ಹಾಸನ: ಕಷ್ಟ ಪಟ್ಟು ರೈತರು ಬೆಳೆದ ಬೆಳೆ ಖರೀದಿಯಲ್ಲಿ ಮೋಸ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ರೈತರ ಶುಂಠಿ ಖರೀದಿ ವೇಳೆ ತೂಕದಲ್ಲಿ ವರ್ತಕರು ಮಹಾ ಮೋಸ ಮಾಡುತ್ತಿರುವುದು ಬಯಲಾಗಿದೆ. ಜಿಲ್ಲೆಯ ವಿವಿಧೆಡೆ ಖಾಸಗಿ ವರ್ತಕರ ವಿರುದ್ಧ ರೈತರು ಆರೋಪ ಮಾಡಿದ್ದಾರೆ.
ಪ್ರತಿ ಚೀಲ ಶುಂಠಿ ಖರೀದಿಯಲ್ಲೂ 6 ರಿಂದ 8 ಕೆಜಿ ವರ್ತಕರು ಕದಿಯೋದನ್ನು ರೈತರು ಪತ್ತೆ ಹಚ್ಚಿದ್ದಾರೆ. ಎಲೆಕ್ಟ್ರಿಕಲ್ ತೂಕದ ಯಂತ್ರಕ್ಕೆ ಪ್ರತ್ಯೇಕ ರಿಮೋಟ್ ಅಳವಡಿಸಿ ತೂಕದ ವೇಳೆ ವಂಚಿಸುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ. ಪ್ರತಿ ಚೀಲದಲ್ಲೂ 150 ರೂ.ನಿಂದ 200 ರೂ.ವರೆಗೆ ರೈತರಿಗೆ ನಷ್ಟವಾಗುತ್ತಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರನ್ನ ರೈತರು ಒತ್ತಾಯಿಸಿದ್ದಾರೆ.