ಇನ್ಮುಂದೆ ನೀರಿನ ಟ್ಯಾಂಕರ್‌ಗೆ ಕಿಲೋ ಮೀಟರ್ ಮೇಲೆ ಬೆಲೆ ನಿಗದಿ: ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹಿನ್ನೆಲೆ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿ 16,791 ಬೋರ್‌ವೆಲ್‌ಗಳಿವೆ. ಈ ಪೈಕಿ 6,997 ಬೋರ್‌ವೆಲ್ ಡ್ರೈ ಆಗಿವೆ. ಈ ಪೈಕಿ ಒಟ್ಟು 7784 ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಟ್ಯಾಂಕರ್ ಅಸೋಸಿಯೇಷನ್ ಜೊತೆ ಚರ್ಚಿಸಿ ಇನ್ಮುಂದೆ ನೀರಿನ ಟ್ಯಾಂಕರ್‌ಗೆ ಕಿಲೋ ಮೀಟರ್ ಮೇಲೆ ಬೆಲೆ ನಿಗದಿ ಮಾಡುತ್ತೇವೆ ಎಂದಿದ್ದಾರೆ.
ಬೆಂಗಳೂರು, ಮಾರ್ಚ್ 4: ಟ್ಯಾಂಕರ್ ಮಾಫಿಯಾ 500 ರೂ. ರಿಂದ 2 ಸಾವಿರ ರೂ. ವರೆಗೆ ಟ್ಯಾಂಕರ್‌ಗೆ ತಗೆದುಕೊಳ್ಳುತ್ತಿದ್ದಾರೆ. ಟ್ಯಾಂಕರ್ ಅಸೋಸಿಯೇಷನ್ ಜೊತೆ ಚರ್ಚಿಸಿ ಇನ್ಮುಂದೆ ನೀರಿನ ಟ್ಯಾಂಕರ್‌ಗೆ ಕಿಲೋ ಮೀಟರ್ ಮೇಲೆ ಬೆಲೆ ನಿಗದಿ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹಿನ್ನೆಲೆ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರಿಗೂ, ಸರ್ಕಾರಕ್ಕೆ ಹೊರೆ ಆಗದಂತೆ ಚರ್ಚಿಸಿ ದರ ನಿಗದಿಪಡಿಸುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು ನೀರಿನ ಅಭಾವ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದೇನೆ. ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ 16,791 ಬೋರ್‌ವೆಲ್‌ಗಳಿವೆ. ಈ ಪೈಕಿ ಬೆಂಗಳೂರಿನಲ್ಲಿ 6,997 ಬೋರ್‌ವೆಲ್ ಡ್ರೈ ಆಗಿವೆ. ಈ ಪೈಕಿ ಒಟ್ಟು 7784 ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಹಾಲಿನ ಟ್ಯಾಂಕರ್ ಮೂಲಕವೂ ನೀರು ಪೂರೈಕೆ
ಬೆಸ್ಕಾಂ, ಜಲ ಮಂಡಳಿ ಸಿಬ್ಬಂದಿಗಳು ಬೆಂಗಳೂರಲ್ಲಿ ಬೋರ್‌ವೆಲ್ ಗುರುತು ಹಾಕುವುದಕ್ಕೆ ಸೂಚನೆ ಕೊಡಲಾಗಿದೆ. ಖಾಲಿ ಬಿದ್ದಿರುವ ಟ್ಯಾಂಕರ್ನ್ನು ನೀರು ಪೂರೈಕೆಗೆ ತೀರ್ಮಾನಿಸಲಾಗಿದೆ. ಹಾಲಿನ ಟ್ಯಾಂಕರ್ ಮೂಲಕವೂ ನೀರನ್ನು ಪೂರೈಸುತ್ತೇವೆ. ಈ ಬಗ್ಗೆ KMF ಅಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದೇನೆ. ರಾಜ್ಯದ ಎಲ್ಲಾ ಭಾಗದಿಂದ ಹಾಲು ಪೂರೈಕೆ ಮಾಡದೆ ಇರದ ಹಾಲಿನ ಟ್ಯಾಂಕರ್ ಬಳಕೆ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಶುರುವಾಯ್ತು ಜಲಕ್ಷಾಮ; ಎಗ್ಗಿಲ್ಲದೇ ನಡೀತಿದೆ ಟ್ಯಾಂಕರ್ ಮಾಫಿಯ
ಬಾವಿ, ಬೋರ್‌ವೆಲ್ ಏನೇ ಆದರೂ ನೀರು ಸರ್ಕಾರದ್ದು, ಯಾರದ್ದೇ ಆದರೂ ಅಭಾವ ಬಿದ್ದಾಗ ಸರ್ಕಾರ ಖಾಸಗಿ ಬೋರ್‌ವೆಲ್, ಬಾವಿಯನ್ನು ವಶಕ್ಕೆ ಪಡೆಯುತ್ತೆ. ಸದ್ಯ 219 ವಾಟರ್ ಟ್ಯಾಂಕರ್ ಸದ್ಯಕ್ಕೆ ನಮ್ಮಲ್ಲಿ ರೆಜಿಸ್ಟರ್ ಆಗಿದೆ. ನೀರಿನ ಪೂರೈಕೆಗೆ ಬಿಬಿಎಂಪಿಯಲ್ಲಿ ಕಟ್ರೋಲ್ ರೂಂಗೆ ಕರೆ ಮಾಡಿದರೆ ನೀರು ಬರುತ್ತೆ. 556 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನೀರು ಪೂರೈಕೆ ಮಾಡಲಾಗುವುದು. ಬೋರ್ ವೆಲ್ ಕೊರೆಯಲು ಪಕ್ಕದ ತಮಿಳುನಾಡಿನಿಂದ ಮಷಿನ್ ತರಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. 110 ಹಳ್ಳಿಗಳಿಗೆ ವಿಶೇಷವಾಗಿ ನೀರು ಪೂರೈಕೆ ಮಾಡಲಾಗುತ್ತೆ ಎಂದರು.
ಇದನ್ನೂ ಓದಿ: ಹಾವೇರಿ: ಬತ್ತಿದ ಜಿಲ್ಲೆಯ ನಾಲ್ಕು ಪ್ರಮುಖ ನದಿಗಳು; ಜನ-ಜಾನುವಾರುಗಳು ನೀರಿಲ್ಲದೇ ಪರದಾಟ
ಮಾ ರ್ಚ್ 7ರ ವರೆಗೆ ಖಾಸಗಿ ಟ್ಯಾಂಕರ್ ಮಾಲೀಕರಿಗೆ ನೋಂದಣಿ ಮಾಡಲು ಹೇಳಿದ್ದೇವೆ. ಪೊಲೀಸ್, ಆರ್‌ಟಿಓ ಗ್ರಾಮ ಪಂಚಾಯತಿ ಸೇರಿದಂತೆ ಎಲ್ಲ ಅಧಿಕಾರಿಗಳು ಟ್ಯಾಂಕರ್ಗಳ ಮೇಲೆ ನಿಗಾ ಇಡಲು ಹೇಳಿದ್ದೇವೆ. ಅವರು ಒಂದು ವೇಳೆ ನೋಂದಣಿ ಮಾಡಿಕೊಳ್ಳದಿದ್ದರೆ ಕೇಸ್ ದಾಖಲಿಸಲು ಹೇಳುತ್ತೇನೆ ಎಂದಿದ್ದಾರೆ.
ಸಭೆಯಲ್ಲಿ ತಗೆದುಕೊಂಡ ಪ್ರಮುಖ ನಿರ್ಧಾರಗಳು
- ಬತ್ತಿ ಹೋಗಿರುವ ಬೋರ್ವೆಲ್ಗಳಿಗೆ ರೀ ಬೋರೊಂಗ್ ಮಾಡುವುದು.
- ಹೊಸ ಬೋರ್ ಕೊರೆಸುವುದು.
- ಹೆಚ್ಚಿನ ನೀರಿರುವ ಖಾಸಗಿ ಬೋರ್ಗಳನ್ನ ಸುಪರ್ದಿಗೆ ತಗೆದುಕೊಳ್ಳುವುದು.
- ಅಗತ್ಯ ಇರುವ ಕಡೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಹಾಲಿನ ಟ್ಯಾಂಕರ್ ಬಳಕೆ.
- ನೀರಿನ ಸಮಸ್ಯೆ ಆಲಿಸಲು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪನೆ.
- ತಮಿಳುನಾಡಿನಿಂದ ಬೋರ್‌ವೆಲ್ ಕೊರೆಸಲು ಬೋರ್‌ವೆಲ್ ಮಷಿನ್ ತರಿಸುವುದು.
- 7 ನೇ ತಾರೀಖಿನೊಳಗೆ ಖಾಸಗಿ ಟ್ಯಾಂಕರ್ ನೋಂದಣಿಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.