ಸೋಂಕಿತರೊಂದಿಗೆ ಬರ್ತ್ಡೇ ಆಚರಿಸಿ, ಕುಣಿದು ಕುಪ್ಪಳಿಸಿದ ಆರೋಗ್ಯಾಧಿಕಾರಿ

ಕೊವಿಡ್‌ ಕೇರ್‌ ಸೆಂಟರ್ನಲ್ಲಿ ನೈಟ್ ಡ್ಯೂಟಿ ಇದ್ದಿದ್ದರಿಂದ ಎರಡು ಕೆ.ಜಿ ಕೇಕ್ ಕಟ್ ಮಾಡಿ ಸೋಂಕಿತರ ಜೊತೆ ತಮ್ಮ 33ನೇ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ಸಂಜೀವ್ ಪಿಪಿಇ ಕಿಟ್ ಧರಿಸಿ ಕೇಕ್ ಕಟ್ ಮಾಡಿದ್ದಾರೆ. ಬರ್ತ್ಡೇ ಆಚರಣೆ ನಂತರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅನ್ನೋ ಹಾಡಿಗೆ ಸೋಂಕಿತರೊಂದಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಸೋಂಕಿತರೊಂದಿಗೆ ಬರ್ತ್ಡೇ ಆಚರಿಸಿ, ಕುಣಿದು ಕುಪ್ಪಳಿಸಿದ ಆರೋಗ್ಯಾಧಿಕಾರಿ
ಸೋಂಕಿತರೊಂದಿಗೆ ಬರ್ತ್ಡೇ ಆಚರಿಸಿಕೊಂಡ ಆರೋಗ್ಯಾಧಿಕಾರಿ

ಹಾವೇರಿ: ಸಮುದಾಯ ಆರೋಗ್ಯಾಧಿಕಾರಿ ಕೊವಿಡ್ ಕೇರ್ ಸೆಂಟರ್ನಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಲಕೇರಿ ಕೊವಿಡ್ ಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಸಮುದಾಯ ಆರೋಗ್ಯಾಧಿಕಾರಿ ಸಂಜೀವ ಗಾಜೀಗೌಡ್ರ ಸೋಂಕಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡದ್ದಾರೆ.

ಕೊವಿಡ್‌ ಕೇರ್‌ ಸೆಂಟರ್ನಲ್ಲಿ ನೈಟ್ ಡ್ಯೂಟಿ ಇದ್ದಿದ್ದರಿಂದ ಎರಡು ಕೆ.ಜಿ ಕೇಕ್ ಕಟ್ ಮಾಡಿ ಸೋಂಕಿತರ ಜೊತೆ ತಮ್ಮ 33ನೇ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ಸಂಜೀವ್ ಪಿಪಿಇ ಕಿಟ್ ಧರಿಸಿ ಕೇಕ್ ಕಟ್ ಮಾಡಿದ್ದಾರೆ. ಬರ್ತ್ಡೇ ಆಚರಣೆ ನಂತರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅನ್ನೋ ಹಾಡಿಗೆ ಸೋಂಕಿತರೊಂದಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು ಮತ್ತು ತಂದೆ ತಾಯಿ ಇದ್ರೂ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಲು ಕೊವಿಡ್ ಕೇರ್ ಸೆಂಟರ್ನಲ್ಲಿ ತಮ್ಮ ಜನುಮ ದಿನ ಆಚರಿಸಿ ಸೋಂಕಿತರ ಮುಖದಲ್ಲಿ ನಗು ಮೂಡಿಸಿದ್ದಾರೆ.

Health officer celebrates birthday

ಸೋಂಕಿತರೊಂದಿಗೆ ಬರ್ತ್ಡೇ ಆಚರಿಸಿ, ಕುಣಿದು ಕುಪ್ಪಳಿಸಿದ ಆರೋಗ್ಯಾಧಿಕಾರಿ

Health officer celebrates birthday

ಸೋಂಕಿತರೊಂದಿಗೆ ಬರ್ತ್ಡೇ ಆಚರಿಸಿ, ಕುಣಿದು ಕುಪ್ಪಳಿಸಿದ ಆರೋಗ್ಯಾಧಿಕಾರಿ

ಇನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲೂ ಕೊವಿಡ್ ವಾರ್ಡ್ನಲ್ಲಿ ವೈದ್ಯರು ಭರ್ಜರಿ ಡ್ಯಾನ್ಸ್ ಮಾಡಿ ಸೋಂಕಿತರಿಗೆ ನಗಿಸಿದ್ದಾರೆ. ಕೊರೊನಾ ಸೋಂಕಿತರು ಸಹ ವೈದ್ಯರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಆಡಳಿತಾಧಿಕಾರಿ ಮಾಧವ ನಾಯಕ್ ನೇತೃತ್ವದಲ್ಲಿ ವೈದ್ಯರು ಕುಣಿದು ಕುಪ್ಪಳಿಸಿದ್ದಾರೆ. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ವಿಭಿನ್ನ ಪ್ರಯತ್ನ ಮಾಡಲಾಗಿದ್ದು ಕನ್ನಡ ಸಿನಿಮಾ ಹಾಡುಗಳಿಗೆ ಕುಣಿದು ನಲಿದಾಡಿದ್ದಾರೆ. ಪಿಪಿಇ ಕಿಟ್ ಧರಿಸಿಯೇ ಡ್ಯಾನ್ಸ್ ಮಾಡಿದ್ದಾರೆ.

mnd covid dance

ಮಂಡ್ಯದ ಕೊವಿಡ್ ಸೆಂಟರ್​ನಲ್ಲಿ ಡಾಕ್ಟರ್ಸ್​, ನರ್ಸ್​ಗಳ ಡ್ಯಾನ್ಸ್

ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಮಾಡಿದ​ ಜೇಮ್ಸ್ ಆಂಡರ್ಸನ್