ಕೌಟುಂಬಿಕ ಕಲಹ; ಹಾಸನದಲ್ಲಿ ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆ ಹತ್ಯೆ

ಶ್ರೀಧರ್ ಎಂಬಾತ ತನ್ನ ಹೆಂಡತಿ ಹಾಗು ಅತ್ತೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಪ್ರಕರಣ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಎಸ್​ಪಿ ಶ್ರೀನಿವಾಸಗೌಡ, ಸಿಪಿಐ ವಸಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೌಟುಂಬಿಕ ಕಲಹ; ಹಾಸನದಲ್ಲಿ ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆ ಹತ್ಯೆ
ಕೊಲೆಯಾದ ಭಾರತಿ ಮತ್ತು ಮಂಜುಳಾ

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ಪತ್ನಿ ಮತ್ತ ಅತ್ತೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಸಂಭವಿಸಿದೆ. 30 ವರ್ಷದ ಪತ್ನಿ ಮಂಜುಳಾ, 55 ವರ್ಷದ ಅತ್ತೆ ಭಾರತಿ ಕೊಲೆಯಾದವರು. ನಿನ್ನೆ (ಜೂನ್ 14) ಜಮೀನಿನ ಬಳಿ ಕೆಲಸ ಮಾಡುತ್ತಿದ್ದ ವೇಳೆ ಗಲಾಟೆಯಾಗಿದೆ. ಆಗ ಶ್ರೀಧರ್ ಎಂಬಾತ ತನ್ನ ಹೆಂಡತಿ ಹಾಗು ಅತ್ತೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಪ್ರಕರಣ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಎಸ್​ಪಿ ಶ್ರೀನಿವಾಸಗೌಡ, ಸಿಪಿಐ ವಸಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶ್ರೀಧರ್​ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಸೋಂಕಿತನಿಂದ ಆತ್ಮಹತ್ಯೆಗೆ ಯತ್ನ

ದಾವಣಗೆರೆ: ಕೊವಿಡ್ ಕೇರ್ ಸೆಂಟರ್​ಗೆ ಹೋಗಲು ಸೋಂಕಿತನೊಬ್ಬ ನಿರಾಕರಿಸಿದ್ದು, ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳದಲ್ಲಿ ಇದ್ದ ಆರೋಗ್ಯ ಇಲಾಖೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮಕ್ಕೆ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಕ್ವಾರಂಟೈನ್​ಗೆ ಕರೆತರಲು ಹೋದಾಗ ಈ ಘಟನೆ ನಡೆದಿದೆ.

ಒಂದೇ ಮನೆಯಲ್ಲಿ ಮೂರು ಜನಕ್ಕೆ ಕೊರೊನಾ ಸೋಂಕು ದೃಢವಾಗಿತ್ತು. ಈ ವೇಳೆ ಸೋಂಕಿತ ವ್ಯಕ್ತಿ, ಪುತ್ರ ಹಾಗೂ ಸೊಸೆಯನ್ನು ಬೇರೆ ಕಡೆ ಕಳುಹಿಸಿ ತಾನೊಬ್ಬನೆ ಇದ್ದ. ನಿಮಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಕ್ವಾರಂಟೈನ್​ಗೆ ನಡೆಯಿರಿ ಎಂದು ಹೇಳಿದಾಗ ನನಗೆ ಎನು ಆಗಿಲ್ಲ ಅಂತ ಮನೆಯ ಒಳಗೆ ಓಡಿ ಹೋಗಿ ವಿಷದ ಬಾಟಲ್ ತಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಕೈಯಲ್ಲಿನ ಬಾಟಲ್ ಪಡೆದು ಸಮಾಧಾನ ಹೇಳಿದ ಆರೋಗ್ಯ ಇಲಾಖೆ ಸಿಬ್ಬಂದಿ ವಾಪಾಸ್ಸಾಗಿದ್ದಾರೆ.

ಇದನ್ನೂ ಓದಿ

ವೈದ್ಯನ ಕಳ್ಳಾಟ ಬಯಲು; ಸರ್ಕಾರಿ ಆಸ್ಪತ್ರೆಯ ದಾಖಲಾತಿಯಲ್ಲಿ ಸಹಿ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ

ಕೊವಿಡ್​ನಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುವ ಪರಿಹಾರವನ್ನು 1 ಲಕ್ಷದಿಂದ 5 ಲಕ್ಷ ರೂಪಾಯಿಗೆ ಏರಿಸಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ