತಿಳಿದುಬಂದಿದೆ.

TV9kannada Web Team

| Edited By: ganapathi bhat

Oct 18, 2021 | 8:19 PM

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಇಂದು (ಅಕ್ಟೋಬರ್ 18) ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ. ತಿಕೋಟ ಸೇರಿ ತಾಲೂಕಿನ ಹಲವೆಡೆ ಭೂಕಂಪನ ಅನುಭವ ಆಗಿದೆ. ಸಂಜೆ 6.34ರ ಸುಮಾರಿಗೆ ಭೂಮಿ ಕಂಪಿಸಿರುವ ಅನುಭವ ಆಗಿದೆ ಎಂದು ತಿಳಿದುಬಂದಿದೆ. ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಆಗಾಗ ಭೂಕಂಪನ ಆಗುತ್ತಿದೆ. ಇದರಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. 

ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನ ಅನುಭವದಿಂದ ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಯಾವ ಸಮಯದಲ್ಲಿ ಏನಾಗುತ್ತದೆಯೋ ಎಂಬ ಭೀತಿಯಲ್ಲಿದ್ದಾರೆ. ಈ ವಿಚಾರದ ಬಗ್ಗೆ ಗಣಿ ಸಚಿವ ಹಾಲಪ್ಪ ಆಚಾರ್ ಇಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರ ಜಿಲ್ಲೆ ಸುರಕ್ಷತಾ ವಲಯದಲ್ಲಿದೆ. ಹೆಚ್ಚಾಗಿ ಮಳೆ ಆಗಿದ್ದರಿಂದಾಗಿ ಈ ರೀತಿ ಆಗಿದೆ. ಅಗತ್ಯ ಬಿದ್ದರೆ ಹಿರಿಯ ವಿಜ್ಞಾನಿಗಳ ತಂಡ ಕರೆಸುತ್ತೇವೆ. ಜನರು ಆತಂಕ ಪಡುವ ಅಗತ್ಯವಿಲ್ಲ ಅಂತ ಹಾಲಪ್ಪ ಆಚಾರ್ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಗಡಿಕೇಶ್ವರ ಗ್ರಾಮದ ಜನರು ನಿತ್ಯ ಭಯದಲ್ಲಿಯೇ ಬದಕುತ್ತಿದ್ದಾರೆ. ನಿರಂತರವಾಗಿ ಉಂಟಾಗುತ್ತಿರುವ ಭೂಕಂಪನ ಮತ್ತು ಭೂಮಿಯಿಂದ ಬರುತ್ತಿರುವ ಸದ್ದಿನಿಂದ ಕಂಗಾಲಾಗಿದ್ದಾರೆ. ಬಹುತೇಕ ಮನೆಗಳು ಕಲ್ಲು ಮತ್ತು ಮಣ್ಣಿನಿಂದ ನಿರ್ಮಾಣ ಮಾಡಿರುವುದರಿಂದ ಭೂಕಂಪನದ ತೀವ್ರತೆ ಹೆಚ್ಚಾಗಿದೆ. ಮುಂದೇನು ಗತಿ ಎನ್ನುವ ಚಿಂತೆ ಕಾಡುತ್ತಿದೆ. ಇದರ ನಡುವೆ ಎನ್​ಜಿಆರ್​ಐ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಈ ಕುರಿತು ಅಧ್ಯಯನ ಪ್ರಾರಂಭಿಸಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಸೇರಿದಂತೆ ಚಿಂಚೋಳಿ, ಕಾಳಗಿ ತಾಲೂಕಿನ ಹತ್ತಕ್ಕೂ ಹೆಚ್ಚು ಹಳ್ಳಿಯ ಜನರು ಭಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮೇಲಿಂದ ಮೇಲೆ ಭೂಮಿಯಿಂದ ಬರುತ್ತಿರುವ ಭಾರೀ ಸದ್ದು ಮತ್ತು ನಿರಂತರವಾಗಿ ಉಂಟಾಗುತ್ತಿರುವ ಭೂಕಂಪನದಿಂದ ಕಂಗಾಲಾಗಿದ್ದಾರೆ. ಜನರ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣ, ಗಡಿಕೇಶ್ವರ ಸೇರಿದಂತೆ ಭೂಕಂಪನ ಪೀಡಿತ ಗ್ರಾಮಗಳಲ್ಲಿನ ಬಹುತೇಕ ಮನೆಗಳು ಕಲ್ಲು ಮತ್ತು ಮಣ್ಣಿನಿಂದ ನಿರ್ಮಾಣ ಮಾಡಲಾಗಿರುವುದೇ ಆಗಿದೆ.

ಇದನ್ನೂ ಓದಿ: ಕಲಬುರಗಿ: ಭೂಕಂಪನಕ್ಕೆ ತತ್ತರಿಸಿದ ಗ್ರಾಮಸ್ಥರು; ಎನ್​ಜಿಆರ್​ಐ ತಂಡದಿಂದ ಅಧ್ಯಯನ ಆರಂಭ

ಇದನ್ನೂ ಓದಿ: Vijayapura Earthquake: ವಿಜಯಪುರದ ಬಸವನಬಾಗೇವಾಡಿಯಲ್ಲಿ ಮತ್ತೆ ಭೂಕಂಪನ; ಇನ್ನೆರಡು ದಿನಗಳಲ್ಲಿ ತಜ್ಞರ ಭೇಟಿ

Follow us on

Related Stories

Most Read Stories

Click on your DTH Provider to Add TV9 Kannada