ರಸ್ತೆ ಡಿವೈಡರ್​ಗೆ ಬೈಕ್ ಡಿಕ್ಕಿ: ತಾಯಿ, ಮಾವನ ಜೊತೆ ತೆರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವು

Accident: ರಸ್ತೆ ಪಕ್ಕದಲ್ಲಿದ್ದ ಡಿವೈಡರ್​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರೋ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಮೂರೂವರೆ ವರ್ಷದ ನಯನಾ ನಾಯಕ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

  • TV9 Web Team
  • Published On - 18:38 PM, 16 Feb 2021
ರಸ್ತೆ ಡಿವೈಡರ್​ಗೆ ಬೈಕ್ ಡಿಕ್ಕಿ: ತಾಯಿ, ಮಾವನ ಜೊತೆ ತೆರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವು
ಪ್ರಾತಿನಿಧಿಕ ಚಿತ್ರ

ಹಾವೇರಿ: ರಸ್ತೆ ಪಕ್ಕದಲ್ಲಿದ್ದ ಡಿವೈಡರ್​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರೋ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಮೂರೂವರೆ ವರ್ಷದ ನಯನಾ ನಾಯಕ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇನ್ನು, ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದೆ. ಬೈಕ್​ನಲ್ಲಿದ್ದ ನಯನಾಳ ತಾಯಿ ಯಶೋಧಾ(21), ತಮ್ಮ ಸಾಯಿರಾಮ(1.5) ಹಾಗೂ ಮಾವ ಅಣ್ಣಪ್ಪ ಲಮಾಣಿಗೆ(25) ಗಾಯಗಳಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್​ನಲ್ಲಿದ್ದವರು ಶಿಗ್ಗಾಂವಿಯಿಂದ ಮೊಟೇಬೆನ್ನೂರು ಕಡೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆರೆ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಇತ್ತ, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನೆರಳೂರು ಗ್ರಾಮದ ಕೆರೆ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ಉತ್ತರ ಭಾರತ ಮೂಲದವರು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ, ಪೊಲೀಸರು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆ ಹಾವಳಿ: ಅಧಿಕಾರಿಗಳ ಸಭೆ