ಮೋದಿ ಎದುರು ಯಡಿಯೂರಪ್ಪ ದಿಟ್ಟತನ ತೋರುತ್ತಾರಾ? ಸರಣಿ ಟ್ವೀಟ್ ಮೂಲಕ HDK ಪ್ರಶ್ನೆ

ಮೋದಿ ಎದುರು ಯಡಿಯೂರಪ್ಪ ದಿಟ್ಟತನ ತೋರುತ್ತಾರಾ? ಸರಣಿ ಟ್ವೀಟ್ ಮೂಲಕ HDK  ಪ್ರಶ್ನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನೆಲೆ ಟ್ವೀಟ್ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಖಜಾನೆ ಖಾಲಿಯಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ತೆರಿಗೆ ಬಹುದೊಡ್ಡ ಆದಾಯ ಮೂಲವಾದರೂ ಅವುಗಳಿಂದ ಸಂಪನ್ಮೂಲ ಬಂದಿಲ್ಲ ಕಾರಣವೇನು? ಕೇಂದ್ರದ ಕೆಟ್ಟ ಆರ್ಥಿಕ ನೀತಿ ಹೊಂದಿದೆ. ತೆರಿಗೆಯಲ್ಲಿ ರಾಜ್ಯಕ್ಕೆ ನೀಡಬೇಕಾದ ಪಾಲನ್ನು ಕೇಂದ್ರ ವಂಚಿಸಿದೆ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ ತಳೆದಿದೆ. ಲೋಕಸಭೆ ಸ್ಥಾನಗಳ ಮೇಲೆ ಮಾತ್ರ ಕಣ್ಣಿಡುವ ಕೇಂದ್ರ ಇಲ್ಲಿನ ಬೇಕು-ಬೇಡಗಳನ್ನು ನಿರ್ಲಕ್ಷಿಸಿದೆ ಎಂದು ಹೆಚ್​ಡಿಕೆ ಹರಿಹಾಯ್ದಿದ್ದಾರೆ.

ಈ ಅಂಶಗಳ ಬಗ್ಗೆ ಮೋದಿ ಮಾತನಾಡಬೇಕು. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಬರ ಪರಿಹಾರ ಮತ್ತು ಅನುದಾನ ತೆರಿಗೆ ಹಂಚಿಕೆಗಳನ್ನು ದಿಟ್ಟತನದಿಂದ ಕೇಳುವ ಶಕ್ತಿ ಬಿಎಸ್​ ಯಡಿಯೂರಪ್ಪ ಗೆ ಇಲ್ಲ. ನ್ಯಾಯವಾಗಿ ಪಡೆಯಲಾಗದ ಬಿಎಸ್ವೈ ದುರ್ಬಲ ಸಿಎಂ ಎಂದು ಅವರು ಜರಿದಿದ್ದಾರೆ.

ರಾಜ್ಯದಿಂದ 25 ಸಂಸದರನ್ನು ಪಡೆದಿರುವ ಮೋದಿಯವರು ಚಂದಮಾಮನನ್ನು ತೋರಿಸಿ ಅನರ್ಹ ಸರ್ಕಾರ ರಚಿಸಿಕೊಂಡು ಸಿಎಂ ಬಿಎಸ್ ವೈಗೆ ಅಧಿಕಾರ ನೀಡಿದ್ದಾರೆ. ಶಿವಕುಮಾರ ಸ್ವಾಮಿಗಳು ಐಕ್ಯರಾಗಿರುವ ತುಮಕೂರು ನೆಲದಲ್ಲಿ ಮೋದಿ ಇದಕ್ಕೆಲ್ಲ ಉತ್ತರ ಕೊಡುವರೇ ಎಂದು ಹೆಚ್ ಡಿಕೆ ಟ್ವೀಟ್​ ಮೂಲಕ ಪ್ರಶ್ನೆ ಮಾಡಿದ್ದಾರೆ.

Click on your DTH Provider to Add TV9 Kannada