Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರದ ನಿಂಬೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ; ಲಾಕ್​ಡೌನ್​ ಮುಗಿದರೂ ರೈತರ ಸಂಕಷ್ಟಕ್ಕೆ ಕೊನೆ ಇಲ್ಲ

ನಿಂಬೆ ಸಸಿಯನ್ನು ನೆಟ್ಟ 18 ತಿಂಗಳ ಬಳಿಕ ಫಸಲು ಬಿಡಲು ಆರಂಭಿಸುತ್ತದೆ. ಒಂದು ಎಕರೆ ನಿಂಬೆಯನ್ನು ಬೆಳೆಯಲು ಕನಿಷ್ಠ 50 ರಿಂದ 75 ಸಾವಿರ ರೂಪಾಯಿ ಖರ್ಚಾಗುತ್ತದೆ. ಈ ರೀತಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದ ನಿಂಬೆ ಇದೀಗಾ ಬೆಲೆ ಕಳೆದುಕೊಂಡು ರೈತರ ಕಣ್ಣೀರಿಗೆ ಕಾರಣವಾಗಿದೆ.

ವಿಜಯಪುರದ ನಿಂಬೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ; ಲಾಕ್​ಡೌನ್​ ಮುಗಿದರೂ ರೈತರ ಸಂಕಷ್ಟಕ್ಕೆ ಕೊನೆ ಇಲ್ಲ
ನಿಂಬೆ ಹಣ್ಣು
Follow us
TV9 Web
| Updated By: preethi shettigar

Updated on: Jun 28, 2021 | 4:00 PM

ವಿಜಯಪುರ: ದ್ರಾಕ್ಷಿಯ ತವರು ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿಯ ಜೊತೆಗೆ ನಿಂಬೆ, ದಾಳಿಂಬೆ ಹಾಗೂ ಬಾಳೆ ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಗಳನ್ನು ಆರ್ಥಿಕ ಬೆಳೆಗಳನ್ನಾಗಿ ಬೆಳೆಯಲಾಗುತ್ತದೆ. ಹೇಗೆ ಉತ್ತಮ ಗುಣಮಟ್ಟದ ದ್ರಾಕ್ಷಿಯನ್ನು ಬೆಳೆದು ರಪ್ತು ಮಾಡಲಾಗುತ್ತದೆಯೋ ಹಾಗೇ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ನಿಂಬೆ ಬೆಳೆಯಲಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಬೆಳೆದ ನಿಂಬೆ ದೇಶದ ವಿವಿಧ ರಾಜ್ಯಗಳಿಗೆ ಹಾಗೂ ಕೆಲ ದೇಶಗಳಿಗೂ ರಫ್ತಾಗುತ್ತದೆ. ಆದರೆ ಕೊರೊನಾ ಎರಡನೆ ಅಲೆಯ ಕಾರಣದಿಂದ ಸದ್ಯ ನಿಂಬೆ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಪ್ರಮುಖ ಆರ್ಥಿಕ ತೋಟಗಾರಿಕೆ ಬೆಳೆಗಳಲ್ಲಿ ನಿಂಬೆಯೂ ಒಂದು. ದ್ರಾಕ್ಷಿ ಬೆಳೆಗೆ ಹೆಸರಾದ ಜಿಲ್ಲೆಯಲ್ಲಿ ನಿಂಬೆಯ ಕೃಷಿಯೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯಲ್ಲಿ 12,000 ಕ್ಕಿಂತಲೂ ಆಧಿಕ ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಕೃಷಿ ಮಾಡಲಾಗುತ್ತಿದೆ. ಜೊತೆಗೆ ಈ ವರ್ಷ ಮತ್ತಷ್ಟು ಜಮೀನುಗಳಲ್ಲಿ ನಿಂಬೆ ಸಸಿಗಳನ್ನು ನಾಟಿ ಮಾಡಲಾಗಿದೆ. ಜಿಲ್ಲೆಯ ಇಂಡಿ. ಸಿಂದಗಿ, ದೇವರಹಿಪ್ಪರಗಿ, ಬಸವನಬಾಗೇವಾಡಿ ತಾಲೂಕಿನ ಭಾಗಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಇಲ್ಲಿನ ವಾತಾವರಣ ನಿಂಬೆಗೆ ಪೂರಕವಾಗಿದೆ. ಆದರೆ ಈ ಬಾರಿ ಲಾಕ್​ಡೌನ್​ನಿಂದ ರೈತರು ನಷ್ಟಕ್ಕೆ ಸಿಲುಕ್ಕಿದ್ದಾರೆ.

ನಿಂಬೆಗೆ ಉತ್ತಮ ದರ ಇರುತ್ತಿದ್ದ ಸಮಯದಲ್ಲಿಯೇ ಲಾಕ್​ಡೌನ್ ಆಗಿದ್ದು, ಇದರಿಂದಾಗಿ ನಿಂಬೆಯನ್ನು ಕಟಾವೂ ಮಾಡಲೂ ಸಹ ಸಾಧ್ಯವಾಗಿಲಿಲ್ಲ. ಹೀಗಾಗಿ ಸಾವಿರಾರು ಟನ್ ನಿಂಬೆ ಕಟಾವು ಮಾಡದೇ ಹಾಳಾಗಿ ಹೋಯ್ತು. ಸದ್ಯ ಲಾಕ್​ಡೌನ್ ಸಡಿಲಿಕೆಯಾಗಿದ್ದರೂ ನಿಂಬೆ ಕೃಷಿಕರಿಗೆ ಪ್ರಯೋಜನವಾಗಿಲ್ಲ. ಕಾರಣ ನಿಂಬೆಗೆ ಮಾರುಕಟ್ಟೆಯಲ್ಲಿ ಉತ್ತಮ ದರವಿಲ್ಲ. 1000 ಉತ್ತಮ ನಿಂಬೆ ಒಂದು ಮೂಟೆ 200 ರಿಂದ 300 ರೂಪಾಯಿಗೆ ಮಾತ್ರ ಮಾರಾಟವಾಗುತ್ತಿದೆ. ಇನ್ನು ಹಣ್ಣಾದ ನಿಂಬೆಯ ಒಂದು ಮೂಟೆ 50 ರೂಪಾಯಿಗೆ ಮಾರಾಟವಾಗುತ್ತಿದೆ. ಈಗ ನಿಂಬೆ ಹೆಚ್ಚು ರಫ್ತಾಗುತ್ತಿಲ್ಲ. ಕೆಲ ವ್ಯಾಪಾರಸ್ಥರು ಸರಿಯಾಗಿ ಹಣ ಕೂಡ ಪಾವತಿ ಮಾಡುತ್ತಿಲ್ಲ. ಇದರಿಂದ ನಷ್ಟವಾಗಿದೆ ಎಂದು ನಿಂಬೆ ವ್ಯಾಪಾರಿ ಬಿ ಕೆ ಭಾಗವಾನ್ ತಿಳಿಸಿದ್ದಾರೆ.

ನಿಂಬೆ ಸಸಿಯನ್ನು ನೆಟ್ಟ 18 ತಿಂಗಳ ಬಳಿಕ ಫಸಲು ಬಿಡಲು ಆರಂಭಿಸುತ್ತದೆ. ಒಂದು ಎಕರೆ ನಿಂಬೆಯನ್ನು ಬೆಳೆಯಲು ಕನಿಷ್ಠ 50 ರಿಂದ 75 ಸಾವಿರ ರೂಪಾಯಿ ಖರ್ಚಾಗುತ್ತದೆ. ಈ ರೀತಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದ ನಿಂಬೆ ಇದೀಗಾ ಬೆಲೆ ಕಳೆದುಕೊಂಡು ರೈತರ ಕಣ್ಣೀರಿಗೆ ಕಾರಣವಾಗಿದೆ. ಬೇಸಿಗೆಯಲ್ಲಿ ನೀರಿಲ್ಲದಿದ್ದರೂ ಮತ್ತೇ ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರು ಹಾಕಿ ನಿಂಬೆ ಬೆಳೆಯನ್ನು ಪೋಷಿಸಲಾಗಿತ್ತು. ಇದೀಗ ಬೆಲೆ ಕಾಣದ ನಿಂಬೆ ನಷ್ಟದ ಬಾಬ್ತಾಗಿದೆ.

ಇಂದು ಮೂಟೆ ನಿಂಬೆ ಬೆಳೆ ಕಟಾವು ಮಾಡಲು ಒಂದು ಕೂಲಿಯಾಳು ಬೇಕು. ಕೂಲಿಯಾಳಿಗೆ ದಿನಕ್ಕೆ 250 ರೂಪಾಯಿಯಿಂದ 300 ರೂಪಾಯಿ ಕೂಲಿ ನೀಡಬೇಕಿದೆ. ಸದ್ಯ ಒಂದು ಮೂಟೆ ನಿಂಬೆ 200 ರಿಂದ 300 ರೂಪಾಯಿಗೆ ಮಾತ್ರ ಮಾರಾಟವಾಗುತ್ತಿರುವ ಕಾರಣ ನಿಂಬೆ ಮಾರಾಟ ಮಾಡಿದ್ದು, ಕೂಲಿ ನೀಡಲೂ ಆಗುತ್ತಿಲ್ಲ. ಜಿಲ್ಲೆಯಲ್ಲಿ ನಿಂಬೆ ಅಭಿವೃದ್ಧಿ ಮಂಡಳಿ ಇದ್ದೂ ಇಲ್ಲದಂತಾಗಿದೆ. ಸರ್ಕಾರ ನಿಂಬೆ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ನಿಂಬೆ ಬೆಳೆಗಾರರಾದ ಶ್ರೀಶೈಲ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ:

ಲಾಕ್​ಡೌನ್​ನಿಂದ ಬೆಳೆದ ಬೆಳೆಗೆ ಬೆಲೆ ಇಲ್ಲ; ಹೊಲದಲ್ಲಿಯೇ ಬದನೆಕಾಯಿಯನ್ನು ನಾಶ ಮಾಡಿದ ಬೆಳಗಾವಿ ರೈತ

ಲಾಕ್‌ಡೌನ್‌ ತೆರವಾದರೂ ಸುಧಾರಿಸಿಲ್ಲ ನೇಕಾರರ ಬದುಕು; ಬಾಗಲಕೋಟೆಯಲ್ಲಿ ನೇಯ್ದ ಬಟ್ಟೆ ಮನೆಯಲ್ಲೇ ರಾಶಿ

ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ