ಹಾಸನದಲ್ಲಿ ಮಲಯಾಳಿ ಸಿನಿಮಾ ಚಿತ್ರೀಕರಣ: ಸ್ಥಳೀಯರಲ್ಲಿ ಹೆಚ್ಚಿದ ಕೊರೊನಾ ಆತಂಕ, DHO ಭೇಟಿ

ಜಿಲ್ಲೆಯಲ್ಲಿ ಮಲಯಾಳಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಈಗ ಆ ಭಾಗದ ಜನರಲ್ಲಿ ಕೊರೊನಾ ಹರಡುವ ಆತಂಕ ಎದುರಾಗಿದೆ. ಮಲಯಾಳಿ ಸಿನಿಮಾ ಚಿತ್ರೀಕರಣಕ್ಕಾಗಿ ಕೇರಳದಿಂದ ನೂರಾರು ಕಲಾವಿದರು, ಚಿತ್ರ ತಂತ್ರಜ್ಞರು ಹಾಸನಕ್ಕೆ ಆಗಮಿಸಿದ್ದಾರೆ.

  • TV9 Web Team
  • Published On - 9:32 AM, 5 Mar 2021
ಹಾಸನದಲ್ಲಿ ಮಲಯಾಳಿ ಸಿನಿಮಾ ಚಿತ್ರೀಕರಣ: ಸ್ಥಳೀಯರಲ್ಲಿ ಹೆಚ್ಚಿದ ಕೊರೊನಾ ಆತಂಕ, DHO ಭೇಟಿ
ಶೂಟಿಂಗ್​ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ DHO ಸತೀಶ್

ಹಾಸನ: ಜಿಲ್ಲೆಯಲ್ಲಿ ಮಲಯಾಳಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಈಗ ಆ ಭಾಗದ ಜನರಲ್ಲಿ ಕೊರೊನಾ ಹರಡುವ ಆತಂಕ ಎದುರಾಗಿದೆ. ಮಲಯಾಳಿ ಸಿನಿಮಾ ಚಿತ್ರೀಕರಣಕ್ಕಾಗಿ ಕೇರಳದಿಂದ ನೂರಾರು ಕಲಾವಿದರು, ಚಿತ್ರ ತಂತ್ರಜ್ಞರು ಹಾಸನಕ್ಕೆ ಆಗಮಿಸಿದ್ದಾರೆ. ಹೀಗಾಗಿ ಅವರಿಂದ ಕೊರೊನಾ ಹರಡುವ ಭೀತಿ ಎದುರಾಗಿದೆ.

ಕೇರಳದಲ್ಲಿ ಕೊರೊನಾ ಎರಡನೆ ಅಲೆ ಆರಂಭವಾಗಿದ್ದು, ಕರ್ನಾಟಕಕ್ಕೂ ಆವರಿಸೋ ಭೀತಿ ಉಂಟಾಗಿದೆ. ಹಾಸನದ ಶೆಟ್ಟಿಹಳ್ಳಿ ಬಳಿ ಮಿನ್ನೆಲ್‌ ಮುರುಳಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಶೂಟಿಂಗ್ ಸ್ಥಳಕ್ಕೆ ಅರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ‌ ನೀಡಿ ಪರಿಶೀಲನೆ ನಡೆಸಿದೆ. ಜೊತೆಗೆ ಡಿಎಚ್ಓ ಡಾ‌.ಸತೀಶ್ ಅವರು ಪ್ರೊಡಕ್ಷನ್ ತಂಡಕ್ಕೆ ಎಚ್ಚರಿಕೆ ಸಹ ನೀಡಿದ್ದಾರೆ.

ಎಲ್ಲರಿಗೂ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಲು ಸೂಚನೆ ನೀಡಿದ್ದಾರೆ. ಅದು ಸಾಲದೆಂಬಂತೆ ಕೇರಳ ಕಲಾವಿದರ ಜೊತೆ ಚಿತ್ರೀಕರಣದಲ್ಲಿ‌ ಸಾವಿರಾರು ಸಂಖ್ಯೆಯ ಸ್ಥಳೀಯರು ಸಹ ಭಾಗಿಯಾಗಿದ್ದಾರೆ. ಹೀಗಾಗಿ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟಬುತ್ತಿಯಾಗಿದೆ. ಕಳೆದ 8 ದಿನಗಳಿಂದ ನಡೆಯುತ್ತಿರೋ ಶೂಟಿಂಗ್​ನಿಂದಾಗಿ ಸ್ಥಳೀಯರಲ್ಲಿ ಕೊರೊನಾ ಭಯ ಶುರುವಾಗಿದೆ.