ಅಶ್ಲೀಲ ವಿಡಿಯೋ ವೈರಲ್, ಗದಗದಲ್ಲಿ ಮಾಜಿ ಶಾಸಕನ ಅಳಿಯ ಜೈಲಿಗೆ

  • TV9 Web Team
  • Published On - 14:07 PM, 27 Nov 2019
ಅಶ್ಲೀಲ ವಿಡಿಯೋ ವೈರಲ್, ಗದಗದಲ್ಲಿ ಮಾಜಿ ಶಾಸಕನ ಅಳಿಯ ಜೈಲಿಗೆ

ಗದಗ: ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕರೊಬ್ಬರ ಅಳಿಯನನ್ನ ರೋಣ ಪೊಲೀಸರು ಬಂಧಿಸಿದ್ದಾರೆ. ಉದಯ ದೇಸಾಯಿ ಬಂಧಿತ ವ್ಯಕ್ತಿ.

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದಾರೆ ಅಂತಾ ರೋಣ ಪಟ್ಟಣದ ನಿವಾಸಿ ಮಂಜುನಾಥ್ ದೂರು ನೀಡಿದ ಹಿನ್ನೆಲೆಯಲ್ಲಿ ಉದಯ ದೇಸಾಯಿ ಬಂಧನವಾಗಿದೆ. ಉದಯ ದೇಸಾಯಿ, ಗದಗ ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದವರು. ಪ್ರಕರಣದ ಸಂಬಂಧ ಪೊಲೀಸರು ಅವರನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ರೋಣ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.