ಪ್ರೇಯಸಿಯ ಕೊಂದು ಪರಾರಿಯಾಗಿದ್ದ ಲವರ್​ ಬಾಯ್​.. ಕಾಫಿ ತೋಟದಲ್ಲಿ ನೇಣಿಗೆ ಶರಣು

ತನ್ನ ಪ್ರಿಯತಮೆಯನ್ನ ಕೊಂದು ಪರಾರಿಯಾಗಿದ್ದ ಯುವಕನೊಬ್ಬ ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೋಗರವಳ್ಳಿಯಲ್ಲಿ ನಡೆದಿದೆ. ಗ್ರಾಮದ ಸಮೀಪವಿರುವ ಕಾಫಿ ತೋಟದಲ್ಲಿ ಹೇಮಂತ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

  • TV9 Web Team
  • Published On - 18:05 PM, 28 Jan 2021
ಪ್ರೇಯಸಿಯ ಕೊಂದು ಪರಾರಿಯಾಗಿದ್ದ ಲವರ್​ ಬಾಯ್​.. ಕಾಫಿ ತೋಟದಲ್ಲಿ ನೇಣಿಗೆ ಶರಣು
ಸುಶ್ಮಿತಾ (ಎಡ); ಹೇಮಂತ್​ (ಬಲ)

ಹಾಸನ: ತನ್ನ ಪ್ರಿಯತಮೆಯನ್ನ ಕೊಂದು ಪರಾರಿಯಾಗಿದ್ದ ಯುವಕನೊಬ್ಬ ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೋಗರವಳ್ಳಿಯಲ್ಲಿ ನಡೆದಿದೆ. ಗ್ರಾಮದ ಸಮೀಪವಿರುವ ಕಾಫಿ ತೋಟದಲ್ಲಿ ಹೇಮಂತ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದುವೆ ಬೇಡ ಎಂದಿದ್ದಕ್ಕೆ ಮರ್ಡರ್​ ಮಾಡೇಬಿಟ್ಟ!

ಅಂದ ಹಾಗೆ, ಹೇಮಂತ್​ ತನ್ನ ಪ್ರೇಯಸಿ ಸುಶ್ಮಿತಾಳಿಗೆ ತನ್ನ ವಿವಾಹವಾಗಲು ಕೇಳಿಕೊಂಡಿದ್ದಾನೆ. ಇದಕ್ಕೆ, ಯುವತಿ ಒಪ್ಪದಿದ್ದಾಗ ಸಿಟ್ಟಿಗೆದ್ದ ಹೇಮಂತ,​ ಸುಶ್ಮಿತಾಳನ್ನು ಕೊಲೆಗೈದಿದ್ದಾನೆ. ಬಳಿಕ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ, ಕೆರೆಗೆ ಹಾರಿದ ಹೇಮಂತ್​ನನ್ನು ಹತ್ಯೆಯಾದ ಯುವತಿ ಸೋದರ ರಕ್ಷಿಸಿದ್ದಾರೆ.

ಆದರೆ ಅದು ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋದ ಹೇಮಂತ್​ ಇದೀಗ ನೇಣಿಗೆ ಶರಣಾಗಿದ್ದಾನೆ. ಕಾಫಿ ತೋಟದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದುವೆಗೆ ಒಪ್ಪದಿದ್ದಕ್ಕೆ ನಡು ರಸ್ತೆಯಲ್ಲೇ ಯುವತಿಯ ಹತ್ಯೆ, ಯುವಕ ಎಸ್ಕೇಪ್‌