ರಾಜ್ಯ ಬಂದ್‌: ಕರೆಕೊಟ್ಟವರಿಂದಲೇ ನಷ್ಟ ಪರಿಹಾರ ವಸೂಲಿಗೆ ಕೋರ್ಟ್ ಆದೇಶ

ರಾಜ್ಯ ಬಂದ್‌: ಕರೆಕೊಟ್ಟವರಿಂದಲೇ ನಷ್ಟ ಪರಿಹಾರ ವಸೂಲಿಗೆ ಕೋರ್ಟ್ ಆದೇಶ

ಬೆಂಗಳೂರು: 2018ರ ಕರ್ನಾಟಕ ಬಂದ್​ಗೆ ಕರೆಕೊಟ್ಟವರಿಗೆ ಇದೀಗ ಸಂಕಷ್ಟ ಎದುರಾಗಿದೆ. 2018ರ ಜ.25, ಫೆ.14 ಹಾಗೂ ಏ.12ರಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ ಅವರು ರಾಜ್ಯ ಬಂದ್​ಗೆ ಕರೆ ನೀಡಿದ್ದರು. ಬಂದ್ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿತ್ತು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನಷ್ಟವುಂಟು ಮಾಡಿದವರಿಂದಲೇ ಪರಿಹಾರ ವಸೂಲಿಗೆ ಆದೇಶ ನೀಡಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಮಾಡಿದವರಿಂದಲೇ ಪರಿಹಾರ ವಸೂಲಿ ಮಾಡಲು ಹಾಗೂ ನಷ್ಟ ಅಂದಾಜಿಸಲು ನಿವೃತ್ತ ನ್ಯಾ.ಮಹಮ್ಮದ್ ಗೌಸ್ ಅವರನ್ನು ಹೈಕೋರ್ಟ್​ […]

sadhu srinath

|

Feb 25, 2020 | 6:13 PM

ಬೆಂಗಳೂರು: 2018ರ ಕರ್ನಾಟಕ ಬಂದ್​ಗೆ ಕರೆಕೊಟ್ಟವರಿಗೆ ಇದೀಗ ಸಂಕಷ್ಟ ಎದುರಾಗಿದೆ. 2018ರ ಜ.25, ಫೆ.14 ಹಾಗೂ ಏ.12ರಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ ಅವರು ರಾಜ್ಯ ಬಂದ್​ಗೆ ಕರೆ ನೀಡಿದ್ದರು. ಬಂದ್ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿತ್ತು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನಷ್ಟವುಂಟು ಮಾಡಿದವರಿಂದಲೇ ಪರಿಹಾರ ವಸೂಲಿಗೆ ಆದೇಶ ನೀಡಿದೆ.

ಸಾರ್ವಜನಿಕ ಆಸ್ತಿಪಾಸ್ತಿ ಹಾನಿಮಾಡಿದವರಿಂದಲೇ ಪರಿಹಾರ ವಸೂಲಿ ಮಾಡಲು ಹಾಗೂ ನಷ್ಟ ಅಂದಾಜಿಸಲು ನಿವೃತ್ತ ನ್ಯಾ.ಮಹಮ್ಮದ್ ಗೌಸ್ ಅವರನ್ನು ಹೈಕೋರ್ಟ್​ ನೇಮಿಸಿದೆ. ಇನ್ನು ಕಾಂಗ್ರೆಸ್​ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವೇಳೆಯೂ ರಾಜ್ಯಾದ್ಯಂತ ಬಂದ್ ಮಾಡಲಾಗಿತ್ತು. 2019ರ ಸೆಪ್ಟೆಂಬರ್ 4ರಿಂದ ಸೆ.11ರವರೆಗೂ ರಾಜ್ಯದಲ್ಲಿ ಪ್ರತಿಭಟನೆ ನಡೆದಿತ್ತು. ಹಾಗಾಗಿ ನಷ್ಟ ಅಂದಾಜಿಸಲು 6 ವಾರದಲ್ಲಿ ನಿವೃತ್ತ ನ್ಯಾಯಾಧೀಶರನ್ನ ನೇಮಕ ಮಾಡಿ ಮೂಲಸೌಕರ್ಯ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ.

Follow us on

Related Stories

Most Read Stories

Click on your DTH Provider to Add TV9 Kannada