ಪ್ರವಾದಿ ಮೊಹಮದ್ ಪೈಗಂಬರ್ ಬಗ್ಗೆ ಪ್ರಬಂಧ ಸ್ಪರ್ಧೆ: ಶಾಲೆಗೆ ನುಗ್ಗಿದ ಶ್ರೀರಾಮಸೇನೆ ಕಾರ್ಯಕರ್ತರಿಂದ ವಿರೋಧ

ಮೊಹ್ಮದ್​ ಪೈಗಂಬರರ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿದಕ್ಕೆ ಶ್ರೀರಾಮ ಸೇನೆ ಕಾರ್ಯಕರ್ತರು ಶಾಲೆಗೆ ನುಗ್ಗಿ ಶಾಲೆ ಹೆಡ್​ಮಾಸ್ಟರ್​ಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಪ್ರವಾದಿ ಮೊಹಮದ್ ಪೈಗಂಬರ್ ಬಗ್ಗೆ ಪ್ರಬಂಧ ಸ್ಪರ್ಧೆ: ಶಾಲೆಗೆ ನುಗ್ಗಿದ ಶ್ರೀರಾಮಸೇನೆ ಕಾರ್ಯಕರ್ತರಿಂದ ವಿರೋಧ
ಗದಗ ತಾಲ್ಲೂಕಿನ ನಾಗಾವಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 27, 2022 | 2:04 PM

ಗದಗ: ಇಸ್ಲಾಂ ಧರ್ಮ ಪ್ರವರ್ತಕ ಪ್ರವಾದಿ ಮೊಹಮದ್ ಪೈಗಂಬರ್  (Prophet Mohammad Paigambar) ಅವರ ಬಗ್ಗೆ ಶಾಲೆಯೊಂದರಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದು ಶ್ರೀರಾಮಸೇನೆ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಜಿಲ್ಲೆಯ ನಾಗಾವಿ ಪ್ರೌಢಶಾಲೆಯಲ್ಲಿ ಪ್ರವಾದಿ ಪೈಗಂಬರರ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ  ಕಾರ್ಯಕರ್ತರು, ‘ಪಠ್ಯದಲ್ಲಿ ಇಲ್ಲದ ವಿಷಯದ ಬಗ್ಗೆ ಪ್ರಬಂಧ ಬರೆಯಲು ಸೂಚಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

‘ಶಾಲೆಯ ಮುಖ್ಯ ಶಿಕ್ಷಕರಾಗಿರುವ ಎ.ಎಲ್.ಬಿಜಾಪುರ ಅವರು ಪೈಗಂಬರ್ ಅವರಿಗೆ ಸಂಬಂಧಿಸಿದ ಪುಸ್ತಕವೊಂದನ್ನು 8ನೇ ತರಗತಿ ಮಕ್ಕಳಿಗೆ ಕೊಟ್ಟು ಓದಲು ಪ್ರೇರೇಪಿಸಿದ್ದರು. ನಂತರ ಪ್ರಬಂಧ ಬರೆಯುವಂತೆ ಮಕ್ಕಳಿಗೆ ಸೂಚಿಸಿದ್ದರು. ಉತ್ತಮ ಪ್ರಬಂಧಕ್ಕೆ ₹ 8 ಸಾವಿರ ಬಹುಮಾನ ನೀಡುವುದಾಗಿ ಹೇಳಿದ್ದರು. ಇಂಥ ಪ್ರಯತ್ನಗಳ ಮೂಲಕ ಮಕ್ಕಳನ್ನು ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಕಾರ್ಯಕರ್ತರು ದೂರಿದರು. ಸ್ಥಳಕ್ಕೆ ಜಿಪಂ ಸಿಇಒ ಹಾಗೂ ಡಿಡಿಪಿಐ ಬರಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಹಿಂದಿನ ಸಿಮಿ ಸಂಘಟನೆಯೇ ಈಗ ಪಿ ಎಫ್ ಐ ಆಗಿ ಪರಿವರ್ತನೆಯಾಗಿದೆ, ಅದನ್ನು ಕೂಡಲೇ ಬ್ಯಾನ್ ಮಾಡಬೇಕು: ಬಸನಗೌಡ ಪಾಟೀಲ ಯತ್ನಾಳ್

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada