ಮುಖ್ಯಮಂತ್ರಿ ಬಿಎಸ್​ವೈರನ್ನು ಮತ್ತೊಮ್ಮೆ ಭೇಟಿಯಾದ ಹೆಚ್​ಡಿಕೆ | HDK meets CM BS Yediyurappa again

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಇತ್ತೀಚಿನ ನಡೆಗಳನ್ನು ಅರ್ಥಮಾಡಿಕೊಳ್ಳುವುದು ಕನ್ನಡಿಗರಿಗೆ ಕಷ್ಟವಾಗುತ್ತಿದೆ. ಇತ್ತೀಚಿಗೆ ನಡೆದ 2 ವಿಧಾನಸಭಾ ಉಪಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಅವರಿಗೆ ಮುಂದಿನ ರಾಜಕೀಯ ನಡೆಗಳ ಬಗ್ಗೆ ಗೊಂದಲ ಉಂಟಾಗಿರಲೂಬಹುದು. ರಾಜರಾಜೇಶ್ವರಿನಗರದಲ್ಲಿ ಅವರ ಪಕ್ಷ ಗೆಲ್ಲುವ ಸಾಧ್ಯತೆ ಇರಲೇ ಇಲ್ಲ. ಯಾಕೆಂದರೆ, ಪಕ್ಷದ ಅಭ್ಯರ್ಥಿ ಬಗ್ಗೆ ಕಾರ್ಯಕರ್ತರಿಗೆಯೇ ಸರಿಯಾದ ಮಾಹಿತಿ ಇರಲಿಲ್ಲ. ಆದರೆ ಶಿರಾದಲ್ಲಿ ಅನುಕಂಪದ ಅಲೆ ಅಮ್ಮಾಜಮ್ಮ ಅವರ ನೆರೆವಿಗೆ ಬಂದೀತು ಎಂಬ ಅವರ ನಿರೀಕ್ಷೆ ಉಲ್ಟಾ ಹೊಡೆಯಿತು. ಇಲ್ಲಿನ ಸೋಲು ಅವರನ್ನು […]

ಮುಖ್ಯಮಂತ್ರಿ ಬಿಎಸ್​ವೈರನ್ನು ಮತ್ತೊಮ್ಮೆ ಭೇಟಿಯಾದ ಹೆಚ್​ಡಿಕೆ | HDK meets CM BS Yediyurappa again
Arun Belly

|

Nov 13, 2020 | 9:34 PM

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಇತ್ತೀಚಿನ ನಡೆಗಳನ್ನು ಅರ್ಥಮಾಡಿಕೊಳ್ಳುವುದು ಕನ್ನಡಿಗರಿಗೆ ಕಷ್ಟವಾಗುತ್ತಿದೆ. ಇತ್ತೀಚಿಗೆ ನಡೆದ 2 ವಿಧಾನಸಭಾ ಉಪಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಅವರಿಗೆ ಮುಂದಿನ ರಾಜಕೀಯ ನಡೆಗಳ ಬಗ್ಗೆ ಗೊಂದಲ ಉಂಟಾಗಿರಲೂಬಹುದು.

ರಾಜರಾಜೇಶ್ವರಿನಗರದಲ್ಲಿ ಅವರ ಪಕ್ಷ ಗೆಲ್ಲುವ ಸಾಧ್ಯತೆ ಇರಲೇ ಇಲ್ಲ. ಯಾಕೆಂದರೆ, ಪಕ್ಷದ ಅಭ್ಯರ್ಥಿ ಬಗ್ಗೆ ಕಾರ್ಯಕರ್ತರಿಗೆಯೇ ಸರಿಯಾದ ಮಾಹಿತಿ ಇರಲಿಲ್ಲ. ಆದರೆ ಶಿರಾದಲ್ಲಿ ಅನುಕಂಪದ ಅಲೆ ಅಮ್ಮಾಜಮ್ಮ ಅವರ ನೆರೆವಿಗೆ ಬಂದೀತು ಎಂಬ ಅವರ ನಿರೀಕ್ಷೆ ಉಲ್ಟಾ ಹೊಡೆಯಿತು. ಇಲ್ಲಿನ ಸೋಲು ಅವರನ್ನು ಹತಾಷರಾಗಿಸಿದ್ದು ಸುಳ್ಳಲ್ಲ. ಆದರೆ ಈ ಹತಾಷೆಯ ಭಾವ ಅವರಿಗೆ ಅವರಿಗೆ ಭಿನ್ನವಾಗಿ ಯೋಚಿಸುವಂತೆ ಮಾಡುತ್ತಿದೆಯೇ? ಅಂಥದೊಂದು ಅನುಮಾನ ಹುಟ್ಟುವುದಕ್ಕೆ ಕಾರಣವಿದೆ.

ಕುಮಾರಸ್ವಾಮಿ ಅವರು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಅವರ ಭೇಟಿ ರಾಜಕೀಯ ವಲಯಗಳಲ್ಲಿ ವಿಪರೀತ ಕುತೂಹಲ ಹುಟ್ಟಿಸಿದೆ. ಮೊನ್ನೆಯವರೆಗೂ ಯಡಿಯೂರಪ್ಪನವರ ಆಡಳಿತ ವೈಖರಿಯನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಟೀಕಿಸುತ್ತಿದ್ದ ಹೆಚ್​ಡಿಕೆಯವರು ಒಂದರೆಡು ತಿಂಗಳುಗಳಿಂದ ಮೃದು ಧೋರಣೆ ತಳೆದಿರುವುದು ಕೌತುಕತೆ ಮೂಡಿಸಿದೆ.

ನಿಮಗೆ ನೆನಪಿರಬಹುದು, ಕೇವಲ ಒಂದು ತಿಂಗಳು ಹಿಂದೆಯಷ್ಟೇ ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada