Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ: ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಸರ್ಕಾರಿ ಆಸ್ಪತ್ರೆ ನರ್ಸ್!

ಗಾಯವನ್ನು ಗುಣಪಡಿಸಲು ಔಷಧಗಳು ಅಥವಾ ಮುಲಾಮುಗಳನ್ನು ಹಚ್ಚುತ್ತೇವೆ. ಅಥವಾ ಗಾಯ ಇನ್ನೂ ದೊಡ್ಡದು ಎಂದಾದರೆ ಹೊಲಿಗೆ ಹಾಕಬೇಕಾಗುತ್ತದೆ. ಆದರೆ ಇಲ್ಲೊಬ್ಬ ಹುಡುಗ ತನಗಾದ ಗಾಯಕ್ಕೆ ಗುಣಪಡಿಸಿಕೊಳ್ಳಲು ಆಸ್ಪತ್ರೆಗೆ ಹೋದರೆ ಅಲ್ಲಿ ನರ್ಸ್​ ಸ್ಟಿಚ್ ಬದಲಿಗೆ ಫೆವಿಕ್ವಿಕ್ ಹಾಕಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್​ ಕೃತ್ಯ ವ್ಯಾಪಕ ಆಕ್ರೋಕ್ಕೆ ಕಾರಣವಾಗಿದ್ದು, ಬೇಜವಾಬ್ದಾರಿಯಾಗಿ ನಡೆದುಕೊಂಡ ನರ್ಸ್​ನನ್ನು ಅಮಾನತು ಮಾಡಲು ಡಿಹೆಚ್​ಓ ಹಿಂದೇಟು ಹಾಕುತ್ತಿದ್ದಾರೆ.

ಹಾವೇರಿ: ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಸರ್ಕಾರಿ ಆಸ್ಪತ್ರೆ ನರ್ಸ್!
Adoor Phc Nurse
Follow us
ರಮೇಶ್ ಬಿ. ಜವಳಗೇರಾ
|

Updated on:Feb 04, 2025 | 4:35 PM

ಹಾವೇರಿ, (ಫೆಬ್ರವರಿ 04): ಗಾಯಗೊಂಡಿದ್ದ ಹುಡುಗನಿಗೆ ಹೊಲಿಗೆಯ ಬದಲಾಗಿ ಫೆವಿಕ್ವಿಕ್​ ಹಾಕಿರುವ ಘಟನೆ 2023ರಲ್ಲಿ ತೆಲಂಗಾಣದ ಜೋಗುಲಾಂಬ ಗದ್ವಾಲಾ ಜಿಲ್ಲೆಯ ಅಯಿಜಾದಲ್ಲಿ ಬೆಳಕಿಗೆ ಬಂದಿತ್ತು. ಇದು ಭಾರೀ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಇದೇ ಮಾದರಿಯ ಘಟನೆ ಕರ್ನಾಟಕದಲ್ಲಿ ನಡೆದಿದೆ. ಹೌದು….ಬಾಲಕನ ಗಾಯಕ್ಕೆ ಸ್ಟಿಚ್ ಹಾಕುವ ಬದಲು ನರ್ಸ್​ ಫೆವಿಕ್ವಿಕ್ ಹಾಕಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಗುರುಕಿಶನ್ ಅಣ್ಣಪ್ಪ ಹೊಸಮನಿ ಎನ್ನುವ 7 ವರ್ಷದ ಬಾಲಕ ಆಟವಾಡುವಾಗ ಕೆನ್ನೆ ಬಾಗಕ್ಕೆ ಗಾಯ ಮಾಡಿಕೊಂಡಿದ್ದು, ಆ ಗಾಯ ಬಲವಾಗಿತ್ತು. ಹೀಗಾಗಿ ಅದಕ್ಕೆ ಹೊಲಿಗೆ ಹಾಕಲೇಬೇಕಿತ್ತು. ಆದ್ರೆ, ಆಡೂರು ಸರ್ಕಾರಿ ಆಸ್ಪತ್ರೆ ನರ್ಸ್ ಜ್ಯೋತಿ ಸ್ಟಿಚ್ ಬದಲು ಫೆವಿಕ್ವಿಕ್ ಹಾಕಿದ್ದಾರೆ.

. ಕಳೆದ ಜನವರಿ 14ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.7 ವರ್ಷದ ಗುರುಕಿಶನ್ ಅಣ್ಣಪ್ಪ ಹೊಸಮನಿ ಎಂಬ ಬಾಲಕನಿಗೆ ಕೆನ್ನೆ ಮೇಲೆ ಗಾಯ ಆಗಿತ್ತು. ಆಟ ಆಡುವಾಗ ಗುರುಕಿಶನ್‌ ಕೆನ್ನೆಗೆ ಗಾಯ ಮಾಡಿಕೊಂಡಿದ್ದ. ಕೆನ್ನೆಯ ಮೇಲಿನ ಗಾಯ ಬಹಳ ಆಳಕ್ಕೆ ಇಳಿದಿದ್ದರಿಂದ ರಕ್ತ ಕೂಡ ಸುರಿಯುತ್ತಿತ್ತು. ಕೂಡಲೇ ಬಾಲಕ ಗುರುಕಿಶನ್ ನನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕುಟುಂಬಸ್ಥರು ಕರೆದೊಯ್ದಿದ್ದರು. ವಿದ್ಯಾರ್ಥಿಗೆ ಗಾಯಕ್ಕೆ ಹೊಲಿಗೆ ಹಾಕೋದು ಬಿಟ್ಟು ಫೆವಿಕ್ವಿಕ್ ಗಮ್ ಅಂಟಿಸಿ ನರ್ಸ್‌ ಜ್ಯೋತಿ ಎನ್ನುವವರು ಚಿಕಿತ್ಸೆ ನೀಡಿದ್ದಾರೆ.

ಇದನ್ನೂ ಓದಿ: ಪ್ರಾಣಿ ಬೇಟೆಗೆ ಇಟ್ಟಿದ್ದ ನಾಡ ಬಾಂಬ್ ತಿಂದ ಎಮ್ಮೆ ಬಾಯಿ ಛಿದ್ರ..ನರಳಿ ನರಳಿ ಪ್ರಾಣಬಿಟ್ಟಿತು

ನಿರ್ಲಕ್ಷ್ಯ ತೋರಿದ ನರ್ಸ್​ ಅಮಾನತಿಗೆ ಹಿಂದೇಟು

ಫೆವಿಕ್ವಿಕ್​ ಹಾಕುವ ವಿಡಿಯೋವನ್ನು ಬಾಲಕನ ಪೋಷಕರು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಈ ಬಗ್ಗೆ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದಾರೆ. ಇನ್ನು ಈ ಬಗ್ಗೆ ವರದಿ ಪಡೆದ ಡಿ.ಹೆಚ್ ಒ ರಾಜೇಶ್ ಸುರಗಿಹಳ್ಳಿ ಅವರು ನರ್ಸ್ ಜ್ಯೋತಿ ಅವರನ್ನು ಹಾವೇರಿ ತಾಲೂಕು ಗುತ್ತಲ ಆರೋಗ್ಯ ಸಂಸ್ಥೆಗೆ ನಿಯೋಜನೆ ಮಾಡಿ ಆದೇಶ ಮಾಡಿದ್ದಾರೆ ಅಷ್ಟೇ. ಆದ್ರೆ, ಫೆವಿಕ್ವಿಕ್ ಹಾಕಿ ನಿರ್ಲಕ್ಷ್ಯ ತೋರಿದರೂ ನರ್ಸ್ ಜ್ಯೋತಿಯನ್ನು ಅಮಾನತು ಮಾಡಲು ಡಿಹೆಚ್ ಒ ಹಿಂದೇಟು ಹಾಕಿದ್ದಾರೆ.

ಹಾರಿಕೆ ಉತ್ತರ ನೀಡಿದ ನರ್ಸ್ ಜ್ಯೋತಿ

ಇತ್ತ ಬಾಲಕನಿಗೆ ಫೆವಿಕ್ವಿಕ್ ಯಾಕೆ ಹಾಕಿದ್ದೀರಿ ಅಂತ ಕೇಳಿದರೆ ನರ್ಸ್​ ಜ್ಯೋತಿ ಹಾರಿಕೆ ಉತ್ತರ ನೀಡಿದ್ದಾರೆ. ಸ್ಟಿಚ್ ಹಾಕಿದರೆ ಬಾಲಕನ ಕೆನ್ನೆ ಮೇಲೆ ಕಲೆ ಆಗುತ್ತಿತ್ತು. ಹೀಗಾಗಿ ಚರ್ಮದ ಮೇಲಷ್ಟೇ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದೇನೆ. ನನಗೆ ತಿಳಿದ ಮಟ್ಟಿಗೆ ನಾನು ಚಿಕಿತ್ಸೆ ಮಾಡಿದ್ದೇನೆ. ನೀವು ಫೆವಿಕ್ವಿಕ್ ಹಚ್ಚಬೇಡಿ ನಾವು ಮುಂದೆ ಹೋಗುತ್ತೇವೆ ಅಂದಿದ್ದರೆ ರೆಫರ್ ಮಾಡುತ್ತಿದ್ದೆವು ಎಂದು ಸಮಜಾಯಿಷಿ ನೀಡಿದ್ದಾರೆ.

ಒಂದು ವೇಳೆ ಫೆವಿಕ್ವಿಕ್​ನಿಂದ ಏನಾದರೂ ರಿಯಾಕ್ಷನ್ ಆಗಿ ಬಾಲಕನಿಗೆ ಹೆಚ್ಚು ಕಮ್ಮಿಯಾಗಿದ್ದರೆ ಯಾರು ಹೊಣೆ? ಇವತ್ತು ಇವರಿಗೆ ನಾಳೆ ಇನ್ನೊಬ್ಬರಿಗೆ ಏನೇನು ಹಾಕಿ ಚಿಕಿತ್ಸೆ ನೀಡುತ್ತಾರೆ. ಹೀಗಾಗಿ ಇದು ಆಕಸ್ಮಿಕವಲ್ಲ. ನಿರ್ಲಕ್ಷ್ಯ, ಬೇಜವಾಬ್ದಾರಿತನ. ಹೀಗಾಗಿ ನರ್ಸ್​ ಜ್ಯೋತಿಯನ್ನು ಅಮಾನತು ಮಾಡಬೇಕೆಂದು ಬಾಲಕನ ಪೋಷಕರು ಆಗ್ರಹಿಸಿದ್ದಾರೆ.

Published On - 4:35 pm, Tue, 4 February 25

Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯು
Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯು
ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ
ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ
ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ
ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ
Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು
Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು
ಬಿಮ್ಸ್​​ನ ಟ್ರಾಮಾ ಕೇರ್ ಸೆಂಟರ್​ನಲ್ಲಿ ಮೊಬೈಲ್ ಟಾರ್ಚ್​ನಲ್ಲಿ ಚಿಕಿತ್ಸೆ
ಬಿಮ್ಸ್​​ನ ಟ್ರಾಮಾ ಕೇರ್ ಸೆಂಟರ್​ನಲ್ಲಿ ಮೊಬೈಲ್ ಟಾರ್ಚ್​ನಲ್ಲಿ ಚಿಕಿತ್ಸೆ
ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ?
ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ?
ಧನಂಜಯ ಕಟ್ಟಿದ ತಾಳಿ ಕಣ್ಣಿಗೆ ಒತ್ತಿಕೊಂಡ ಧನ್ಯತಾ; ಇದು ಭಾವುಕ ಕ್ಷಣ
ಧನಂಜಯ ಕಟ್ಟಿದ ತಾಳಿ ಕಣ್ಣಿಗೆ ಒತ್ತಿಕೊಂಡ ಧನ್ಯತಾ; ಇದು ಭಾವುಕ ಕ್ಷಣ
ಮೆರಿಕದಿಂದ ಅಮೃತಸರಕ್ಕೆ ಬಂದಿಳಿದ 116 ಅಕ್ರಮ ವಲಸಿಗರನ್ನು ಹೊತ್ತ ವಿಮಾನ
ಮೆರಿಕದಿಂದ ಅಮೃತಸರಕ್ಕೆ ಬಂದಿಳಿದ 116 ಅಕ್ರಮ ವಲಸಿಗರನ್ನು ಹೊತ್ತ ವಿಮಾನ
ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂದರ್ಭದ ವಿಡಿಯೋ
ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂದರ್ಭದ ವಿಡಿಯೋ
ಡಾಲಿ ಧನಂಜಯ-ಧನ್ಯತಾ ಅದ್ದೂರಿ ಮದುವೆ; ಇಲ್ಲಿದೆ ಲೈವ್ ವಿಡಿಯೋ
ಡಾಲಿ ಧನಂಜಯ-ಧನ್ಯತಾ ಅದ್ದೂರಿ ಮದುವೆ; ಇಲ್ಲಿದೆ ಲೈವ್ ವಿಡಿಯೋ