ಕರ್ನಾಟಕದಲ್ಲಿ ಮೊದಲ ಕಿಸಾನ್ ರೈಲಿಗೆ ಚಾಲನೆ; ನನಸಾಯಿತು ಕೋಲಾರ, ಚಿಕ್ಕಬಳ್ಳಾಪುರ ರೈತರ ಬಹುದಿನಗಳ ಕನಸು

ಉತ್ತರ ಭಾಗದಿಂದ ದಕ್ಷಿಣ ಭಾಗಕ್ಕೆ ರೈತರು ಬೆಳೆದ ಬೆಳೆಗಳನ್ನು ಸಾಗಿಸುವ ಮೂಲಕ ರೈತರು ಬೆಳೆದ ಬೆಳೆಗಳಿಗೆ ಬೇಡಿಕೆ ಹೆಚ್ಚಿಸಿಕೊಳ್ಳಬೇಕು. ಜೊತೆಗೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬೇಕು ಎನ್ನುವ ಬೇಡಿಕೆ ಇತ್ತು. ಈಗ ಇಂಥಾದೊಂದು ಬೇಡಿಕೆ ಕೈಗೂಡಿದೆ.

ಕರ್ನಾಟಕದಲ್ಲಿ ಮೊದಲ ಕಿಸಾನ್ ರೈಲಿಗೆ ಚಾಲನೆ; ನನಸಾಯಿತು ಕೋಲಾರ, ಚಿಕ್ಕಬಳ್ಳಾಪುರ ರೈತರ ಬಹುದಿನಗಳ ಕನಸು
ಕಿಸಾನ್ ರೈಲಿಗೆ ಚಾಲನೆ
Follow us
TV9 Web
| Updated By: sandhya thejappa

Updated on: Jun 19, 2021 | 5:04 PM

ಕೋಲಾರ: ಬಯಲು ಸೀಮೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಬಹುದಿನಗಳ ಕನಸು ಈಡೇರಿದೆ. ರೈತರು ಬೆಳೆದ ಬೆಳೆಗಳನ್ನು ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸರಬರಾಜು ಮಾಡುವ ಮಹತ್ವದ ಯೋಜನೆಗೆ ಇಂದಿನಿಂದ (ಜೂನ್ 19) ಚಾಲನೆ ಸಿಕ್ಕಿದ್ದು, ರೈತರ ಹಲವು ವರ್ಷಗಳ ಕನಸು ನನಸಾಗಿದೆ. ಈ ಮೂಲಕ ರೈತರು ಬೆಳೆದ ಬೆಳೆಗಳಿಗೆ ಬೃಹತ್ ಮಾರುಕಟ್ಟೆ ಸಿಕ್ಕಂತಾಗಿದೆ.

ಉತ್ತರ ಭಾಗದಿಂದ ದಕ್ಷಿಣ ಭಾಗಕ್ಕೆ ರೈತರು ಬೆಳೆದ ಬೆಳೆಗಳನ್ನು ಸಾಗಿಸುವ ಮೂಲಕ ರೈತರು ಬೆಳೆದ ಬೆಳೆಗಳಿಗೆ ಬೇಡಿಕೆ ಹೆಚ್ಚಿಸಿಕೊಳ್ಳಬೇಕು. ಜೊತೆಗೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬೇಕು ಎನ್ನುವ ಬೇಡಿಕೆ ಇತ್ತು. ಈಗ ಇಂಥಾದೊಂದು ಬೇಡಿಕೆ ಕೈಗೂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಹಾಗೂ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗಡಿ ದೊಡ್ಡನತ್ತ ಗ್ರಾಮದ ರೈಲು ನಿಲ್ದಾಣದಿಂದ ಇಂದು ರಾಜ್ಯದ ಮೊದಲ ಕಿಸಾನ್ ರೈಲಿಗೆ ಕೋಲಾರ ಸಂಸದ ಎಸ್.ಮುನಿಸ್ವಾಮಿ ಚಾಲನೆ ನೀಡಿದರು.

ರೈತರು ಬೆಳೆದ ಹಣ್ಣು ಹಾಗೂ ತರಕಾರಿಗಳನ್ನು ಉತ್ತರ ಭಾರತಕ್ಕೆ ಸರಬರಾಜು ಮಾಡಲು ರೈಲು ಸಂಪರ್ಕವನ್ನು ಕಲ್ಪಿಸುವಂತೆ ಈ ಭಾಗದ ರೈತರು ಹಲವಾರು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದೆ ಬೇಡಿಕೆಯಿಟ್ಟಿದ್ದರು. ಆದರೆ ಈಗ ಕೇಂದ್ರ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಿದ್ದು, ಕೇಂದ್ರ ಸರ್ಕಾರದ ರೈಲ್ವೆ ಸಚಿವ ಪಿಯೂಷ ಗೋಯಲ್, ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮೊದಲ ಬಾರಿಗೆ ಕಿಸಾನ್ ರೈಲು ಚಾಲನೆಗೆ ಅನುಮತಿ ನೀಡಿದ್ದಾರೆ. ಇನ್ನು ಮುಂದೆ ದಕ್ಷಿಣದಲ್ಲಿ ರೈತರು ಬೆಳೆದ ಬೆಳೆಗಳನ್ನು ಉತ್ತರ ಭಾರತಕ್ಕೆ ಕಳಿಸಲು ಅನುಕೂಲವಾಗಲಿದೆ. ಇಂದು ಮೊದಲ ರೈಲು ದೊಡ್ಡನತ್ತ ನಿಲ್ದಾಣದಿಂದ ದೆಹಲಿಯ ಆದರ್ಶನಗರಕ್ಕೆ ಹೊರಟಿತು. ಸುಮಾರು 250 ಟನ್ ಮಾವಿನ ಹಣ್ಣನ್ನು ಹೊತ್ತು ಸಾಗಲಿರುವ ರೈಲು ಬಹುದಿನಗಳ ರೈತರ ಹತ್ತಾರು ನಿರೀಕ್ಷೆಗಳನ್ನು ಹೊತ್ತು ಸಾಗಲಿದೆ.

ಸಾಗಾಣಿಕೆ ವೆಚ್ಚವೂ ಕಡಿಮೆ, ಸಾಗುವ ಸಮಯವೂ ಕಡಿಮೆ ದೊಡ್ಡನತ್ತ ಗ್ರಾಮದ ರೈಲು ನಿಲ್ದಾಣದಿಂದ ಹೊರಡುವ ಕಿಸಾನ್ ರೈಲು 40 ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಆದರ್ಶನಗರ ತಲುಪಲಿದೆ. ಇದೇ ತರಕಾರಿ ಹಣ್ಣುಗಳನ್ನು ರಸ್ತೆ ಮೂಲಕ ಸಾಗಿಸಿದರೆ 80 ಗಂಟೆಗಳ ಕಾಲ ಬೇಕು. ಆದರೆ ರೈಲಿನಲ್ಲಿ ಆ ಸಮಯ ಕಡಿತವಾಗಲಿದೆ. ಜೊತೆಗೆ ಸಾಗಾಣಿಕಾ ವೆಚ್ಚ ಕೂಡಾ ಸಾಕಷ್ಟು ಕಡಿಮೆಯಾಗಲಿದೆ. ಒಂದು ಕೆ.ಜಿ.ಗೆ 2.80 ಪೈಸೆ ವೆಚ್ಚ ತಗುಲಲಿದೆ. ಇದೇ ರಸ್ತೆ ಮೂಲಕ ಹೋದರೆ ಕೆ.ಜಿ.ಗೆ 7 ರಿಂದ 8 ರೂಪಾಯಿಯಾಗಲಿದೆ.

ಬೇಡಿಕೆ ಬಂದತೆ ಯಾವುದೇ ರಾಜ್ಯಕ್ಕೂ ಕಳುಹಿಸಲು ಸಿದ್ಧ ಕಿಸಾನ್ ರೈಲು ಕೇವಲ ದೆಹಲಿಗಷ್ಟೇ ಅಲ್ಲ ಹೆಚ್ಚಿನ ಬುಕ್ಕಿಂಗ್ ಸಿಕ್ಕರೆ ದೇಶದ ಯಾವುದೇ ರಾಜ್ಯಕ್ಕೂ ಕಳಿಸಲು ರೈಲ್ವೇ ಇಲಾಖೆ ಸಿದ್ಧವಿದೆ. ಅಷ್ಟೇ ಅಲ್ಲ ಈ ಕಿಸಾನ್ ರೈಲು ರೈತರ ಬೇಡಿಕೆಗನುಗುಣವಾಗಿ ಓಡಲಿದೆ. ವಾರಕ್ಕೆ ಎರಡು ಮೂರು ಬಾರಿ ಬೇಕಾದರೂ ಓಡಲಿದೆ. ಅವಶ್ಯಕತೆ ಬಿದ್ದಲ್ಲಿ ಒಂದೇ ದಿನಕ್ಕೆ ಎರಡು ಮೂರು ರೈಲುಗಳು ಬೇಕಾದರೂ ಓಡಲಿವೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ಡಿವಿಜನ್ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದರು.

ಇದನ್ನೂ ಓದಿ

Arun Singh: ಹೈಕಮಾಂಡ್‌ನ ಬಡಪಾಯಿ ಪ್ರತಿನಿಧಿ ಕೆಲಸ ‘ಬಂದ ಪುಟ್ಟಾ.. ಹೋದ ಪುಟ್ಟಾ’ ಎಂಬಂತಾಗಿದೆ: ಕುಮಾರಸ್ವಾಮಿ ಟ್ವೀಟ್

ಶಿಕ್ಷಕರನ್ನು ಕೊರೊನಾ ಫ್ರಂಟ್​ಲೈನ್​ ವಾರಿಯರ್ಸ್​ ಎಂದು ಪರಿಗಣಿಸಿ, ವಿಮಾ ಸೌಲಭ್ಯ ನೀಡಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

(first Kisan train in state was driven today and train left Chikkaballapur to Delhi)

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು