ಸಿಗಲಿಲ್ಲ ಬಾಡಿಗೆ ಮನೆ; ಹಣ ಪಡೆದವನ ಅಪಪ್ರಚಾರಕ್ಕೆ ನೊಂದ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ

ನನ್ನ ನಡತೆಯ ಬಗ್ಗೆಯೇ ಸಂಶಯ ಬರುವಂತೆ ಪ್ರವೀಣ್ ಅಪಪ್ರಚಾರ ಮಾಡುತ್ತಿದ್ದಾನೆ. ಎಲ್ಲಿಯೂ ಬಾಡಿಗೆಗೆ ಮನೆ ಸಿಗದಂತೆ ಆಗಿದೆ. ಬದುಕು ದುಸ್ತರವಾಗಿದೆ. ಹೀಗಾಗಿ ಸಾಯುವ ನಿರ್ಧಾರಕ್ಕೆ ಬಂದೆ ಎಂದು ಗಾಯತ್ರಿ ಮರಣ ಪತ್ರದಲ್ಲಿ ಹೇಳಿದ್ದಾರೆ.

  • TV9 Web Team
  • Published On - 15:02 PM, 2 Mar 2021
ಸಿಗಲಿಲ್ಲ ಬಾಡಿಗೆ ಮನೆ; ಹಣ ಪಡೆದವನ ಅಪಪ್ರಚಾರಕ್ಕೆ ನೊಂದ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ
ಸಾಂದರ್ಭಿಕ ಚಿತ್ರ

ಹಾಸನ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ತನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ಹೀಗಾಗಿಯೇ ನನಗೆ ಎಲ್ಲಿಯೂ ಬಾಡಿಗೆ ಮನೆ ಸಿಗಲಿಲ್ಲ ಎಂದು ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಆಲೂರು ಪಟ್ಟಣದಲ್ಲಿ ನಡೆದಿದೆ. ಗಾಯತ್ರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಪ್ರವೀಣ್ ಹಣ ಪಡೆದು, ಹಿಂದಿರುಗಿಸಲು ಸತಾಯಿಸಿದ ಆರೋಪಿ.

ಗಾಯತ್ರಿ ಹಾಲಿ ವಾಸವಿದ್ದ ಮನೆಯ ಮಾಲೀಕ ಮನೆ ಖಾಲಿ ಮಾಡಲು ಹೇಳಿದ್ದರು. ಬೇರೆ ಕಡೆ ಬಾಡಿಗೆ ಮನೆ ಹುಡುಕುತ್ತಿದ್ದರೂ ಆಕೆಗೆ ಸಿಗಲಿಲ್ಲ. ತನಗೆ ಮನೆ ಸಿಗದಿರಲು ತನ್ನಿಂದ ಸಾಲ ಪಡೆದು ವಂಚಿಸಿದ ಪ್ರವೀಣನೇ ಕಾರಣ ಎಂದು ಗಾಯತ್ರಿ ದೂರಿದ್ದಾರೆ. ತನ್ನಿಂದ ಪ್ರವೀಣ್ ₹ 80 ಸಾವಿರ ಹಣ ಪಡೆದಿದ್ದ. ಅದರಲ್ಲಿ ಕೇವಲ ₹ 30 ಸಾವಿರ ಮಾತ್ರ ವಾಪಸ್ ಕೊಟ್ಟಿದ್ದಾನೆ. ಬಾಕಿ ಹಣ ನೀಡದೆ ವಂಚಿಸಲು ಯತ್ನಿಸುತ್ತಿದ್ದಾನೆ. ಒತ್ತಾಯಪೂರ್ವಕವಾಗಿ ಕೇಳಿದ್ದಕ್ಕೆ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾನೆ ಎಂದು ಗಾಯತ್ರಿ ದೂರಿದ್ದಾರೆ.

ನನ್ನ ನಡತೆಯ ಬಗ್ಗೆಯೇ ಸಂಶಯ ಬರುವಂತೆ ಪ್ರವೀಣ್ ಅಪಪ್ರಚಾರ ಮಾಡುತ್ತಿದ್ದಾನೆ. ಎಲ್ಲಿಯೂ ಬಾಡಿಗೆಗೆ ಮನೆ ಸಿಗದಂತೆ ಆಗಿದೆ. ಬದುಕು ದುಸ್ತರವಾಗಿದೆ. ಹೀಗಾಗಿ ಸಾಯುವ ನಿರ್ಧಾರಕ್ಕೆ ಬಂದೆ ಎಂದು ಗಾಯತ್ರಿ ಮರಣ ಪತ್ರ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಗಾಯತ್ರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

death note hassan

ಡೆತ್ ನೋಟ್

death note hassan

ಡೆತ್ ನೋಟ್

ಇದನ್ನೂ ಓದಿ: ಮೆಕ್ಕೆ ಜೋಳ ಮುರಿಯುವಾಗ ಹಾವು ಕಚ್ಚಿ ರೈತ ಮಹಿಳೆ ಸಾವು

ಇದನ್ನೂ ಓದಿ: ಮಹಾಮೋಸ: ಹಣ ದುಪ್ಪಟಾಗೋ ಆಸೆಗೆ ಬಿದ್ದು ₹16 ಲಕ್ಷ ಕಳ್ಕೊಂಡ.. ಮತ್ತೊಂದು ಕಡೆ ಮಹಿಳೆಗೆ ಸ್ವಂತ ಮೈದುನನಿಂದಲೇ ಮೋಸ