10 ತಿಂಗಳ ಮಗುವನ್ನು ಬಿಟ್ಟು ಹೋದ ಪೋಷಕರು: ಪೊಲೀಸರಿಂದ ರಕ್ಷಣೆ

ಹಾನಗಲ್​ನ ಡಾಬಾದಲ್ಲಿ ಪೋಷಕರು ಮಗುವನ್ನು ಬಿಟ್ಟುಹೋಗಿದ್ದರು. ಹಲವು ಗಂಟೆಗಳು ಕಳೆದರೂ ಮಗುವಿನ ಪೋಷಕರು ಬಾರದ್ದಕ್ಕೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

  • TV9 Web Team
  • Published On - 22:23 PM, 12 Jan 2021
10 ತಿಂಗಳ ಮಗುವನ್ನು ಬಿಟ್ಟು ಹೋದ ಪೋಷಕರು: ಪೊಲೀಸರಿಂದ ರಕ್ಷಣೆ
ಹಾವೇರಿಯಲ್ಲಿ ಮಗುವನ್ನು ರಕ್ಷಿಸಲಾಯಿತು

ಹಾವೇರಿ: ಜಿಲ್ಲೆಯ ಡಾಬಾ ಒಂದರ ಬಳಿ 10 ತಿಂಗಳ ಮಗುವನ್ನು ಬಿಟ್ಟು ಹೋಗಿರುವ ಘಟನೆ ನಡೆದಿದೆ. ಪೋಷಕರು ತಮ್ಮ 10 ತಿಂಗಳ ಗಂಡು ಮಗುವನ್ನು, ಹಾನಗಲ್ ತಾಲೂಕು ವ್ಯಾಪ್ತಿಯಲ್ಲಿರುವ ಡಾಬಾದಲ್ಲಿ ಬಿಟ್ಟುಹೋಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದತ್ತು ಕೇಂದ್ರಕ್ಕೆ ದಾಖಲಿಸಿದ್ದಾರೆ.

ಹಾನಗಲ್​ನ ಡಾಬಾದಲ್ಲಿ ಪೋಷಕರು ಮಗುವನ್ನು ಬಿಟ್ಟುಹೋಗಿದ್ದರು. ಹಲವು ಗಂಟೆಗಳು ಕಳೆದರೂ ಮಗುವಿನ ಪೋಷಕರು ಬಾರದ್ದಕ್ಕೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ, ಸ್ಥಳಕ್ಕೆ ಹಾನಗಲ್ ಠಾಣೆ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಭೇಟಿ ನೀಡಿದ್ದಾರೆ. ಮಗುವನ್ನು ದತ್ತು ಕೇಂದ್ರಕ್ಕೆ ದಾಖಲಿಸಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದೆ. ಪೊಲೀಸರು, ಪೋಷಕರ‌ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.