ಬರ ಬರ ಎಂದು ಕೈಕಟ್ಟಿ ಕುಳಿತುಕೊಳ್ಳಲಿಲ್ಲ ಈ ರೈತ; ಡಿಫರೆಂಟ್ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾನೆ!
ಆದರೆ ಇಂತಹ ಪರಿಸ್ಥಿತಿಯಿಂದ ವಿಭಿನ್ನವಾಗಲು ಬಯಸಿದ ರೈತ ನಿಂಗನಗೌಡ ಅವರು ಡಿಫರೆಂಟ್ ಐಡಿಯಾ ಮಾಡಿ ಒಂದು ವರ್ಷದ ಹಿಂದೆ ಆಂಧ್ರದಿಂದ ತೈವಾನ್ ಪಿಂಕ್, ಲಕ್ನೊ 459 ಮಾದರಿಯ 500 ಪೇರಲ ಸಸಿಗಳನ್ನು ತಂದು ಎಂಟು ಅಡಿ ಅಗಲ, ಹತ್ತು ಅಡಿ ಉದ್ದದ ಅಳತೆಯಲ್ಲಿ ಗುಂಡಿ ತೋಡಿ ಸಸಿ ನೆಟ್ಟರು.
ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲ (drought), ರೈತ ಎರಡರಿಂದ ಮೂರು ಬಾರಿ ಬಿತ್ತನೆ ಮಾಡಿದರು ಸಹ ಮಳೆ ಕೊರತೆಯಿಂದಾಗಿ ಬೆಳೆ ಬಂದಿಲ್ಲ. ಆದರೆ ಇಲ್ಲೊಬ್ಬ ರೈತ (farmer) ಡಿಫರೆಂಟ್ ಆಗಿ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾನೆ. ತೋಟದಲ್ಲಿ ನಳನಳಿಸುತ್ತಿರುವ ಪೇರಲ ಗೀಡಗಳು, ಭರ್ಜರಿ ಪಸಲು ಕಂಡು ಖುಷಿಯಾದ ರೈತ, ಪೇರಲ ಹಣ್ಣು ಕಟಾವು ಮಾಡುತ್ತಿರುವ ರೈತ. ಹೌದು ಇದು ಕಂಡು ಬಂದಿದ್ದು ಹಾವೇರಿ ಜಿಲ್ಲೆಯ ಸವಣೂರ ತಾಲುಕಿನ ಮೆಳ್ಳಾಗಟ್ಟಿ ಗ್ರಾಮದ (Mellagatti of Savanur of Haveri) ನಿಂಗನಗೌಡ ಅವರ ತೋಟದಲ್ಲಿ. ಇಷ್ಟು ದಿನ ಮಕ್ಕೆ ಜೋಳ, ಹತ್ತಿ ಮತ್ತಿತರ ಸಾಂಪ್ರದಾಯಿಕ ಬೆಳೆ (crop) ಬೆಳೆದು ವರ್ಷ ಕೊನೆಯವರೆಗೆ ಹಣಕ್ಕಾಗಿ ಕಾಯುತ್ತಿದ್ದರು.
ಆದರೆ ಇಂತಹ ಪರಿಸ್ಥಿತಿಯಿಂದ ವಿಭಿನ್ನವಾಗಲು ಬಯಸಿದ ರೈತ ನಿಂಗನಗೌಡ ಅವರು ಡಿಫರೆಂಟ್ ಐಡಿಯಾ ಮಾಡಿ ಒಂದು ವರ್ಷದ ಹಿಂದೆ ಆಂಧ್ರದಿಂದ ತೈವಾನ್ ಪಿಂಕ್, ಲಕ್ನೊ 459 ಮಾದರಿಯ 500 ಪೇರಲ ಸಸಿಗಳನ್ನು ತಂದು ಎಂಟು ಅಡಿ ಅಗಲ, ಹತ್ತು ಅಡಿ ಉದ್ದದ ಅಳತೆಯಲ್ಲಿ ಗುಂಡಿ ತೋಡಿ ಸಸಿ ನೆಟ್ಟರು.
ಇದರ ಮಧ್ಯೆ ಚೆಂಡು ಹೂ, ಬೆಳೆದು 500 ಸಾವಿರ ರೂ ವರೆಗೂ ಆದಾಯ ಬರುವಂತೆ ನೋಡಿಕೊಂಡರು. ಪೇರಲ ಗಿಡಗಳಿಂದ ಜೇನು ಹುಳುಗಳ ಪರಾಗಸ್ಪರ್ಶಕ್ಕೆ ಅನೂಕೂಲವಾಗಿದ್ದು, ಸಾವಯವ ಗೊಬ್ಬರವು ಅಗಿದೆಯಂತೆ. ಪೇರಲ ಕೃಷಿಗೆ ಸಂಪೂರ್ಣ ಸಾವಯವ ಗೊಬ್ಬರ ಬಳಸಿದ್ದಾರೆ. ಇದರಿಂದ ಹಣ್ಣು ತುಂಬಾ ರುಚಿಯಾಗಿದ್ದು, ಗಾತ್ರದಲ್ಲಿಯೂ ದೊಡ್ಡದಿದೆ. ಇರುವ ಒಂದೇ ಒಂದು ಎಕರೆ ಜಮೀನಿನಲ್ಲಿ ಅಡಿಕೆ, ಚೀಕೂ, ಮಾವು, ನಿಂಬೆ ಸೀತಾಫಲ, ಮೊಸಂಬಿ, ಮತ್ತು ತೆಂಗಿನ ಸಸಿಯನ್ನು ನೆಟ್ಟಿದ್ದಾರೆ. ಇದರಿಂದ ಇರುವ ಒಂದು ಏಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿದ್ದಾರೆ.
ಇಂತಹ ಭೀಕರ ಬರದ ನಡುವೆಯು ಒಂದು ಎಕರೆಯಲ್ಲಿ ಒಂದು ಲಕ್ಷಕ್ಕು ಅಧಿಕ ಹಣ ಗಳಿಸುತ್ತಿದ್ದಾರೆ. ಈಗ ಪೇರಲ ಬೇಳೆ ಶುರುವಾಗಿದೆ, ಈಗಾಗಲೇ 35 ಸಾವಿರ ಕೈ ಸೇರಿದೆ. ಪೇರಲ ಹಣ್ಣು ಸಿಹಿ ಆಗಿರುವುದರಿಂದ ಇವರ ತೋಟವು ರಸ್ತೆ ಪಕ್ಕದಲ್ಲಿ ಇರುವುದರಿಂದ ವಾಹನ ಸವಾರರೆ ಇವರ ಜಮೀನಿಗೆ ಬಂದು ಖರೀದಿ ಮಾಡುತ್ತಿದ್ದಾರೆ. ಪೇರಲ ಹಣ್ಣು ಸಕ್ಕರೆ ಖಾಯಿಲೆ, ಬಿಪಿಯಂತಹ ರೋಗಗಳಿಗೆ ರಾಮ ಬಾಣ ಆಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಪ್ರತಿದಿನ ಸಾವಿರದ ಐದನೂರರಿಂದ ಎರಡು ಸಾವಿರ ರೂ ಆದಾಯ ಬರುತ್ತಿದೆ. ಇನ್ನು ಗ್ರಾಮದ ಇನ್ನುಳಿದ ರೈತರು ಇವರನ್ನೆ ಅನುಸರಿಸಿ ಸಮಗ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ.
ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದ ಕುಟುಂಬಕ್ಕೆ ಜಮೀನಿನಲ್ಲಿ ಕೆಲಸವು ಹೆಚ್ಚಾಗಿತ್ತು, ನಿರೀಕ್ಷೆ ಮಟ್ಟದಲ್ಲಿ ಆದಾಯ ಬರುತ್ತಿರಲಿಲ್ಲ. ಆದರೆ ಈಗ ಕೆಲಸ ಕಡಿಮೆಯಾಗಿ ಆದಾಯ ಹೆಚ್ಚಾಗಿದೆ. ಒಂದಲ್ಲ ಒಂದು ಬೆಳೆ ಕೈ ಸೇರುತ್ತಿರುವುದರಿಂದ ಕುಟುಂಬ ಸಂತಸದ ಅಲೆಯಲ್ಲಿ ತೇಲುತ್ತಿದೆ. ಉಳಿದ ರೈತರು ಸಹ ಇವರ ಮಾದರಿ ಅನುಸರಿಸಿದರೆ ರೈತರ ಕಷ್ಟಗಳು ದೂರವಾಗುವದರಲ್ಲಿ ಯಾವ ಸಂಶಯವು ಇಲ್ಲ.
ವರದಿ: ರವಿ ಹೂಗಾರ, ಟಿವಿ9, ಹಾವೇರಿ