ಕರಾವಳಿಯಲ್ಲಿ ಕಟ್ಟೆಚ್ಚರ, ಬೀಟ್ ಪದ್ಧತಿ ಕಟ್ಟುನಿಟ್ಟು, ರೌಡಿ ಶೀಟರ್ ಪಟ್ಟಿ ಪರಾಮರ್ಶೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಅನೇಕ ಮಾನದಂಡಗಳನ್ನು ಆಧರಿಸಿ ರೌಡಿ ಶೀಟರ್ ಪಟ್ಟಿಯನ್ನು ಪರಾಮರ್ಶೆ ಮಾಡುತ್ತೇವೆ. ರಾಜ್ಯದಾದ್ಯಂತ ಸಣ್ಣಪುಟ್ಟ ಚಳುವಳಿಗಾರರ ಮೇಲೆ ರೌಡಿಶಿಟ್ ಹಣೆ ಪಟ್ಟಿ ಕಟ್ಟಿದ್ದಾರೆ. ಇದರಲ್ಲಿ ಯಾವುದೇ ಬೇರೆ ಉದ್ದೇಶವಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕರಾವಳಿಯಲ್ಲಿ ಕಟ್ಟೆಚ್ಚರ, ಬೀಟ್ ಪದ್ಧತಿ ಕಟ್ಟುನಿಟ್ಟು, ರೌಡಿ ಶೀಟರ್ ಪಟ್ಟಿ ಪರಾಮರ್ಶೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಕರಾವಳಿ ಪ್ರದೇಶದಲ್ಲಿ ತುಂಬಾ ವಿಚಿತ್ರ ಶಕ್ತಿಗಳು ತಲೆ ಎತ್ತುವ ಸ್ಥಿತಿಯಿದೆ. ಗೋವಾದಿಂದ ಕೇರಳದ ಗಡಿಯವರೆಗೆ ಕಟ್ಟೆಚ್ಚರ ವಹಿಸಬೇಕಿದೆ. ಮೀನುಗಾರರ ವೇಷದಲ್ಲಿ ಬಂದು ಮುಂಬೈನಲ್ಲಿ ನಡೆಸಿದ ಕೃತ್ಯ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಕರಾವಳಿ ಕಾವಲು ಪಡೆ ಇನ್ನಷ್ಡು ಬಲಗೊಳ್ಳಬೇಕು. ಕರಾವಳಿ ಕಾವಲು ಪಡೆ ಸ್ಪೀಡ್ ಬೋಟ್​ಗಳನ್ನು ಇನ್ನಷ್ಟು ಒದಗಿಸಲು ಸಿದ್ದರಾಗಿದ್ದೇವೆ. ದೇಶ ವಿರೋಧಿ ಕೃತ್ಯ, ದಂದೆ ನಡೆಸುವವರ ಮೇಲೆ ಕಣ್ಗಾವಲು ಇಡಲು ಹೇಳಿದ್ದೇವೆ. ಪಟ್ಟಣ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥಿತ ಭಂಗ ಮಾಡುವ ರೌಡಿ ಪಡೆಗಳನ್ನು ಮೆಟ್ಟಿ ನಿಲ್ಲಬೇಕು ಎಂದು ತಿಳಿಸಿದ್ದೇನೆ. ಜನರ ನೆಮ್ಮದಿ ಬದುಕಿಗೆ ತೊಂದರೆ ಉಂಟುಮಾಡುವ ದುಷ್ಕರ್ಮಿಗಳನ್ನು ಮಟ್ಟ ಹಾಕಲು ಸೂಚಿಸಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಅನೇಕ ಮಾನದಂಡಗಳನ್ನು ಆಧರಿಸಿ ರೌಡಿ ಶೀಟರ್ ಪಟ್ಟಿಯನ್ನು ಪರಾಮರ್ಶೆ ಮಾಡುತ್ತೇವೆ. ರಾಜ್ಯದಾದ್ಯಂತ ಸಣ್ಣಪುಟ್ಟ ಚಳುವಳಿಗಾರರ ಮೇಲೆ ರೌಡಿಶಿಟ್ ಹಣೆ ಪಟ್ಟಿ ಕಟ್ಟಿದ್ದಾರೆ. ಇದರಲ್ಲಿ ಯಾವುದೇ ಬೇರೆ ಉದ್ದೇಶವಿಲ್ಲ. ಜತೆಗೆ ರಾಜಕೀಯ ಕಾರಣಕ್ಕೂ ನಾವು ಹೀಗೆ ಮಾಡಿಲ್ಲ. ರೌಡಿ ಶೀಟರ್ ಮಾನದಂಡದ ಆಧಾರದ ಮೇಲೆ ಪಟ್ಟಿಯನ್ನು ಪರಾಮರ್ಶನೆ ಮಾಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಯಾವುದೇ ಪ್ರಕರಣಗಳು ನಡೆದಾಗ ಎಫ್ಐಆರ್ ಹಾಕುವುದಕ್ಕೂ ಚಾರ್ಜ್​ಶೀಟ್​ ಸಲ್ಲಿಸುವದಕ್ಕೂ ಬಹಳ ದಿನಗಳ ಅಂತರ ಕಂಡುಬರುತ್ತಿದೆ. ಇದನ್ನು ಸರಿಪಡಿಸಿ ನಿಗದಿತ ದಿನಾಂಕದೊಳಗೆ ಚಾರ್ಜ್ ಶೀಟ್ ಸಲ್ಲಿಕೆಗೆ ಮುಂದಾಗಬೇಕು. ಚಾರ್ಜ್ ಶೀಟ್ ಆದಮೇಲೆ ಕನ್ವಿಕ್ಷನ್ ಪರ್ಸೆಂಟೇಜ್ ಕಡಿಮೆ‌ ಇದೆ. ಇದರಿಂದ ಅಪರಾಧಿಗಳಿಗೆ ಬಹಳ ಲಘುವಾದ ಭಾವನೆ ಬರಬಾರದು ಎಂದು ಅವರು ಸೂಚಿಸಿದ್ದಾಗಿ ತಿಳಿಸಿದರು.
ಜಿಲೆಟಿನ್ ಕಡ್ಡಿ ಸೇರಿದಂತೆ ಸ್ಫೋಟಕ ವಸ್ತುಗಳ ಸಾಗಾಣಕೆ ಮೇಲೆ ಗಮನ ಹರಿಸಬೇಕು. ಗಣಿಗಾರಿಕೆ ಹೆಸರಲ್ಲಿ ಜಿಲೆಟಿನ್ ಕಡ್ಡಿ ಎಲ್ಲಿಂದ ಬರುತ್ತಿದೆ. ಎಲ್ಲಿಗೆ ಸಾಗಾಣಿಕೆ ಆಗುತ್ತಿದೆ. ಸಮಾಜ ವಿದ್ರೋಹಿಗಳ ಕೈಗೆ ಸಿಕ್ಕಿದರೆ ದೊಡ್ಡ ಮಟ್ಟದ ಅನಾಹುತ ಆಗುತ್ತಿದೆ. ಬ್ರಿಟಿಷ್ ಕಾಲದಿಂದಲೂ ಬೀಟ್ ಸಿಸ್ಟಮ್ ನಡೆದುಕೊಂಡು ಬಂದಿದೆ. ಬೀಟ್ ಸಿಸ್ಟಮ್ ಬಲಪಡಿಸಲು ಮತ್ತಷ್ಟು ಕ್ರಮ ಕೈಗೊಳ್ಳುತ್ತೇವೆ. ಬೀಟ್ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಗರ ಗ್ರಾಮೀಣ ಎರಡು ಭಾಗದಲ್ಲಿ ಬೀಟ್ ಸಿಸ್ಟಮ್ ಹೆಚ್ಚಿಸಬೇಕು ಅಂತ ಸೂಚಿಸಿದ್ದೇನೆ. ಪೊಲೀಸ್ ಇಲಾಖೆ ಬಲಪಡಿಸಲು ಇನ್ನಷ್ಟು ಕಾಳಜಿ ವಹಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: 

ಅಫ್ಘಾನಿಸ್ತಾನದಲ್ಲಿ ಕಾಲೇಜುಗಳ ತರಗತಿ ಆರಂಭ; ಗಂಡು- ಹೆಣ್ಣು ಮಕ್ಕಳ ನಡುವೆ ಪರದೆ ಹಾಕಿ ಪಾಠ

ತಾಲಿಬಾನ್ ಆಡಳಿತಕ್ಕೆ ವಿಶ್ವಸಂಸ್ಥೆ ಅಭಯ: ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್​-ಮುಲ್ಲಾ ಬಾರದಾರ್ ಭೇಟಿ

(Home Minister Araga Jnanendra directs strict security on Coastal areas define rowdy sheeter list beat system strong)

Click on your DTH Provider to Add TV9 Kannada