ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ

ಕರಾವಳಿ ಜಿಲ್ಲೆಗಳೂ ಸೇರಿದಂತೆ ರಾಜ್ಯದ ಹಲವೇಡಿ ಸೆಪ್ಟೆಂಬರ್ 8ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆಯೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಈ ಮೂರು ಜಿಲ್ಲೆಗಳಲ್ಲಿ 3 ದಿನ YELLOW ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಬಹುತೇಕ ಎಲ್ಲಾ ಕಡೆ ಮಳೆಯಾಗುವ ಸಾಧ್ಯತೆಗಳಿದ್ದು, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿಯಲ್ಲೂ YELLOW ಅಲರ್ಟ್ ಘೋಷಿಸಲಾಗಿದೆ.

ಇನ್ನು ದಕ್ಷಿಣ ಒಳನಾಡಿನಲ್ಲೂ ಸೆ.8ರವರೆಗೆ ಭಾರಿ ಮಳೆಯಾಗಲಿದ್ದು, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲಿ ಸೆ.6ರವರೆಗೆ ORANGE ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೂ ಬೆಂಗಳೂರಿನಲ್ಲಿ ಇಂದು, ಮತ್ತು ನಾಳೆ ಮಳೆಯಾಗುವ ಸಾಧ್ಯತೆಗಳಿವೆ. 48 ಗಂಟೆ ಕಾಲ ತಮಿಳುನಾಡಿನ 5 ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದಿನ 48 ಗಂಟೆಗಳ ಕಾಲ ತಮಿಳುನಾಡಿನ ಐದು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇಂದು ಹೊರಡಿಸಲಾದ ಹವಾಮಾನ ಬುಲೆಟಿನ್​ನಲ್ಲಿ ನಮಕ್ಕಲ್, ಸೇಲಂ, ಈರೋಡ್, ಕರುರು ಮತ್ತು ತಿರುಚಿರಾಪಳ್ಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಲಾಗಿದೆ. ಇದಲ್ಲದೆ, ಮುಂದಿನ 2 ದಿನಗಳಲ್ಲಿ ಇತರ 10 ಜಿಲ್ಲೆಗಳಲ್ಲಿ ಮಧ್ಯಮ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ ಎಂದಿದೆ.

ಮಳೆಗಾಲದಲ್ಲಿ ಜಲಮೂಲಗಳ ಬಳಿ ಹೋಗದಂತೆ ರಾಜ್ಯ ಕಂದಾಯ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ. ಕೊಮೊರಿನ್ ಸಮುದ್ರ ಮತ್ತು ಮನ್ನಾರ್ ಕೊಲ್ಲಿಗೆ ಹೋಗದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಕನ್ಯಾಕುಮಾರಿ ಕರಾವಳಿಯಿಂದ ರಾಮೇಶ್ವರಂ ಬಳಿಯ ಧನುಷ್ಕೋಟಿವರೆಗೆ ಇಂದು 3.4 ಮೀಟರ್ ಎತ್ತರದ ಅಲೆಗಳು ಅಪ್ಪಳಿಸಲಿವೆ ಎಂದು ನಿರೀಕ್ಷಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ, ಥೇನಿ ಜಿಲ್ಲೆಯ ಮಂಜಲಾರ್​ನಲ್ಲಿ 11 ಸೆಂಟಿಮೀಟರ್ ಮಳೆಯಾದರೆ, ಪೆರಿಯಾಕುಲಂನಲ್ಲಿ 10 ಸೆಂಟಿಮೀಟರ್ ಮತ್ತು ಮದುರೈನಲ್ಲಿ 9 ಸೆಂಟಿಮೀಟರ್ ಮಳೆಯಾಗಿದೆ.

Published On - 5:58 pm, Fri, 4 September 20

Click on your DTH Provider to Add TV9 Kannada