ಬರಕ್ಕೆ ಸೆಡ್ಡು ಹೊಡೆದ ಅನ್ನದಾತನಿಗೆ ಲದ್ದಿ ಹುಳು ಕಾಟ: ಕೇಳುವವರಿಲ್ಲ ರೈತನ ಗೋಳು

ರಾಜ್ಯದಲ್ಲಿ ಮಳೆಯ ಅವಕೃಪೆಯಿಂದ ಈಗಾಗಲೇ ಎರಡು ಬಾರಿ ಬಿತ್ತನೆ ನಷ್ಟ ಅನುಭವಿಸಿದ್ದಾನೆ. ಆದರೂ ಕೂಡ ಕೈ ಕಟ್ಟಿ ಕುಳಿತುಕೊಳ್ಳದ ಅನ್ನದಾತ ಬಂದಷ್ಟು ಬರಲಿ ಎಂದು ತನ್ನ ಬೇಸಾಯ ಮುಂದುವರೆಸಿದ್ದಾನೆ. ಆದರೆ ಲೋಡ್ ಶೆಡ್ಡಿಂಗ್ ಜೊತೆಗೆ ಲದ್ದಿ ಹುಳುವಿನ ಕಾಟದಿಂದ ಅನ್ನದಾತ ಹೈರಾಣ ಆಗಿದ್ದಾನೆ.

ಬರಕ್ಕೆ ಸೆಡ್ಡು ಹೊಡೆದ ಅನ್ನದಾತನಿಗೆ ಲದ್ದಿ ಹುಳು ಕಾಟ: ಕೇಳುವವರಿಲ್ಲ ರೈತನ ಗೋಳು
ಲದ್ದಿ ಹುಳು ಕಾಟ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 18, 2023 | 7:42 PM

ಹಾವೇರಿ, ಅಕ್ಟೋಬರ್​​​ 18: ರಾಜ್ಯದಲ್ಲಿ ಮಳೆಯ ಅವಕೃಪೆಯಿಂದ ಈಗಾಗಲೇ ಎರಡು ಬಾರಿ ಬಿತ್ತನೆ ನಷ್ಟ ಅನುಭವಿಸಿದ್ದಾನೆ. ಆದರೂ ಕೂಡ ಕೈ ಕಟ್ಟಿ ಕುಳಿತುಕೊಳ್ಳದ ಅನ್ನದಾತ (Farmers) ಬಂದಷ್ಟು ಬರಲಿ ಎಂದು ತನ್ನ ಬೇಸಾಯ ಮುಂದುವರೆಸಿದ್ದಾನೆ. ಆದರೆ ಲೋಡ್ ಶೆಡ್ಡಿಂಗ್ ಜೊತೆಗೆ ಲದ್ದಿ ಹುಳುವಿನ ಕಾಟದಿಂದ ಅನ್ನದಾತ ಹೈರಾಣ ಆಗಿದ್ದಾನೆ. ಸರ್ಕಾರ ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳನ್ನು ಬರಪಿಡಿತ ಎಂದು ಘೋಷಣೆ ಮಾಡಿದೆ. ಆದರೆ ಅನ್ನದಾತ ಮಾತ್ರ ಸರ್ಕಾರದ ಪರಿಹಾರಕ್ಕಾಗಿ ಕೈ ಕಟ್ಟಿ ಕುಳಿತುಕೊಳ್ಳದೆ, ಬಂದಷ್ಟು ಬರಲಿ ಎಂಬ ಆಶಯದಿಂದ ಈಗ ಮತ್ತೆ ಬಿತ್ತನೆ ಮಾಡಿ ಇದ್ದಷ್ಟು ನೀರಿನಲ್ಲಿ ಉತ್ತಮ ಫಸಲು ಪಡೆಯಲು ಪ್ರತಿನಿತ್ಯ ಶ್ರಮಿಸುತ್ತಿದ್ದಾನೆ.

ಅದ್ಯಾಕೋ ಬಡ ರೈತನ ಮೇಲೆ ಮುನಿಸಿಕೊಂಡಿರುವ ಪ್ರಕೃತಿ, ಒಂದಲ್ಲಾ ಒಂದು ಸಂಕಷ್ಟ ನೀಡುತ್ತಲೆ ಇದ್ದಾನೆ. ಸುಂದರವಾಗಿ ಬೆಳೆದ ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳುಗಳ ಕಾಟ ಜಾಸ್ತಿ ಆಗಿದ್ದು ರೈತ ಹೈರಾಣ ಆಗಿ ಹೋಗಿದ್ದಾನೆ.

ಇದನ್ನೂ ಓದಿ: ಡೆಂಗ್ಯೂ ತಡೆಯಲು ಜಿಲ್ಲಾಡಳಿತ ಹರಸಾಹಸ; ವೈರಲ್ ಫಿವರ್​ನಿಂದ ಜಿಲ್ಲಾಸ್ಪತ್ರೆ ಫುಲ್

ಸದ್ಯ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯ ಆಗಿದ್ದರಿಂದ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಹಾಗಾಗಿ ನದಿ ಪಾತ್ರದಲ್ಲಿನ ಜಮೀನುಗಳಿಗೆ ನೀರು ಹಾಯಿಸುವುದು ಕಷ್ಟದ ವಿಷಯ ಆಗಿದೆ, ಆದ್ರೂ ಕೂಡ ಹಗಲು ರಾತ್ರಿ ವಿದ್ಯುತ್ ಬಂದಾಗ ನೀರು ಹಾಯಿಸುತ್ತಿರುವ ರೈತನಿಗೆ, ಈ ಲದ್ದಿ ಹುಳುಗಳು ಕಾಟ ಜಾಸ್ತಿ ಆಗಿದೆ.

ಇದನ್ನೂ ಓದಿ: ಹಾವೇರಿ: ಬರಗಾಲದಲ್ಲಿ ಡ್ಯ್ರಾಗನ್ ಫ್ರೂಟ್ ಬೆಳೆದು ಯಶಸ್ಸು ಕಂಡ ಯುವ ರೈತ

ಸಾವಿರಾರು ಖರ್ಚು ಮಾಡಿ ಬೆಳೆದ ಬೆಳೆ ಉಳಿಸುವುದು ರೈತನಿಗೆ ಸವಾಲಾಗಿ ಪರಿಣಮಿಸಿದೆ. ಲದ್ದಿ ಹುಳಕ್ಕಾಗಿ ಕಳೆದ ಒಂದು ತಿಂಗಳಿಂದ 10 ಸಾವಿರ ರೂಪಾಯಿ ಔಷದಿ ಸಿಂಪಡಣೆ ಮಾಡಿದ್ರು, ಇನ್ನೂ ಹುಳುವಿನ ಕಾಟದಿಂದ ಮುಕ್ತಿ ಸಿಕ್ಕಿಲ್ಲ.

ಒಟ್ಟಾರೆಯಾಗಿ ಸವಾಲುಗಳನ್ನು ಮೆಟ್ಟಿ ಸ್ವಾಭಿಮಾನದ ಜೀವನ ಸಾಗಿಸಲು ಮುಂದಾಗಿರುವ ರೈತನಿಗೆ, ಇನ್ನಾದ್ರೂ ನಿಸರ್ಗ ಸಾಥ್ ಕೊಟ್ಟರೆ ಉತ್ತಮ ಬೆಳೆ ಬೆಳೆಯಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.