ಕರ್ನಾಟಕದಲ್ಲಿ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತ: ಕಾರಣ ಕೊಟ್ಟ ಜಿವಿಕೆ-EMRI ಮುಖ್ಯಸ್ಥ

ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತಕ್ಕೆ ಕಾರಣವೇನು? ಟಿವಿ9ಗೆ ಜಿವಿಕೆ-EMRI ಮುಖ್ಯಸ್ಥ ಆರ್.ಜಿ.ಹನುಮಂತಪ್ಪ ಕೊಟ್ಟ ಉತ್ತರ ಹೀಗಿದೆ.

ಕರ್ನಾಟಕದಲ್ಲಿ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತ: ಕಾರಣ ಕೊಟ್ಟ ಜಿವಿಕೆ-EMRI ಮುಖ್ಯಸ್ಥ
108
TV9kannada Web Team

| Edited By: TV9 SEO

Sep 25, 2022 | 3:12 PM

ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿನ್ನೆ(ಸೆ.24) ರಾತ್ರಿಯಿಂದ 108 ಆ್ಯಂಬುಲೆನ್ಸ್​ಗಳ ಸೇವೆಯಲ್ಲಿ(108 Ambulance Service) ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಗಿದೆ.

ದಿಢೀರ್ ಅಂತ 108 ಆ್ಯಂಬುಲೆನ್ಸ್​ ಸೇವೆಯಲ್ಲಿ ವ್ಯತ್ಯಯ ಆಗಿದ್ದೇಕೆ? ಸಮಸ್ಯೆಗೆ ಕಾರಣಗಳೇನು?  ಎನ್ನುವುದಕ್ಕೆ ಸ್ವತಃ ಜಿವಿಕೆ-EMRI ಮುಖ್ಯಸ್ಥ ಆರ್.ಜಿ.ಹನುಮಂತಪ್ಪ ಅವರು ಟಿವಿ9ಗೆ ಪ್ರತಿಕ್ರಿಯಿಸಿದ್ದು, ಸರ್ವರ್​, ಸಾಫ್ಟ್​ವೇರ್, ಹಾರ್ಡ್​​ವೇರ್ ಮೂರೂ ಫೇಲ್ ಆಗಿವೆ. ಸಾರ್ವಜನಿಕ ಕರೆಗಳನ್ನು ಮಾನಿಟರ್ ಮಾಡಲು ಸಾಧ್ಯವಾಗುತ್ತಿಲ್ಲ. ಸಾಫ್ಟ್​​​ವೇರ್ ಸಮಸ್ಯೆಯಿಂದ ಮಾನಿಟರ್ ಸಿಸ್ಟಂ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಕೇವಲ ಕರೆಯನ್ನು ಸ್ವೀಕಾರ ಮಾಡುತ್ತಿದ್ದೇವೆ. ಚೆನ್ನೈನಿಂದ ಸರ್ವರ್ ಹಾರ್ಡ್​​​ವೇರ್​​​ಗಾಗಿ ಕಾಯುತ್ತಿದ್ದೇವೆ ಹಾರ್ಡ್​​​ವೇರ್ ಬಂದ ಬಳಿಕ ಟೆಕ್ನಿಕಲ್ ಸಮಸ್ಯೆ ಪರಿಹಾರ ಆಗುತ್ತೆ. ತುರ್ತು ಸಂದರ್ಭಕ್ಕಾಗಿ 112 ಸಂಖ್ಯೆಗೆ ಕರೆ ಮಾಡಬಹುದು.ಅಲ್ಲಿಂದ ಆ್ಯಂಬುಲೆನ್ಸ್​​ ಸೇವೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ 108 ಡೆಡ್: ಕರ್ನಾಟಕದಲ್ಲಿ 108 ಸೇವೆ ಹಠಾತ್ ಸ್ಥಗಿತ; ತಕ್ಷಣ ಗಮನ ಹರಿಸಲು ಆರೋಗ್ಯ ಸಚಿವರಿಗೆ ಸಿಎಂ ಬೊಮ್ಮಾಯಿ ಸೂಚನೆ

ವಸೂಲಿಗಿಳಿದ ಖಾಸಗಿ ಆ್ಯಂಬುಲೆನ್ಸ್​ಗಳು 108 ಸೇವೆಯಲ್ಲಿ ವ್ಯತ್ಯಯವಾಗಿದ್ದರಿಂದ ಅನಿವಾರ್ಯವಾಗಿ ರೋಗಿಗಳು ಖಾಸಗಿ ಆ್ಯಂಬುಲೆನ್ಸ್ ಮೊರೆ ಹೋಗುತ್ತಿದ್ದಾರೆ. ಆದ್ರೆ, ಖಾಸಗಿ ಆ್ಯಂಬುಲೆನ್ಸ್ ನವರು ಇದೇ ಸಿಕ್ಕಿದ್ದೆ ಚಾನ್ಸ್​ ಅಂತ ಬಾಯಿಗೆ ಬಂದಂಗೆ ರೇಟ್ ಹೇಳುತ್ತಿದ್ದಾರೆ. ಇದರಿಂದ ಜನರಿಗೆ ಹೊರೆಯಾದರೂ ಸಹ ಅನಿವಾರ್ಯವಾಗಿ ರೋಗಿಗಳು ಜೀವ ಉಳಿಸಿಕೊಳ್ಳಲು ಖಾಸಗಿ ಆ್ಯಂಬುಲೆನ್ಸ್ ಮೊರೆ ಹೋಗಿದ್ದಾರೆ.

108 ಸೇವೆಯಲ್ಲಿ ವ್ಯತ್ಯಯದಿಂದ ರೋಗಿ ಬಲಿ ಹೌದು…ಸರಿಯಾದ ಸಮಯಕ್ಕೆ 108 ಸೇವೆ ಸಿಗದಿದ್ದಕ್ಕೆ ಒಂದು ಬಲಿಯಾಗಿದೆ. ಸಕಾಲಕ್ಕೆ ಆ್ಯಂಬುಲೆನ್ಸ್​ ಸಿಗದೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐಡಿಹಳ್ಳಿಯ ಜಯಮ್ಮ(65) ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಲವು ಬಾರಿ ಌಂಬುಲೆನ್ಸ್ ಕರೆ ಮಾಡಲಾಗಿದೆ. ಆದ್ರೆ ಆ್ಯಂಬುಲೆನ್ಸ್ ಬರದ ಕಾರಣ ಜಯಮ್ಮ ಮನೆಯಲ್ಲೇ ಪ್ರಾಣ ಬಿಟ್ಟಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada