ಹೆತ್ತ ಮಗುವನ್ನು ಕೊಂದಿದ್ದ ತಂದೆಗೆ ಮರಣದಂಡನೆ ಶಿಕ್ಷೆ ನೀಡಿದ ಗದಗ ನ್ಯಾಯಾಲಯ

ಹೆತ್ತ ಮಗುವನ್ನೇ ಕೊಂದಿದ್ದ ಪಾಪಿ ತಂದೆಗೆ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶ ರಾಜಶೇಖರ ವಿ ಪಾಟೀಲ್, ಅಪರಾಧಿ ಪ್ರಶಾಂತಗೌಡ ಪಾಟೀಲ್‌ಗೆ ಮರಣದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.

  • TV9 Web Team
  • Published On - 9:37 AM, 19 Feb 2021
ಹೆತ್ತ ಮಗುವನ್ನು ಕೊಂದಿದ್ದ ತಂದೆಗೆ ಮರಣದಂಡನೆ ಶಿಕ್ಷೆ ನೀಡಿದ ಗದಗ ನ್ಯಾಯಾಲಯ
ಮಗು ಕೊಂದ ಪಾಪಿ ತಂದೆ ಅಪರಾಧಿ ಪ್ರಶಾಂತಗೌಡ ಪಾಟೀಲ್​ನನ್ನು ಕರೆದುಕೊಂಡು ಹೋಗುತ್ತಿರುವ ಪೊಲೀಸರು

ಗದಗ: ಹೆತ್ತ ಮಗುವನ್ನೇ ಕೊಂದಿದ್ದ ಪಾಪಿ ತಂದೆಗೆ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶ ರಾಜಶೇಖರ ವಿ ಪಾಟೀಲ್, ಅಪರಾಧಿ ಪ್ರಶಾಂತಗೌಡ ಪಾಟೀಲ್‌ಗೆ ಮರಣದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ. ಏನು ಅರಿಯದ ಒಂದೂವರೆ ವರ್ಷದ ಪುಟ್ಟ ಮಗುವನ್ನು ಈ ಪಾಪಿ ತಂದೆಯೆಂದೂ ಲೆಕ್ಕಿಸದೆ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ. ಸದ್ಯ ಈತನ ಈ ಕೃತ್ಯಕ್ಕೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ನೀಡಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರ ಗ್ರಾಮದ ನಿವಾಸಿ ಅಪರಾಧಿ ಪ್ರಶಾಂತಗೌಡ ಪ್ರೀತಿ ಹೆಸರಲ್ಲಿ ಮಹಿಳೆಯನ್ನು ನಂಬಿಸಿ ಮದುವೆಯಾಗಿದ್ದ. ಇವರಿಬ್ಬರ ಪ್ರೀತಿ ಫಲವಾಗಿ ಮಗುವಿನ ಜನನವಾಗಿತ್ತು. ಆದ್ರೆ ಈ ವೇಳೆಗಾಗಲೇ ಪ್ರಶಾಂತಗೌಡನಿಗೆ ಮಗು ಮತ್ತು ಹೆಂಡತಿ ಬೇಡವಾಗಿದ್ದರು. ಆತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿ ದೋಖ ಮಾಡಿದ್ದ. ಇದನ್ನು ಅರಿತ ಬಳಿಕ ನೊಂದ ಮಹಿಳೆ ಜೀವನಾಂಶ ಬೇಡಿ‌ ಕೋರ್ಟ್ ಮೊರೆ ಹೋಗಿದ್ದರು.

2015ರ ಏಪ್ರಿಲ್ 6ರಂದು ಪ್ರಶಾಂತಗೌಡ ತನ್ನ ಸ್ವಂತ ಮಗುವನ್ನೇ ಅಪಹರಿಸಿದ್ದ. ಏನು ತಿಳಿಯದ ಒಂದೂವರೆ ವರ್ಷದ ಪುಟ್ಟ ಮಗುವನ್ನು ಅಪಹರಿಸಿ ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕತ್ತುಹಿಸುಕಿ ಹತ್ಯೆ ಮಾಡಿ ಬಳಿಕ ಮೃತದೇಹ ಸುಟ್ಟುಹಾಕಿದ್ದ. ಪ್ರಕರಣ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಹಳಷ್ಟು ವಿಚಾರಣೆಗಳ ಬಳಿಕ ಸದ್ಯ ಫೆಬ್ರವರಿ 18 ರಂದು ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶ ರಾಜಶೇಖರ ವಿ ಪಾಟೀಲ್ ಮರಣದಂಡನೆಯ ತೀರ್ಪು ನೀಡುವ ಮೂಲಕ ಪಾಪಿ ತಂದೆ ಮಾಡಿದ ಪಾಪಾದ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಿದೆ. ಆದ್ರೆ ನೊಂದ ಮಹಿಳೆ ಮಗುವನ್ನೂ ಕಳೆದುಕೊಂಡು ಜೀವನದಲ್ಲಿ ನೆಮ್ಮದಿ ಇಲ್ಲದೆ ಕಣ್ಣೀರು ಹಾಕುತ್ತಿದ್ದಾರೆ.

Father executed for killing baby

ಅಪರಾಧಿ ಪ್ರಶಾಂತಗೌಡ ಪಾಟೀಲ್‌

ಇದನ್ನೂ ಓದಿ:
ಹಳೇ ದ್ವೇಷ: 6ವರ್ಷದ ದೊಡ್ಡಪ್ಪನ ಮಗನನ್ನೇ ಕೊಂದು, ಕಿರಾತಕ ಪರಾರಿ

ಹೆಣ್ಣು ಮಗು ಎಂಬ ಒಂದೇ ಕಾರಣಕ್ಕೆ.. ತನ್ನ 8 ತಿಂಗಳ ಕೂಸನ್ನು ಬರ್ಬರವಾಗಿ ಕೊಂದ ವಕೀಲ

ಮೈಸೂರಲ್ಲಿ ಮಗುವನ್ನ ಮೋರಿಗೆಸೆದ ಹೆಮ್ಮಾರಿ: ಕೋಲಾರದಲ್ಲಿ ಹೆತ್ತವರಿಂದ್ಲೇ ಕೊಲೆ ಶಂಕೆ!