‘ಸಾರ್ ನಾನು ಯಲ್ಲಮ್ಮ ದೇವರ ಆರಾಧಕ ನನ್ನ ಬೈಕ್ ಬಿಟ್ಟುಬಿಡಿ’ ಪೊಲೀಸರ ಬಳಿ ಕೈ ಮುಗಿದು ಕಣ್ಣೀರು ಹಾಕಿದ ಸವಾರ

ಗದಗ ನಗರದ ಹಳೇ ಡಿಸಿ ಆಫೀಸ್ ಸರ್ಕಲ್ ಬಳಿ ಪೊಲೀಸರಿಂದ ವಾಹನ ತಪಾಸಣೆ ನಡೆಯುತ್ತಿದೆ. ಈ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯನ್ನು ನಿಲ್ಲಿಸಿ ಪೊಲೀಸರು ದಾಖಲೆ ಪರಿಶೀಲಿಸಿದ್ದರು. ಆದರೆ ಸೂಕ್ತವಾದ ದಾಖಲೆಗಳು ಇಲ್ಲದಿದ್ದಕ್ಕೆ ಬೈಕ್ ಸೀಜ್ ಮಾಡಿದ್ದರು. ಆಗ ಕೈ ಮುಗಿಯುತ್ತೇನೆ ದಯಮಾಡಿ ನನ್ನ ಬೈಕ್ ಬಿಟ್ಟುಬಿಡಿ. ನಾನು ದೇವರ ಆರಾಧಕ ಸುಳ್ಳು ಹೇಳಲ್ಲ ಎಂದು ಬೈಕ್ ಸವಾರ ಕಣ್ಣೀರು ಹಾಕಿದ್ದಾನೆ.

‘ಸಾರ್ ನಾನು ಯಲ್ಲಮ್ಮ ದೇವರ ಆರಾಧಕ ನನ್ನ ಬೈಕ್ ಬಿಟ್ಟುಬಿಡಿ’ ಪೊಲೀಸರ ಬಳಿ ಕೈ ಮುಗಿದು ಕಣ್ಣೀರು ಹಾಕಿದ ಸವಾರ
ಪೊಲೀಸರ ಬಳಿ ಕೈ ಮುಗಿದು ಕಣ್ಣೀರು ಹಾಕಿದ ಸವಾರ

ಗದಗ: ಕೊರೊನಾದ ಎರಡನೇ ಅಲೆ ಪ್ರಭಾವ ಹೆಚ್ಚಾಗಿದ್ದು ಇದರ ನಿಯಂತ್ರಣಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಲಾಕ್ಡೌನ್ ಹೇರಲಾಗಿದೆ. ರಸ್ತೆಯಲ್ಲಿ ಸುಖಾಸುಮ್ಮನೆ ಓಡಾಡುವವರಿಗೆ ಖಾಕಿ ಬಿಸಿ ಮುಟ್ಟಿಸುತ್ತಿದೆ. ಇದರ ನಡುವೆ ಗದಗದಲ್ಲಿ ಯಲ್ಲಮ್ಮ ದೇವರ ಆರಾಧಕ ತನ್ನ ಬೈಕ್ ಹಿಂಪಡೆಯಲು ಕಣ್ಣೀರು ಹಾಕಿದ ಘಟನೆ ನಡೆದಿದೆ.

ಗದಗ ನಗರದ ಹಳೇ ಡಿಸಿ ಆಫೀಸ್ ಸರ್ಕಲ್ ಬಳಿ ಪೊಲೀಸರಿಂದ ವಾಹನ ತಪಾಸಣೆ ನಡೆಯುತ್ತಿದೆ. ಈ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯನ್ನು ನಿಲ್ಲಿಸಿ ಪೊಲೀಸರು ದಾಖಲೆ ಪರಿಶೀಲಿಸಿದ್ದರು. ಆದರೆ ಸೂಕ್ತವಾದ ದಾಖಲೆಗಳು ಇಲ್ಲದಿದ್ದಕ್ಕೆ ಬೈಕ್ ಸೀಜ್ ಮಾಡಿದ್ದರು. ಆಗ ಕೈ ಮುಗಿಯುತ್ತೇನೆ ದಯಮಾಡಿ ನನ್ನ ಬೈಕ್ ಬಿಟ್ಟುಬಿಡಿ. ನಾನು ದೇವರ ಆರಾಧಕ ಸುಳ್ಳು ಹೇಳಲ್ಲ ಎಂದು ಬೈಕ್ ಸವಾರ ಕಣ್ಣೀರು ಹಾಕಿದ್ದಾನೆ. ಬೈಕ್ ರಿಪೇರಿ ಮಾಡಿಸಲು ಬಂದಿದ್ದೇ ಬೈಕ್ ಬಿಡಿ. ಜಮೀನಿನಲ್ಲಿ ಬಿತ್ತನೆ ಮಾಡಬೇಕು. ನಾನು ಯಲ್ಲಮ್ಮ ದೇವರ ಆರಾಧಕ. ನಾನು ದೇವರನ್ನು ಹೊತ್ತಿದ್ದೇನೆ ಸುಳ್ಳು ಹೇಳೋದಿಲ್ಲ ಎಂದು ಪೊಲೀಸರಿಗೆ ಕೈ ಮುಗಿದು ಬೇಡಿಕೊಂಡ ಘಟನೆ ನಡೆದಿದೆ.

ಇನ್ನು ಹಾವೇರಿಯಲ್ಲಿ ಪ್ರೆಸ್ ಮತ್ತು ಪೊಲೀಸ್ ಅಂತಾ ಸ್ಟಿಕರ್ ಹಾಕ್ಕೊಂಡು ಹೋಗ್ತಿದ್ದ ಒಂದು ಕಾರ್ ಮತ್ತು ಒಂದು ಬೈಕ್ ಸೀಜ್ ಮಾಡಲಾಗಿದೆ. ಹಾವೇರಿ‌ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಘಟನೆ ನಡೆದಿದೆ. ಗಾರೆ ಕೆಲಸಕ್ಕೆ ಹೋಗ್ತಿದ್ದ ಐವರು ಕಾರಿಗೆ ಪ್ರೆಸ್ ಅಂತಾ ಹಾಕಿಕೊಂಡು ಹೋಗ್ತಿದ್ರು. ಹಾಗೂ ಬೇರೆ ಜಿಲ್ಲೆಯಲ್ಲಿ ಪೊಲೀಸ್ ಆಗಿದ್ದವರ ಸಂಬಂಧಿಯೊಬ್ಬ ಬೈಕ್ಗೆ ಪೊಲೀಸ್ ಅಂತಾ ಹಾಕ್ಕೊಂಡು ಹೋಗ್ತಿದ್ದ. ಪ್ರೆಸ್ ಮತ್ತು ಪೊಲೀಸ್ ಅಂತಾ ಸ್ಟಿಕರ್ ಬಳಸಿದ್ದವರ ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ. ಸಿಪಿಐ ಪ್ರಹ್ಲಾದ ಚನ್ನಗಿರಿ ಮತ್ತು ಸಂತೋಷ ಪವಾರ ನೇತೃತ್ವದಲ್ಲಿ ವಾಹನಗಳು ಸೀಜ್ ಆಗಿವೆ.

gadag Bike

ಪೊಲೀಸರ ಬಳಿ ಕೈ ಮುಗಿದು ಕಣ್ಣೀರು ಹಾಕಿದ ಸವಾರ

ಇದನ್ನೂ ಓದಿ: ‘ನನ್ನ ಕೋಳಿಗೆ ಮಲ ಬದ್ಧತೆ ಸಮಸ್ಯೆ’ ಚಿಕಿತ್ಸೆಗೆಂದು ಹೊರಬಂದೆ, ಲಾಕ್​ಡೌನ್​ ಉಲ್ಲಂಘಿಸಿದ್ದಕ್ಕೆ ಕಾರಣ ಹೇಳಿದ ಗದಗ ವ್ಯಕ್ತಿ; ವಿಡಿಯೋ ವೈರಲ್