ಹಾಸನದಲ್ಲಿ ಶಿಷ್ಟಾಚಾರ ಪಕ್ಕಕ್ಕಿಟ್ಟು ಹೆಚ್ ಡಿ ರೇವಣ್ಣಗೆ ಪಕ್ಕ ಕೂಡಿಸಿಕೊಂಡು, ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ

BS Yediyurappa: ಹಾಸನ ಏರ್​ಪೋರ್ಟ್​ ಕಾಮಗಾರಿ ಬೇಗ ಶುರು ಮಾಡ್ತೇವೆ. ಇದರ ಬಗ್ಗೆ ಹೆಚ್.ಡಿ. ದೇವೇಗೌಡರ ಜತೆ ಚರ್ಚಿಸಿ ತೀರ್ಮಾನ ಮಾಡ್ತೇವೆ. ಏರ್​ಪೋರ್ಟ್​ ನಿರ್ಮಾಣ ಕಾಮಗಾರಿಗೆ ಹಣದ ಕೊರತೆಯಿಲ್ಲ. ಹಾಗಾಗಿ ಶೀಘ್ರದಲ್ಲೇ ಕೆಲಸ ಆರಂಭಿಸಲು ಆದ್ಯತೆ ನೀಡುತ್ತೇವೆ ಎಂದು ಹಾಸನ ಜಿಲ್ಲಾಡಳಿತದ ಜತೆ ಸಭೆ ಬಳಿಕ ಸಿಎಂ ಯಡಿಯೂರಪ್ಪ ಹೇಳಿದರು.

ಹಾಸನದಲ್ಲಿ ಶಿಷ್ಟಾಚಾರ ಪಕ್ಕಕ್ಕಿಟ್ಟು ಹೆಚ್ ಡಿ ರೇವಣ್ಣಗೆ ಪಕ್ಕ ಕೂಡಿಸಿಕೊಂಡು, ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ
ಶಿಷ್ಟಾಚಾರ ಪಕ್ಕಕ್ಕಿಟ್ಟು ಹೆಚ್ ಡಿ ರೇವಣ್ಣಗೆ ಪಕ್ಕ ಕೂಡಿಸಿಕೊಂಡು, ಸಭೆ ನಡೆಸಿದ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ

ಹಾಸನ: ರಾಜ್ಯದ ಮುಖ್ಯಮಂತ್ರಿಯ ಶಿಷ್ಟಾಚಾರವನ್ನು ಲೆಕ್ಕಿಸದೆ ಜೆಡಿಎಸ್ ನಾಯಕನನ್ನು ಜೊತೆಯಲ್ಲಿಯೇ ಕೂರಿಸಿಕೊಂಡು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಇಂದು ಮೀಟಿಂಗ್​ ನಡೆಸಿದರು. ಹಾಸನದ ಜಿಲ್ಲಾ ಪಂ‌ಚಾಯತ್​ ಹೊಯ್ಸಳ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾಜಿ ಸಚಿವ, ಸ್ಥಳೀಯ ಪ್ರಭಾವೀ ನಾಯಕ ಹೆಚ್ ಡಿ​ ರೇವಣ್ಣರನ್ನ ಜೊತೆಯಲ್ಲಿ ಕೂರಿಸಿಕೊಂಡು ಅಧಿಕಾರಿಗಳ ಮೀಟಿಂಗ್​ ನಡೆಸಿದರು. ಹಿರಿಯ ಶಾಸಕ ಅನ್ನೋ ಕಾರಣಕ್ಕೆ ವೇದಿಕೆ ಮೇಲೆ ಕರೆಸಿದ ಸಿಎಂ ಯಡಿಯೂರಪ್ಪ ಅವರು ಶಿಷ್ಟಾಚಾರ ಪಕ್ಕಕ್ಕಿಟ್ಟು ರೇವಣ್ಣಗೆ ಗೌರವ ನೀಡಿದರು. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ, ಅರೋಗ್ಯ ಸಚಿವ ಸುಧಾಕರ್‌ ಜೊತೆಗೆ ಮಾಜಿ ಸಚಿವ ರೇವಣ್ಣಗೂ ವೇದಿಕೆಯಲ್ಲಿ ಸ್ಥಾನ ಕಲ್ಪಿಸಲಾಗಿತ್ತು.

ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಹಾಸನ ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಕೆಲಸ ಆಗಬೇಕಿದೆ. ರೇವಣ್ಣರ ಜೊತೆ ಚರ್ಚೆ ಮಾಡಿ ಹಂತ ಹಂತವಾಗಿ ಎಲ್ಲಾ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.

ಹಾಸನ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹಾಸನಕ್ಕೆ ಭೇಟಿ ನೀಡಿದರು. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಸಭೆ ನಡೆಸಿ, ಕೊರೊನಾ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಿದರು. ಬಳಿಕ ಹೆಲಿಕಾಪ್ಟರ್ ಮೂಲಕ ಶಿಕಾರಿಪುರಕ್ಕೆ ಹೊರಟರು. ನಾಳೆ ಶಿವಮೊಗ್ಗ ಜಿಲ್ಲಾಡಳಿತದ ಜೊತೆ ಸಭೆ ನಡೆಸುತ್ತೇನೆ ಎಂದು ಇದೇ ವೇಳೆ ಸಿಎಂ ಯಡಿಯೂರಪ್ಪ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಹಾಸನ ಜಿಲ್ಲೆಯ ಎಲ್ಲಾ ಶಾಸಕರು ಸಲಹೆ ನೀಡಿದ್ದಾರೆ. ಶೀಘ್ರದಲ್ಲೇ ಕೊವಿಡ್ ರೇಟ್ ಶೇಕಡಾ 5ಕ್ಕೆ ಇಳಿಸಲು ಶ್ರಮ ವಹಿಸಲಿದ್ದಾರೆ. ಹಾಸನ ಏರ್​ಪೋರ್ಟ್​ ಕಾಮಗಾರಿ ಬೇಗ ಶುರು ಮಾಡ್ತೇವೆ. ಇದರ ಬಗ್ಗೆ ಹೆಚ್.ಡಿ. ದೇವೇಗೌಡರ ಜತೆ ಚರ್ಚಿಸಿ ತೀರ್ಮಾನ ಮಾಡ್ತೇವೆ. ಯಾರಿಂದ ಕೆಲಸ ಆಗಬೇಕೆಂದು ತೀರ್ಮಾನ ಮಾಡುತ್ತೇವೆ. ಏರ್​ಪೋರ್ಟ್​ ನಿರ್ಮಾಣ ಕಾಮಗಾರಿಗೆ ಹಣದ ಕೊರತೆಯಿಲ್ಲ. ಹಾಗಾಗಿ ಶೀಘ್ರದಲ್ಲೇ ಕೆಲಸ ಆರಂಭಿಸಲು ಆದ್ಯತೆ ನೀಡುತ್ತೇವೆ ಎಂದು ಹಾಸನ ಜಿಲ್ಲಾಡಳಿತದ ಜತೆ ಸಭೆ ಬಳಿಕ ಹೇಳಿದರು.

(CM BS Yediyurappa visits hassan conducts district meeting at zp hall along with hd revanna)

ಯಡಿಯೂರಪ್ಪ ಎ1 ಆರೋಪಿ; ನೀರಾವರಿ ಇಲಾಖೆಯೊಂದರಲ್ಲೇ ಕೋಟಿ ಕೋಟಿ ಲೂಟಿ: ಮಾಜಿ ಸಚಿವ ಹೆಚ್‌.ಡಿ.ರೇವಣ್ಣ