ಎದೆಭಾರ, ಎದೆಯುರಿಯನ್ನು ಆ್ಯಸಿಡಿಟಿಯ ಲಕ್ಷಣಗಳೆಂದು ಕಡೆಗಣಿಸಬೇಡಿ, ವೈದ್ಯರನ್ನು ಕಾಣಿ: ಡಾ ಸಿಎನ್ ಮಂಜುನಾಥ್
ಹೃದಯಾಘಾತಗಳ ಪ್ರಮಾಣ ಹೆಚ್ಚಿದಂತೆ ಚಿಕಿತ್ಸಾ ವಿಧಾನಗಳ ಬಲವರ್ಧನೆಯಾಗಬೇಕು, ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಚಿಕಿತ್ಸೆ ಕೊಡಿಸದಿದ್ದರೆ ಸಾವಿನ ಪ್ರಮಾಣ ಶೇಕಡ 25ರಷ್ಟಿರುತ್ತದೆ, ವೈದ್ಯರಲ್ಲಿಗೆ ಒಯ್ದು ಕ್ಲಾಟನ್ನು ಕರಗಿಸುವ ಕೆಲಸ ನಡೆದರೆ ಸಾವಿನ ಪ್ರಮಾಣ ಶೇಕಡ 25ರಿಂದ 10ಕ್ಕೆ ಇಳಿಯುತ್ತದೆ, ನಗರ ಪ್ರದೇಶಗಳಲ್ಲಿ ಸ್ಟೆಂಟ್ ಅಳವಡಿಸುವ ಸೌಲಭ್ಯ ಇರುತ್ತದೆ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು, ದೈಹಿಕ ವ್ಯಾಯಾಮಗಳ ಅವಶ್ಯಕತೆ ಬಗ್ಗೆ ಮಕ್ಕಳಿರುವಾಗಲೇ ತಿಳುವಳಿಕೆ ಮೂಡಿಸಬೇಕು ಎಂದು ಡಾ ಮಂಜುನಾಥ್ ಹೇಳಿದರು.
ಬೆಂಗಳೂರು, ಜುಲೈ 2: ಹೆಚ್ಚುತ್ತಿರುವ ಹೃದಯಾಘಾತಗಳನ್ನು (heart attacks) ತಡೆಯಲು ಮತ್ತು ಸಾವಿನ ಪ್ರಮಾಣವನನ್ನು ಕಡಿಮೆ ಮಾಡಲು ಈಗ ಸಂಸದರಾಗಿರುವ ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವರಿಗಿಂತ ಉತ್ತಮ ಸಲಹೆ ನೀಡಲು ರಾಜ್ಯದಲ್ಲಿ ಮತ್ಯಾರು ಸಿಕ್ಕಾರು? ನಮ್ಮ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿರುವ ಡಾ ಮಂಜುನಾಥ್; ಎದೆಭಾರ, ಎದೆಯುರಿಯನ್ನು ನಮ್ಮ ಜನ ಆ್ಯಸಿಡಿಟಿ ಅಂದುಕೊಂಡು ನಿರ್ಲಕ್ಷ್ಯ ಮಾಡುತ್ತಾರೆ, ಅದು ಸರಿಯಲ್ಲ, ಯಾಕೆಂದರೆ ಆ್ಯಸಿಡಿಟಿ ಮತ್ತು ಗ್ಯಾಸ್ಟ್ರೈಟಿಸ್ ಮೂಲಕವೇ ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ, ಅವುಗಳನ್ನು ಎಚ್ಚರಿಕೆಯ ಗಂಟೆ ಅಂತ ಭಾವಿಸಬೇಕು ಎಂದು ಅವರು ಹೇಳುತ್ತಾರೆ. ಎದೆನೋವು ಕಾಣಿಸಿಕೊಂಡಾಗ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರತಿ 30 ನಿಮಿಷದ ವಿಳಂಬ ಸಾವಿನ ಸಾಧ್ಯತೆಯನ್ನು ಶೇಕಡಾ 7ರಷ್ಟು ಹೆಚ್ಚಿಸುತ್ತದೆ ಎಂದು ಡಾ ಮಂಜುನಾಥ್ ಹೇಳುತ್ತಾರೆ. ಹಾಗಾಗಿ ತಾಲೂಕು ಕೇಂದ್ರಗಳಲ್ಲೂ ಚಿಕಿತ್ಸೆ ಸಿಗುವ ಸನ್ನಿವೇಶ ಸೃಷ್ಟಿಯಾಗಬೇಕು, ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಸಂಭವಿಸುತ್ತಿರುವ ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ಸಂಬಂಧವಿಲ್ಲ: ಐಸಿಎಂಆರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ