ಕೊಲಂಬೋಗೆ ಹೋಗುವುದಾಗಿ ಬಹಿರಂಗವಾಗಿ ಹೇಳಿಯೇ ಹೋಗಿದ್ದೆವಲ್ಲಾ!? -HDK

ಕೊಲಂಬೋಗೆ ಹೋಗುವುದಾಗಿ ಬಹಿರಂಗವಾಗಿ ಹೇಳಿಯೇ ಹೋಗಿದ್ದೆವಲ್ಲಾ!? -HDK

ಕೊಲಂಬೊ ಕ್ಯಾಸಿನೋಗೆ ನಾನು ಹೋಗಿದ್ದೇನೆ, ನನ್ನ ಜೊಎತೆಗೆ ಎಚ್​ ಡಿ ಕುಮಾರಸ್ವಾಮಿ ಸಹ ಬಂದಿದ್ರು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಬಾಯ್ಬಿಡುತ್ತಿದ್ದಂತೆ ಅತ್ತ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಕೊಲಂಬೋಗೆ ಹೋಗುವುದಾಗಿ ಬಹಿರಂಗವಾಗಿ ಹೇಳಿಯೇ ಹೋಗಿದ್ದೆವಲ್ಲಾ!? ಎಂದು ನೆನಪಿಸಿಕೊಂಡು ಕುಮಾರಸ್ವಾಮಿ ಹೇಳಿದ್ದಾರೆ.

ಜಮೀರ್ ಹೇಳಿಕೆ ಕುರಿತು ತಕ್ಷಣ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದು, 2014 ರ ಜೂನ್ ತಿಂಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಕೊಲಂಬೋಗೆ ಪ್ರವಾಸ ಹೋಗುವುದಾಗಿ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿ ಹೋಗಿದ್ದಲ್ಲದೇ, ಅಲ್ಲಿ ನಡೆದ ಶಾಸಕರ ಜೊತೆಗಿನ ಚರ್ಚೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆವು. ಇದರಲ್ಲಿ ಯಾವುದೇ ಗುಟ್ಟು ಇರಲಿಲ್ಲ ಎಂದು ಹೇಳಿದ್ದಾರೆ.

ಕೊಲಂಬೊ ಕ್ಯಾಸಿನೋಗೆ ಹೋಗಿದ್ದೇನೆ, ಕುಮಾರಸ್ವಾಮಿ ಸಹ ಬಂದಿದ್ರು-ಜಮೀರ್​ ಬಾಂಬ್​!

Click on your DTH Provider to Add TV9 Kannada