Cheating ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸೋದಾಗಿ ನಂಬಿಸಿ.. ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ಐನಾತಿ ಡೈರೆಕ್ಟರ್!

Cheating: ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸುವುದಾಗಿ ಹೇಳಿ ಕಿಲಾಡಿಯೊಬ್ಬ ನಾಲ್ವರು ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ್ದಾನೆ. ಬೆಂಗಳೂರು ಮೂಲದ ಪ್ರವೀಣ್ ಗೌಡ ಎಂಬ ನಕಲಿ ಡೈರೆಕ್ಟರ್​ನಿಂದ ಮೋಸ ನಡೆದಿದೆ.

  • TV9 Web Team
  • Published On - 21:06 PM, 15 Feb 2021
Cheating ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸೋದಾಗಿ ನಂಬಿಸಿ.. ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ಐನಾತಿ ಡೈರೆಕ್ಟರ್!
ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ನಕಲಿ ಡೈರೆಕ್ಟರ್ ಪ್ರವೀಣ್​ ಗೌಡ

ಗದಗ: ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸುವುದಾಗಿ ಹೇಳಿ ಕಿಲಾಡಿಯೊಬ್ಬ ನಾಲ್ವರು ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ್ದಾನೆ. ಬೆಂಗಳೂರು ಮೂಲದ ಪ್ರವೀಣ್ ಗೌಡ ಎಂಬ ನಕಲಿ ಡೈರೆಕ್ಟರ್​ನಿಂದ ಮೋಸ ನಡೆದಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ ಮಂಜುಳಾ ಎಂಬುವವರಿಗೆ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಪ್ರವೀಣ್​ ಗೌಡ ವಂಚನೆ ಮಾಡಿದ್ದಾನೆ.

ಏನಿದು ಪ್ರಕರಣ?
ಸ್ಫೂರ್ತಿ ಎಂಬ ಧಾರಾವಾಹಿಯಲ್ಲಿ ಚಾನ್ಸ್​ ಕೊಡಿಸುವುದಾಗಿ ನಂಬಿಸಿ ಮಂಜುಳಾ ಸೇರಿ ಬೈಲಹೊಂಗಲದ 3 ಮಹಿಳೆಯರಿಗೆ ಪ್ರವೀಣ್​ ಗೌಡ ವಂಚಿಸಿದ್ದಾನೆ. ಒಬ್ಬೊಬ್ಬರಿಂದ ವಂಚಕ ಪ್ರವೀಣ್​ ಬರೋಬ್ಬರಿ 12 ಸಾವಿರ ರೂ. ವಸೂಲಿ ಮಾಡಿದ್ದಾನೆ. ಬೆಳಗಾವಿ ಮೂಲದ ಭಾರತಿ ಎಂಬುವವರ ಮೂಲಕ ಪರಿಚಯವಾದ ಈ ಕಿಲಾಡಿ ಇದೀಗ ಎಲ್ಲರಿಗೆ ಮೋಸ ಮಾಡಿದ್ದಾನೆ.

ಈ ನಡುವೆ, ಸೀರಿಯಲ್​ನಲ್ಲಿ ಌಕ್ಟಿಂಗ್​ ಚಾನ್ಸ್​ ಸಿಗುತ್ತೆ ಅಂತಾ ಮಂಜುಳಾ ತನ್ನ ಒಡವೆ ಅಡವಿಟ್ಟು ಹಣ ಕೊಟ್ಟಿದ್ದಾರಂತೆ. ಹಣ ಪಡೆದ ನಂತರ ಆಸಾಮಿ ಅಡ್ರೆಸ್​ಗೆ ಸಿಗದಿದ್ದಾಗ ಮಹಿಳೆಯರು ಕಂಗಾಲು. ಇತ್ತ ಧಾರಾವಾಹಿಯ ಶೂಟಿಂಗ್ ಇಲ್ಲ ಅತ್ತ ಕೊಟ್ಟ ಹಣದ ಸುಳಿವೂ ಇಲ್ಲ!

ಅಷ್ಟೇ ಇಲ್ಲ, ಈ ನಕಲಿ ಡೈರೆಕ್ಟರ್​ ಹಲವು ಕಡೆ ಇದೇ ರೀತಿ ಸ್ಕೆಚ್ ಹಾಕಿ ಬಹಳಷ್ಟು ಜನರಿಗೆ ವಂಚಿಸಿದ್ದಾನೆ. ಮಕ್ಕಳಿಗೆ ಸಹ ಧಾರಾವಾಹಿಯಲ್ಲಿ ಪಾತ್ರ ಕೊಡಿಸುವುದಾಗಿ ನಂಬಿಸಿ ಅವರ ಪೋಷಕರ ಬಳಿ ದುಡ್ಡು ಪೀಕಿಸಿದ್ದಾನೆ.

ಇದನ್ನೂ ಓದಿ: Bribe 2 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ED ಅಧಿಕಾರಿ CBI ವಶಕ್ಕೆ