ಹಾಸನ ಜಿಲೆಟಿನ್ ಸ್ಫೋಟ ದುರಂತ; ಸ್ಫೋಟಕ ಸರಬರಾಜು ಮಾಡಿದ್ದ ನಾಗೇಶ್ ಅರೆಸ್ಟ್

ಸುರಕ್ಷತಾ ಕ್ರಮಕೈಗೊಳ್ಳದ ಹಿನ್ನೆಲೆ ನಾಗೇಶ್​ನನ್ನು ಬಂಧಿಸಲಾಗಿದೆ. ಸ್ಪೋಟಕ‌ ವಿತರಣೆಗೆ ಲೈಸೆನ್ಸ್ ಹೊಂದಿದ್ದ ಮಾಲೀಕ‌ ನಾಗೇಶ್ ಸ್ಪೋಟಕ ಬಂದ ವೇಳೆ ಸುರಕ್ಷತಾ ಕ್ರಮ ವಹಿಸದೆ ಅನ್ಲೋಡ್ ಮಾಡಿಸಿದ್ದಾರೆ.

ಹಾಸನ ಜಿಲೆಟಿನ್ ಸ್ಫೋಟ ದುರಂತ; ಸ್ಫೋಟಕ ಸರಬರಾಜು ಮಾಡಿದ್ದ ನಾಗೇಶ್ ಅರೆಸ್ಟ್
ನಾಗೇಶ್


ಹಾಸನ: ಚಾಕೇನಹಳ್ಳಿಯಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ಸರಬರಾಜು ಮಾಡಿದ್ದ ನಾಗೇಶ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುರಕ್ಷತಾ ಕ್ರಮಕೈಗೊಳ್ಳದ ಹಿನ್ನೆಲೆ ನಾಗೇಶ್​ನನ್ನು ಬಂಧಿಸಲಾಗಿದೆ. ಸ್ಪೋಟಕ‌ ವಿತರಣೆಗೆ ಲೈಸೆನ್ಸ್ ಹೊಂದಿದ್ದ ಮಾಲೀಕ‌ ನಾಗೇಶ್ ಸ್ಪೋಟಕ ಬಂದ ವೇಳೆ ಸುರಕ್ಷತಾ ಕ್ರಮ ವಹಿಸದೆ ಅನ್ಲೋಡ್ ಮಾಡಿಸಿದ್ದಾರೆ. ಅನ್ಲೋಡ್‌ ವೇಳೆ‌ ಅಜಾಗರೂಕತೆಯಿಂದ ಸ್ಪೋಟ ಸಂಭವಿಸಿತ್ತು. ಈ ಪ್ರಕರಣ ಸಂಬಂಧ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಸದ್ಯ ಈಗ ನಾಗೇಶ್​ನನ್ನು ಅರೆಸ್ಟ್ ಮಾಡಿದ್ದು ಮಾಲೀಕನ‌‌ ನಿರ್ಲಕ್ಷ್ಯದಿಂದಲೇ ಸ್ಪೋಟ ಸಂಭವಿಸಿದೆ ಎಂದು ಕೇಸ್ ದಾಖಲಿಸಿಕೊಂಡಿದ್ದಾರೆ.

ಘಟನೆ ಮಾಹಿತಿ
ಏಪ್ರಿಲ್ 4 ರ ಮಧ್ಯಾಹ್ನ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿಯಲ್ಲಿ ಜಿಲೆಟಿನ್ ಸ್ಫೋಟ ನಡೆದಿತ್ತು. ಘಟನೆ ವೇಳೆ ಸ್ಥಳದಲ್ಲೇ ಸಂಪತ್(27) ಎಂಬ ವ್ಯಕ್ತಿ ಮೃತಪಟ್ಟಿದ್ದರು. ಹಾಗೂ ಇಬ್ಬರು ಗಾಯಗೊಂಡಿದ್ದರು. ಏಪ್ರಿಲ್ 5 ರಂದು ಗಾಯಾಳು ರವಿ ಮೃತಪಟ್ಟಿದ್ದು ಏಪ್ರಿಲ್ 8ರಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ನಟರಾಜ್ ಕೂಡ ಮೃತಪಟ್ಟಿದ್ದರು.

ಕಲ್ಲು ಗಣಿಗಾರಿಕೆಗಾಗಿ ಸ್ಫೋಟಕವನ್ನು ಸಂಗ್ರಹಿಸಲಾಗಿತ್ತು. ಸ್ಫೋಟಕ ವಿತರಣೆ ವೇಳೆ ಸ್ಪೋಟವಾಗಿದ್ದು, ಸ್ಪೋಟದ ತೀವ್ರತೆಗೆ ಚಾಕೇನಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಈ ಪ್ರಕರಣ ಹೊಳೆನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಸ್ಫೋಟ ನಡೆದ ಸ್ಥಳಕ್ಕೆ ದಕ್ಷಿಣ ವಲಯದ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಭೇಟಿ ನೀಡಿ, ಪರಿಶೀಲನೆ ಮಾಡಿದ್ದರು. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಸ್ಫೋಟ ಸಂಭವಿಸಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದ ಐಜಿಪಿ ಪವಾರ್​​ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.

ಇದನ್ನೂ ಓದಿ: ಹಾಸನ ಜಿಲೆಟಿನ್ ಸ್ಫೋಟ ದುರಂತದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಿಸದೆ ಸಾವು

(Hassan Gelatin Blast Case Man Arrest for Supply Of Gelatin)