ರಾಜ್ಯದ ವಿವಿಧೆಡೆ ಅಗ್ನಿ ಅವಘಡ: ಶಾರ್ಟ್ ಸರ್ಕ್ಯೂಟ್, ಸಿಲಿಂಡರ್ ಸ್ಫೋಟ, ಪಟಾಕಿ ಸಿಡಿದು ದುರಂತ

ಬೆಂಗಳೂರು, ಚಿಕ್ಕಮಗಳೂರು, ಕೊಪ್ಪಳ ಮತ್ತು ತಿರುಪತಿಯಲ್ಲೂ ಅಗ್ನಿ ದುರಂತ ಉಂಟಾಗಿದೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಆದರೆ, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ.

  • TV9 Web Team
  • Published On - 21:15 PM, 5 Mar 2021
ರಾಜ್ಯದ ವಿವಿಧೆಡೆ ಅಗ್ನಿ ಅವಘಡ: ಶಾರ್ಟ್ ಸರ್ಕ್ಯೂಟ್, ಸಿಲಿಂಡರ್ ಸ್ಫೋಟ, ಪಟಾಕಿ ಸಿಡಿದು ದುರಂತ
ಚಿಕ್ಕಮಗಳೂರಿನಲ್ಲಿ ನಡೆದ ಅಗ್ನಿ ಅವಘಡ

ಬೆಂಗಳೂರು: ಕರ್ನಾಟಕ ಮತ್ತು ನೆರೆಯ ಆಂಧ್ರಪ್ರದೇಶದ ವಿವಿಧೆಡೆಗಳಲ್ಲಿ ಇಂದು (ಮಾರ್ಚ್ 5) ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರು, ಚಿಕ್ಕಮಗಳೂರು, ಕೊಪ್ಪಳ ಮತ್ತು ತಿರುಪತಿಯಲ್ಲೂ ಅಗ್ನಿ ದುರಂತ ಉಂಟಾಗಿದೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಆದರೆ, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಸ್ಥಳೀಯ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಎಲ್ಲೆಲ್ಲಿ ಏನೇನಾಗಿದೆ ಇಲ್ಲಿದೆ ವರದಿ.

ಅಂತಿಮ ಯಾತ್ರೆ ವೇಳೆ ಪಟಾಕಿ ಸಿಡಿದು ಅಗ್ನಿ ಅವಘಡ
ಬೆಂಗಳೂರಿನ ವೈಯಾಲಿಕಾವಲ್​ನಲ್ಲಿರುವ ದತ್ತಾತ್ರೇಯ ದೇಗುಲದ ಬಳಿ ಪಟಾಕಿ ಕಿಡಿ ಸಿಡಿದು ಗುಜರಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಗುಜರಿ ಅಂಗಡಿ ಸಮೀಪದಲ್ಲಿ ಮೃತ ವ್ಯಕ್ತಿಯ ಅಂತಿಮ ಯಾತ್ರೆ ನಡೆಯುತ್ತಿತ್ತು. ಮೃತದೇಹದ ಅಂತಿಮಯಾತ್ರೆ ವೇಳೆ ಪಟಾಕಿ ಸಿಡಿಸಿದ್ದಾರೆ. ಈ ವೇಳೆ, ಪಟಾಕಿ ಕಿಡಿ ಸಿಡಿದು ದುರಂತ ಸಂಭವಿಸಿದೆ. ಗುಜರಿ ಅಂಗಡಿಯಲ್ಲಿ ಅಗ್ನಿ ಅವಘಡ ಉಂಟಾಗಿದೆ.

ಅವಘಡದಲ್ಲಿ ಮೊದಲ ಮಹಡಿ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದರು. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗ್ಯಾಸ್ ಸಿಲಿಂಡರ್ ಸ್ಫೋಟ: 4 ಮನೆಗಳಲ್ಲಿ ಅಗ್ನಿ ಅವಘಡ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೊಡ್ಡಘಟ್ಟ ಗ್ರಾಮದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು, ಶೀಟ್ ಹಾಕಿದ್ದ 4 ಮನೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಗ್ರಾಮದಲ್ಲಿ ಮೊದಲು ನರಸಿಂಹಪ್ಪ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿತ್ತು. ಬಳಿಕ ವಾಸು, ಭೀಮಣ್ಣ, ಬಸವರಾಜ್ ಎಂಬವರ ಮನೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದೆ.

ಗ್ಯಾಸ್ ಸಿಲಿಂಡರ್ ಸ್ಫೋಟದಿಂದ 4 ಶೀಟ್​ ಮನೆಗಳು ಭಸ್ಮವಾಗಿದ್ದು, ಮನೆಗಳಿಂದ ಹೊರಗೆ ಓಡಿಬಂದು ಜನರು ಜೀವ ಉಳಿಸಿಕೊಂಡಿದ್ದಾರೆ. ಆದರೂ ಅಗ್ನಿ ಅವಘಡದಿಂದ ಇಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡೂರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

FIRE ENGINE

ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಶ್ರಮ

ವುಡ್ ಡಿಸೈನ್ ಶಾಪ್​ನಲ್ಲಿ ಬೆಂಕಿ; 25 ಲಕ್ಷ ಮೊತ್ತದ ಯಂತ್ರ ಹಾನಿ
ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ವುಡ್​ ಡಿಸೈನ್​ ಶಾಪ್​ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಶಾರ್ಟ್​​ ಸರ್ಕ್ಯೂಟ್​ನಿಂದ ಸುರೇಶ್ ಬಡಿಗೇರ್ ಎಂಬುವವರ ವುಡ್ ಡಿಸೈನ್ ಶಾಪ್ ಅಗ್ನಿ ಅವಘಡಕ್ಕೆ ಒಳಗಾಗಿದೆ. ಅವಘಡದಲ್ಲಿ 25 ಲಕ್ಷ ಮೌಲ್ಯದ ವುಡ್ ಮಷಿನ್​ಗೆ ಹಾನಿ ಉಂಟಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ
ತಿರುಪತಿಯ ಭವಾನಿ ನಗರ ಸರ್ಕಲ್​ನ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡದಲ್ಲಿ ಆಹಾರ ಪದಾರ್ಥ‌ ತಯಾರಿಸಿಲಾಗುತ್ತಿತ್ತು. ಆಹಾರ ಉತ್ಪನ್ನ ತಯಾರಿಕೆಯ ಕೋಣೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಟ್ಟಡದ ಮೇಲಿದ್ದ ಹಾಸ್ಟೆಲ್​ನಿಂದ ಹುಡುಗಿಯರು ಹೊರಗೆ ಓಡಿ ಬಂದಿದ್ದಾರೆ. ಭಾರಿ ಪ್ರಮಾಣದ‌ ಬೆಂಕಿ‌ ನೋಡಿ ಜನರು ಭಯಭೀತರಾಗಿದ್ದಾರೆ.

ಇದನ್ನೂ ಓದಿ: Rishab Shetty: ಆವತ್ತು ನಾವು ಮೈಮರೆತಿದ್ದರೆ ಮಾತ್ರ.. ಅಗ್ನಿ ಅವಘಡದ ಕರಾಳ ಘಟನೆ ವಿವರಿಸಿದ ರಿಷಬ್ ಶೆಟ್ಟಿ

ರಮೇಶ್‌ ಜಾರಕಿಹೊಳಿ ಸೆಕ್ಸ್ ಸಿಡಿ ಸ್ಫೋಟ; ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ