ಕೊರೊನಾ ತಂದ ಸಂಕಷ್ಟ: ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ, ಕುಟುಂಬಸ್ಥರು ಆತ್ಮಹತ್ಯೆಗೆ ಶರಣು

ರಿಯಲ್ ಎಸ್ಟೇಟ್​ನಲ್ಲಿ ಹಿನ್ನಡೆ ಕಂಡಿದ್ದ ವಿನೋದ್​ ಕುಟುಂಬ ಆರ್ಥಿಕ ಮುಗ್ಗಟ್ಟಿನಿಂದಲೇ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಕೊರೊನಾ ತಂದ ಸಂಕಷ್ಟ: ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ, ಕುಟುಂಬಸ್ಥರು ಆತ್ಮಹತ್ಯೆಗೆ ಶರಣು
ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು
KUSHAL V

|

Dec 14, 2020 | 6:47 PM

ದಕ್ಷಿಣ ಕನ್ನಡ: ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮಂಗಳೂರು ಬಳಿಯ ಹಳೆಯಂಗಡಿಯಲ್ಲಿ ನಡೆದಿದೆ. ಹಳೆಯಂಗಡಿಯ ಕಲ್ಲಾಪು ಬಳಿ ಮನೆಯಲ್ಲಿ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ರಿಯಲ್ ಎಸ್ಟೇಟ್ ಉದ್ಯಮಿ ವಿನೋದ್ ಸಾಲ್ಯಾನ್‌(38), ಆತನ ಪತ್ನಿ ರಚನಾ(38) ಹಾಗೂ ಪುತ್ರ ಸಾಧ್ಯ ಸಾಲ್ಯಾನ್‌(10) ಎಂದು ಗುರುತಿಸಲಾಗಿದೆ.

ಕಳೆದ 2 ದಿನಗಳಿಂದ ಕುಟುಂಬದ ಯಾರೂ ಮನೆಯಿಂದ ಹೊರಗೆ ಬಂದಿರಲಿಲ್ಲ. ಹಾಗಾಗಿ, ಸ್ಥಳೀಯರು ಆತಂಕಗೊಂಡು ಕಿಟಕಿಯಲ್ಲಿ ಇಣುಕಿ ನೋಡಿದಾಗ ಮೂವರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ವಿನೋದ್​ ಮತ್ತು ಆತನ ಕುಟುಂದವರ ಮೃತದೇಹಗಳು ಚಾಪೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಪತ್ತೆಯಾಗಿದೆ. ಜೊತೆಗೆ, ಸ್ಥಳದಲ್ಲಿ ಪೊಲೀಸರು ವಿಷದ ಬಾಟಲಿ ಸಹ ಪತ್ತೆಹಚ್ಚಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ, ಕುಟುಂಬದ ಮೂವರು ಊಟದ ಜೊತೆ ವಿಷ ಬೆರೆಸಿ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ವಿನೋದ್ ಸಾಲ್ಯಾನ್ ಕೊರೊನಾ ಲಾಕ್​ಡೌನ್​ ಸಮಯದಲ್ಲಿ ಆರ್ಥಿಕ ಸಂಕಷ್ಟ ಎದುರಸಿದ್ದ ಎಂದು ಹೇಳಲಾಗಿದೆ. ಹಲವು ವರ್ಷ ಮುಂಬೈನಲ್ಲಿ ವಾಸವಿದ್ದ ವಿನೋದ್ ಕುಟುಂಬ ಕಳೆದ ಒಂದು ವರ್ಷದಿಂದ ಹಳೆಯಂಗಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.

ರಿಯಲ್ ಎಸ್ಟೇಟ್​ನಲ್ಲಿ ಹಿನ್ನಡೆ ಕಂಡಿದ್ದ ವಿನೋದ್​ ಕುಟುಂಬ ಆರ್ಥಿಕ ಮುಗ್ಗಟ್ಟಿನಿಂದಲೇ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada