ಬೆರಳೆಣಿಕೆ ರೈತರಿಗಷ್ಟೇ ತೋಟಗಾರಿಕೆ ಬೆಳೆ ಹಾನಿ ಪರಿಹಾರ; ಅರ್ಹರ ನೆರವಿಗೆ ಅಡ್ಡಿಯಾದ ಸರ್ಕಾರದ ಷರತ್ತು
ಸರಕಾರ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರವೇನೋ ಘೋಷಣೆ ಮಾಡಿದೆ. ಆದರೇ ಆ ಪರಿಹಾರ ಕೊಡಬೇಕಾದರೆ ಅದಕ್ಕೆ ಹತ್ತಾರು ಷರತ್ತುಗಳನ್ನು ಕೂಡಾ ಹಾಕಿದೆ. ಇದರಿಂದಾಗಿ ಸಾವಿರಾರು ತೋಟಗಾರಿಕೆ ಬೆಳೆಗಾರರು ಸರಕಾರ ಕೊಡುವ ಪರಿಹಾರದಿಂದ ವಚಿಂತವಾಗುವ ಭೀತಿ ಎದುರಿಸುತ್ತಿದ್ದಾರೆ.
ಬೀದರ್: ಜಿಲ್ಲೆಯ ರೈತರು ಕಷ್ಟಪಟ್ಟು ತೋಟಗಾರಿಕೆ ಬೆಳೆ ಬೆಳೆದಿದ್ದರು. ಎಕರೆಗೆ ಸಾವಿರಾರು ರೂಪಾಯಿ ಖರ್ಚುಮಾಡಿದ್ದರಿಂದ ಭರಪೂರ ಬೆಳೆ ಕೂಡ ಬಂದಿತ್ತು. ಆದರೆ ಕಟಾವಿಗೆ ಬಂದ ಫಸಲನ್ನು ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಸರಕಾರ ಲಾಕ್ಡೌನ್ ಘೋಷಿಸಿತ್ತು. ಇದರಿಂದಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹಣ್ಣು ತರಕಾರಿ ಹೊಲದಲ್ಲಿಯೇ ಕೊಳೆತು ಹೋಯಿತು. ರೈತರ ಬೆಳೆ ಹಾನಿ ನಷ್ಟ ಭರಿಸುವ ಉದ್ದೇಶದಿಂದ ಸರಕಾರ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಿತ್ತು. ಆದರೆ ಈ ಹಣ ಮಾತ್ರ ಇನ್ನೂ ರೈತರ ಕೈಸೇರಿಲ್ಲ.
ಬೀದರ್ ಜಿಲ್ಲೆಯಲ್ಲಿ ಕಳೇದ ಎರಡು ವರ್ಷದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷ ಕೂಡ ತೋಟಗಾರಿಕೆ ಬೆಳೆಗಳಾದ ಕಲ್ಲಂಗಡಿ, ಮಾವು, ತರಕಾರಿ, ಬೆಳೆ ಬೆಳೆಸಿದ ರೈತರು ಇನ್ನೇನು ಮಾರುಕಟ್ಟೆಗೆ ತೆಗೆದಿಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಸರಕಾರ ರಾಜ್ಯದಲ್ಲಿ ಲಾಕ್ಡೌನ್ ಜಾರಿ ಮಾಡಿತು, ಇದರ ಪರಿಣಾಮವಾಗಿ ಹೊಲದಲ್ಲಿ ಬೆಳೆದ ಬೆಳೆ ಮಾರಾಟ ಮಾಡಲಾಗದೆ, ರೈತರು ಅಸಹಾಯಕರಾಗಿದ್ದಾರೆ. ಇದನ್ನು ಅರಿತ ಸರಕಾರ ತೋಟಗಾರಿಕೆ ಬೆಳೆಗಾರರಿಗೆ ಎಕರೆಗೆ ಹತ್ತು ಸಾವಿರ ರೂಪಾಯಿ ಹಣ ಪರಿಹಾರ ಘೋಷಣೆ ಮಾಡಿತು. ಆದರೇ ಆ ಹಣವೂ ಕೂಡ ಇನ್ನೂ ರೈತರ ಕೈ ಸೇರಿಲ್ಲ ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸರಕಾರ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರವೇನೋ ಘೋಷಣೆ ಮಾಡಿದೆ. ಆದರೇ ಆ ಪರಿಹಾರ ಕೊಡಬೇಕಾದರೆ ಅದಕ್ಕೆ ಹತ್ತಾರು ಷರತ್ತುಗಳನ್ನು ಕೂಡಾ ಹಾಕಿದೆ. ಇದರಿಂದಾಗಿ ಸಾವಿರಾರು ತೋಟಗಾರಿಕೆ ಬೆಳೆಗಾರರು ಸರಕಾರ ಕೊಡುವ ಪರಿಹಾರದಿಂದ ವಚಿಂತವಾಗುವ ಭೀತಿ ಎದುರಿಸುತ್ತಿದ್ದಾರೆ. ಇನ್ನೂ ಕಳೆದ ವರ್ಷ ಲಾಕ್ಡೌನ್ನಲ್ಲಿಯೂ ಕೂಡಾ ಬೆಳೆಗಾರರಿಗೆ ಸರಕಾರ ಬೆಳೆ ನಾಶ ಪರಿಹಾರ ಘೋಷಣೆ ಮಾಡಿತ್ತು. ಆದರ ಹಣವೇ ಇನ್ನೂ ಕೆಲವೂ ರೈತರ ಕೈ ಸೇರಿಲ್ಲ ಎಂದು ರೈತ ಮಹಿಳೆ ಶಾಂತಮ್ಮ ತಿಳಿಸಿದ್ದಾರೆ.
ಕೆಲವು ರೈತರು ಹೋದ ವರ್ಷ ಕಲ್ಲಂಗಡಿ ಬೆಳೇಸಿದ್ದರು. ಆದರೇ ಈ ವರ್ಷ ಅವರು ಕಲ್ಲಂಗಡಿ ಬೆಳೆಸಿಲ್ಲ. ಆದರೇ ಅದೇ ರೈತನಿಗೆ ಈ ವರ್ಷ ಪರಿಹಾರ ಕೊಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ, ಜೊತೆಗೆ ಹೋದ ವರ್ಷ ಕಲ್ಲಂಗಡಿ ಬೆಳೆಸದ ರೈತರು ಈ ವರ್ಷ ಕಲ್ಲಂಗಡಿ ಬೆಳೇಸಿದ್ದಾರೆ. ಆದರೇ ಆ ರೈತರು ಸರಕಾರದ ಪರಿಹಾರದಿಂದ ವಂಚಿತರಾಗಬೇಕಾಗುತ್ತದೆ ತೋಟಗಾರಿಕೆ ಇಲಾಖೆ ಹೋದ ವರ್ಷ ಮಾಡಿದ ಸರ್ವೇಯನ್ನೇ ಈ ವರ್ಷ ಬಳಕೆ ಮಾಡುತ್ತಿರುವುದು ಹತ್ತಾರು ರೈತರನ್ನು ಸರಕಾರದ ಪರಿಹಾರದಿಂದ ವಂಚಿತರನ್ನಾಗಿ ಮಾಡುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಸಮೀಕ್ಷೆ ನಡೆದಿಲ್ಲ. ಹೀಗಾಗಿ ಕಲ್ಲಂಗಡಿ ಹೂ ಬೆಳೆದ ರೈತರು ಇದರಿಂದ ವಂಚಿತರಾಗಿದ್ದಾರೆ.
ತರಕಾರಿ ಹೂ ಹಣ್ಣು ಬೆಳೆದ ಜಿಲ್ಲೆಯ 470 ರೈತರು ಮಾತ್ರ ಈ ಪರಿಹಾರಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಒಟ್ಟು 28.91 ರೂಪಾಯಿ ಪರಿಹಾರ ಸಿಗಲಿದೆ. 200 ಹೆಕ್ಟೇರ್ ಹಣ್ಣು ಬೆಳೆದ 285 ರೈತರಿಗೆ 20.8 ಲಕ್ಷ ರೂಪಾಯಿ, 26 ಹೆಕ್ಟೇರ್ನಲ್ಲಿ ತರಕಾರಿ ಬೆಳೆದ 59 ರೈತರಿಗೆ 2.61 ಲಕ್ಷ ರೂಪಾಯಿ, 57.31 ಹೆಕ್ಟೇರ್ನಲ್ಲಿ ಹೂ ಬೆಳೆದ 127 ರೈತರಿಗೆ 5.73 ರೂಪಾಯಿ ಪರಿಹಾರ ಸಿಗಲಿದೆ. ಈ ಅಂಕಿ ಅಂಶ ಅರ್ಹ ರೈತರ ಶೇಕಡಾ ಅರ್ಧದಷ್ಟು ಇರುವುದಿಲ್ಲ ಬೆಳೆ ಸಮೀಕ್ಷೆ ಆಧರಿಸಿ ಪರಿಹಾರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ವಿಶ್ವನಾಂಥ್ ತಿಳಿಸಿದ್ದಾರೆ.
ಇದನ್ನೂ ಓದಿ:
ಚಾಮರಾಜನಗರದಲ್ಲಿ ಬಿತ್ತನೆ ಬೀಜದ ಸಮಸ್ಯೆ ಇಲ್ಲ ಎಂದ ಕೃಷಿ ಸಚಿವರ ವಿರುದ್ಧ ರೈತರ ಆಕ್ರೋಶ
ಗ್ರಾಮದಿಂದ ರೈತ ಕುಟುಂಬವನ್ನು ಬಹಿಷ್ಕರಿಸಿದ ಆರೋಪ; ನ್ಯಾಯಕ್ಕಾಗಿ ಆಗ್ರಹಿಸಿ ಗದಗ ಜಿಲ್ಲಾ ಕಚೇರಿ ಮುಂದೆ ಧರಣಿ