ಗದಗ: ಸವರ್ಣಿಯರು ದಲಿತ ಕುಟುಂಬಗಳನ್ನು ಬಹಿಷ್ಕಾರ ಹಾಕಿರುವಂತಹ ಘಟನೆ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ಕಂಡುಬಂದಿದೆ. ಅಲ್ಲಿಗೆ ಜಿಲ್ಲೆಯಲ್ಲಿ ಅನಿಷ್ಠ ಪದ್ಧತಿ (Untouchability) ಇನ್ನೂ ಜೀವಂತವಾಗಿದೆ. ದೇವಸ್ಥಾನ, ಕಿರಾಣಿ ಶಾಪ್, ಹೊಟೇಲ್ಗಳಿಗೆ ನೋ ಎಂಟ್ರಿ. ಕಿರಾಣಿ ಅಂಗಡಿಗೆ ಹೋದ್ರು ಮಾಲೀಕರು ಯಾವುದೇ ವಸ್ತು ನೀಡುತ್ತಿಲ್ಲ. ಯಾಕೆ ಕೊಡಲ್ಲ ಅಂತ ಪ್ರಶ್ನೆ ಮಾಡಿದಕ್ಕೆ ವಾಗ್ವಾದ ನಡೆದಿದೆ. ನಿಮಗೆ ಏನಾದ್ರೂ ಕೊಟ್ರೆ ದಂಡ ಹಾಕ್ತಾರೆ ಎಂದು ಅಂಗಡಿಕಾರರು ಹೇಳುತ್ತಿದ್ದಾರೆ. ಸದ್ಯ ದಲಿತರಿಗೆ ಅಂಗಡಿಕಾರರು ವಸ್ತುಗಳನ್ನು ನೀಡಲು ನಿರಾಕರಿಸಿರುವಂತಹ ಒಂದು ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: Gadag: ನಿವೃತ್ತ ಯೋಧ ಅಂತಾನೂ ನೋಡದೆ ಎದೆಗೂಡು ಮುರಿದಿದ್ದಾರೆ ನೆರೆಮನೆಯವರು, ಅಸಲಿ ವಿಷಯ ಏನು?
ಇನ್ನು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ರೂ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಗ್ರಾಮಕ್ಕೆ ಬಂದಿಲ್ಲ. ಘಟನೆ ನಡೆದು 24 ಗಂಟೆ ಕಳದರೂ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ತೋರಿಸಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಒಂದು ವೇಳೆ ದಲಿತ ಕುಟುಂಬಗಳಿಗೆ ಏನಾದರೂ ನೀಡಿದ್ರೆ 2500 ರೂ. ದಂಡ ಹಾಕುತ್ತಾರೆ ಎಂದು ಅಂಗಡಿಕಾರರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಗದಗ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಂತೆ! ಆದರೆ ಪರಿಸ್ಥಿತಿ ಹಾಗಿಲ್ಲ, ಜಿಪಂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ
ಇದು ಒಂದೆರಡು ದಿನದ ಘಟನೆ ಅಲ್ಲ. ಸುಮಾರು ದಿನಗಳಿಂದ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಗ್ರಾಮದಲ್ಲಿ ಹೆಚ್ಚಾಗಿದೆ. ಬಿಸ್ಕತ್ತು, ಚಾಕೊಲೇಟ್ ಕೂಡ ನೀಡುತ್ತಿಲ್ಲ ಅಂತ ದಲಿತ ಕುಟುಂಬಳು ಆರೋಪ ಮಾಡಿದ್ದಾರೆ. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಹೋದಾಗ ದಲಿತ ಯುವಕರು ತಹಶೀಲ್ದಾರ ಗಮನಕ್ಕೆ ತಂದಿದ್ದಾರೆ. ದುಡಿಮೆಯೂ ಇಲ್ಲ, ರೇಷನ ಕೂಡ ನೀಡುತ್ತಿಲ್ಲ ಅಂತ ಗೋಳಾಡುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ನಿರ್ಮಾಣವಾಗಿದ್ದು, ಸಮಾನತೆ ನೀಡುವಂತೆ ದಲಿತ ಕುಟುಂಬಗಳು ಒತ್ತಾಯ ಮಾಡುತ್ತಿದ್ದಾರೆ. ತಹಶೀಲ್ದಾರ ನೇತೃತ್ವದಲ್ಲಿ ಇನ್ನೊಂದು ಭಾರಿ ಶಾಂತಿ ಸಭೆ ಮಾಡುವುದಾಗಿ ನಿರ್ಧಾರ ಮಾಡಲಾಗಿದೆ. ಸದ್ಯ ಗ್ರಾಮದಲ್ಲಿ ಪೊಲೀಸರು ಬಿಡುಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.