Driving License Online Renewal: ಡ್ರೈವಿಂಗ್ ಲೈಸೆನ್ಸ್ ಆನ್​ಲೈನ್ ನವೀಕರಣ ಹೇಗೆ?

ಡ್ರೈವಿಂಗ್ ಲೈಸೆನ್ಸ್ ಕಳೆದ ವರ್ಷವೇ ಅವಧಿ ಮುಗಿಸಿದ್ದರೂ ಅದರ ನವೀಕರಣಕ್ಕೆ ಮಾರ್ಚ್ 31, 2021ರ ತನಕ ಅವಕಾಶ ನೀಡಲಾಗಿದೆ. ಆನ್​ಲೈನ್​​ನಲ್ಲೇ ಡ್ರೈವಿಂಗ್ ಲೈಸೆನ್ಸ್ ನವೀಕರಣ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

Driving License Online Renewal: ಡ್ರೈವಿಂಗ್ ಲೈಸೆನ್ಸ್ ಆನ್​ಲೈನ್ ನವೀಕರಣ ಹೇಗೆ?
ಡ್ರೈವಿಂಗ್ ಲೈಸೆನ್ಸ್ (ಪ್ರಾತಿನಿಧಿಕ ಚಿತ್ರ)
Follow us
Srinivas Mata
|

Updated on: Mar 27, 2021 | 5:16 PM

ನಿಮ್ಮ ಡ್ರೈವಿಂಗ್ ಲೈಸೆನ್ಸ್​ನ ಅವಧಿ ಈಗಾಗಲೇ ಮುಗಿದು ಹೋಗಿದೆಯಾ? ಆದರೆ ನಿಮಗೆ ಗೊತ್ತಿರಲಿ, ಅದರ ರಿನೀವಲ್​ಗೆ (ನವೀಕರಣ) ಮಾರ್ಚ್ 31, 2021ರ ತನಕ ವಿಸ್ತರಣೆ ಕಾಲಾವಧಿ ಮಾಡಲಾಗಿದೆ. ನಿಮ್ಮ ಡ್ರೈವಿಂಗ್ ಲೈಸೆನ್ಸ್ ನವೀಕರಣ ಮಾಡುವುದು ಹೇಗೆ ಅಂತ ತಿಳಿದುಕೊಳ್ಳಬೇಕು ಅಂತ ನಿಮಗೆ ಗೊತ್ತಾಗ ಬೇಕಿದ್ದಲ್ಲಿ ಈ ಲೇಖನ ಸಹಾಯ ಮಾಡುತ್ತದೆ. ಕಳೆದ ತಿಂಗಳು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಆಧಾರ್ ದೃಢೀಕರಣ ಆಧಾರಿತ ಕಾಂಟ್ಯಾಕ್ಟ್​​ಲೆಸ್ ಸೇವೆಗಳನ್ನು ಆರಂಭಿಸಲಾಗಿದೆ. ಇದರ ಸಹಾಯದಿಂದ ಆರ್​ಟಿಒ ಕಚೇರಿಗೆ ನೀವು ಭೇಟಿ ನೀಡದೆ ಆನ್​ಲೈನ್​ನಲ್ಲೇ ಡ್ರೈವಿಂಗ್ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬಹುದು. ಒಂದು ವೇಳೆ ನಿಮ್ಮ ಆಧಾರ್ ಸಂಖ್ಯೆಯನ್ನು ಲೈಸೆನ್ಸ್ ಸಂಖ್ಯೆ ಜತೆಗೆ ಜೋಡಣೆ ಮಾಡುವುದಕ್ಕೆ ಆಗದಿದ್ದಲ್ಲಿ ಹಳೇ ದಾರಿಯನ್ನೇ ಅನುಸರಿಸಬೇಕಾಗುತ್ತದೆ ಎಂಬುದು ಗೊತ್ತಿರಲಿ.

– ಸಾರಥಿ ಪರಿವಾಹನ್ ವೆಬ್​ಸೈಟ್​ಗೆ ತೆರಳಿ ಅಲ್ಲಿ ಡ್ರೈವಿಂಗ್ ಲೈಸೆನ್ಸ್ ರಿಲೇಟೆಡ್ ಸರ್ವೀಸಸ್ (ಚಾಲನಾ ಪರವಾನಗಿಗೆ ಸಂಬಂಧಿಸಿದ ಸೇವೆಗಳು) ಪುಟಕ್ಕೆ ತೆರಳಿ. – ಅಲ್ಲಿ ರಾಜ್ಯ- ಕರ್ನಾಟಕ ಎಂಬುದನ್ನು ಆರಿಸಿಕೊಳ್ಳಬೇಕು. – ಡಿಎಲ್ (ಚಾಲನಾ ಪರವಾನಗಿ) ಸೇವೆಗಳು ಆಯ್ಕೆ ಮಾಡಿಕೊಳ್ಳಬೇಕು. – ಮುಂದಿನ ಸ್ಕ್ರೀನ್​ನಲ್ಲಿ “Continue” (ಮುಂದುವರಿ) ಎಂಬುದರ ಮೇಲೆ ಕ್ಲಿಕ್ ಮಾಡಿ. – ಆ ನಂತರ ನೀವು “ಅಪ್ಲಿಕೇಷನ್ ಫಾರ್ ಸರ್ವೀಸಸ್ ಆನ್ ಡ್ರೈವಿಂಗ್ ಲೈಸೆನ್ಸ್” ಪುಟಕ್ಕೆ ತೆರಳುತ್ತೀರಿ. – ನಿಮ್ಮ ಡಿಎಲ್ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ. ಈ ಮೂಲಕವಾಗಿ ಡೇಟಾ ಬೇಸ್​ನಿಂದ ನಿಮ್ಮ ಮಾಹಿತಿಯನ್ನು ತೆಗೆಯಲಾಗುತ್ತದೆ.

ಒಂದು ವೇಳೆ ನಿಮ್ಮ ಡಿ.ಎಲ್. ಮಾಹಿತಿಯು ಡೇಟಾಬೇಸ್​ನಲ್ಲಿ ಇಲ್ಲದಿದ್ದಲ್ಲಿ ಅಥವಾ ಡಿಎಲ್ ಸಂಖ್ಯೆಯ ನಕಲು ಇದ್ದಲ್ಲಿ ಒಂದು ಸಂದೇಶ ಬರುತ್ತದೆ. “De- duplication” ಎಂದು ತೋರಿಸುತ್ತದೆ. ಅಂಥ ಸಂದೇಶ ಬಂದಲ್ಲಿ OK ಮೇಲೆ ಕ್ಲಿಕ್ ಮಾಡಬೇಕು. ನೀವು ಬ್ಯಾಕ್​ಲಾಗ್ ಡೇಟಾ ಎಂಟ್ರಿ ಪುಟಕ್ಕೆ ತೆರಳುತ್ತೀರಿ. ಆದರೆ ಕರ್ನಾಟಕಕ್ಕೆ ಆನ್​ಲೈನ್ ಮೂಲಕ ಏನೂ ಮಾಡಲು ಸಾಧ್ಯವಿಲ್ಲ. ಎಲ್ಲಿ ಲೈಸೆನ್ಸ್ ವಿತರಣೆ ಮಾಡಲಾಗಿತ್ತೋ ಅಲ್ಲಿಗೇ ತೆರಳಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಹಾಗೆ ಆರ್​ಟಿಒಗೆ ತೆರಳುವಾಗ, ಮೂಲ ಡಿ.ಎಲ್. ಹಾಗೂ ಅದರ ಎರಡು ನಕಲು ಪ್ರತಿ ಮತ್ತು ಆನ್​ಲೈನ್​ನಲ್ಲಿ ಈ ರೀತಿಯ ಸಂದೇಶ ಬರುತ್ತಿದೆ. ಅದನ್ನು ಸರಿಪಡಿಸಿ ಎಂದು ಮನವಿ ಮಾಡುವ ಅರ್ಜಿಯನ್ನು ಬರೆದುಕೊಂಡು ಹೋಗಬೇಕು.

ಆರ್​ಟಿಒ ಮೇಲ್ವಿಚಾರಕರು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಒಂದೂ ಹೊಸ ಡಿಎಲ್ ಸಂಖ್ಯೆ ವಿತರಿಸಬಹುದು ಅಥವಾ ಡೇಟಾ ಎಂಟ್ರಿ ಮಾಡಬಹುದು. ಸಮಸ್ಯೆ ಸರಿಹೋಗಿದೆಯಾ ಎಂಬುದನ್ನು ಅಲ್ಲಿರುವಾಗಲೇ ಒಮ್ಮೆ ಖಾತ್ರಿ ಪಡಿಸಿಕೊಳ್ಳುವುದು ಉತ್ತಮ. ಆಗ ಪದೇಪದೇ ಆರ್​ಟಿಒಗೆ ಅಲೆದಾಡುವುದು ತಪ್ಪುತ್ತದೆ. ಇನ್ನು ಯಾವುದೇ ಸಂದೇಶ ಬಾರದಂತೆ ಮುಂದಿನ ಹಂತಕ್ಕೆ ತೆರಳುವುದಕ್ಕೆ ನೀವು ಸಫಲರಾದರೆ ಆಗ ಈ ಕೆಳಗಿನ ಘಟ್ಟಗಳನ್ನು ಅನುಸರಿಸಬೇಕಾಗುತ್ತದೆ.

– ಮೇಲ್ಕಂಡ ಡ್ರೈವಿಂಗ್ ಲೈಸೆನ್ಸ್ ಮಾಹಿತಿಗಳು ನನ್ನದೇ ಎಂಬ ಆಯ್ಕೆಯನ್ನು ಖಾತ್ರಿ ಪಡಿಸುವುದಕ್ಕೆ Yes ಎಂಬುದನ್ನು ಆರಿಸಿಕೊಳ್ಳಿ. – ಮನವಿಯನ್ನು ರಾಜ್ಯ- ಕರ್ನಾಟಕ ಆರಿಸಿ, ಆರ್​ಟಿಒ- ಎಲ್ಲಿಗೆ ಹೋಗಲು ಬಯಸುತ್ತೀರೋ ಅನ್ನು ಆರಿಸಿ. ಒಂದು ವೇಳೆ ಯಾವುದು ಎಂಬ ಬಗ್ಗೆ ಖಾತ್ರಿ ಇಲ್ಲದಿದ್ದಲ್ಲಿ ಪಿನ್​ಕೋಡ್ ನಮೂದಿಸಿ.

ಬೆಂಗಳೂರಿನಲ್ಲಿ ಆದರೆ ಕಳೆದ ಸಲ ನೀವು ಯಾವ ಆರ್​ಟಿಒಗೆ ಹೋಗಿದ್ದರೋ ಅಲ್ಲಿಗೆ ತೆರಳಬೇಕು ಅಂತೇನೂ ಇಲ್ಲ. ಒಂದು ವೇಳೆ ಕಳೆದ ಸಲ ನೀವು ತೆರಳಿದ್ದ ಆರ್​ಟಿಒ ಬೇರೆಯಾಗಿತ್ತು ಅಂತಾದಲ್ಲಿ ಒಂದು ಸಂದೇಶ ಕಾಣಿಸುತ್ತದೆ. ಈಗ ಬಂದಿರುವ ಆರ್​ಟಿಒದಲ್ಲೇ ಮುಂದುವರಿಯಬೇಕೋ ಅಥವಾ ಈ ಹಿಂದೆ ವಿತರಣೆ ಆಗಿದ್ದ ಆರ್​ಟಿಒದಲ್ಲೇ ಮುಂದುವರಿಯಬೇಕೋ ಎಂಬುದನ್ನು ನಿರ್ಧಾರ ಮಾಡಿಕೊಳ್ಳಿ. ನಿಮ್ಮ ಗಮನದಲ್ಲಿ ಇರಬೇಕಾದ ಸಂಗತಿ ಏನೆಂದರೆ, ಒಂದು ವೇಳೆ ಬೇರೆ ಆರ್​ಟಿಒ ಆರಿಸಿಕೊಂಡರೆ, “chage of address” (ವಿಳಾಸ ಬದಲಾವಣೆ) ಸೇವೆಯನ್ನು ಆ ನಂತರದ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ವಿಳಾಸ ಬದಲಾವಣೆ ಆಗುತ್ತೋ ಬಿಡುತ್ತೋ ಇದು ಅನ್ವಯ ಆಗುತ್ತದೆ ಮತ್ತು ಇದಕ್ಕಾಗಿ ರೂ. 200 ಶುಲ್ಕ ತಗುಲುತ್ತದೆ.

ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಡಿಎಲ್ ಮಾಹಿತಿ ಪುಟದಲ್ಲಿ ಆಧಾರ್ ಸಂಖ್ಯೆ ಅಪ್​ಡೇಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಒಂದು ಸಲ ಡಿ.ಎಲ್. ಮಾಹಿತಿಯನ್ನು ಖಾತ್ರಿ ಮಾಡಿದ ಮೇಲೆ, ನಿಮಗೆ ಬೇಕಾದ ಡಿ.ಎಲ್. ಸೇವೆ ಪಡೆಯುವ ಸ್ಕ್ರೀನ್​ಗೆ ತೆರಳುತ್ತೀರಿ.

– ರಿನೀವಲ್ ಆಫ್ ಡಿಎಲ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. – ಒಂದು ವೇಳೆ ವಿಳಾಸ ಅಥವಾ ಆರ್​ಟಿಒ ಬದಲಾಗಿದ್ದಲ್ಲಿ ಡಿಎಲ್​ನಲ್ಲಿ ಕೂಡ ವಿಳಾಸ ಬದಲಾವಣೆಯನ್ನು ಆಯ್ಕೆ ಮಾಡಿಕೊಳ್ಳಿ. – ಪ್ರತಿ ಸ್ಕ್ರೀನ್​​ನ ದಾಟುತ್ತಾ ಸಾಗಿ. ಅಂತಿಮವಾಗಿ ನಿಮ್ಮ ಅರ್ಜಿ ಸ್ವೀಕೃತವಾಗಿದೆ ಎಂಬ ಸಂದೇಶ ಬರುತ್ತದೆ. – ಇದು ಅರ್ಜಿ ಸಂಖ್ಯೆಯನ್ನು ನೀಡುತ್ತದೆ. – ದೃಢೀಕರಣ ರಸೀದಿಯನ್ನು ಡೌನ್​ಲೋಡ್ ಮಾಡಿಕೊಂಡು, ಅದರ ಪ್ರಿಂಟ್​ಔಟ್ ತೆಗೆದಿಟ್ಟುಕೊಳ್ಳಬೇಕು.

ವಿವಿಧ ಅರ್ಜಿಗಳನ್ನು ಭರ್ತಿ ಮಾಡಬೇಕು ನಿಮಗೆ ಪಾಪ್ಯುಲೇಟೆಡ್ ಅಪ್ಲಿಕೇಷನ್ ಫಾರ್ಮ್ (ಫಾರ್ಮ್ 2), ವೈದ್ಯಕೀಯ ಸ್ವಘೋಷಣೆ (ಸಿಎಂವಿ ಫಾರ್ಮ್ 1) ಮತ್ತು ವೈದ್ಯಕೀಯ ಪ್ರಮಾಣಪತ್ರ (ಫಾರ್ಮ್ 1ಎ) ಲಿಂಕ್ ಕಾಣಿಸುತ್ತದೆ. ಈ ಎಲ್ಲ ಅರ್ಜಿಗಳನ್ನು ಡೌನ್​ಲೋಡ್ ಮಾಡಿದ ನಂತರ ಸೇವ್ ಮಾಡಿಟ್ಟುಕೊಳ್ಳಬೇಕು. ಅವೆಲ್ಲ ಮುಂಚಿತವಾಗಿ ಭರ್ತಿ ಮಾಡಿದಂಥವು. ನಿಮ್ಮ ಸಹಿ/ಫೋಟೋ ಇರುತ್ತದೆ. ನಿಮಗೆ ಬೇಕು ಎಂದಾದಲ್ಲಿ ಅವನ್ನೇ ಉಳಿಸಿಕೊಳ್ಳಬಹುದು ಅಥವಾ ಇತ್ತೀಚಿನದಕ್ಕೆ ಬದಲಿಸಿಕೊಳ್ಳಬಹುದು.

ನೀವು ಕೆಲವು ದಾಖಲಾತಿಗಳನ್ನು ಅಪ್​ಲೋಡ್ ಮಾಡಬೇಕಾಗುತ್ತದೆ. ಡಿ.ಎಲ್. ನವೀಕರಣಕ್ಕೆ ಡಿಎಲ್​ನ ಸಾಫ್ಟ್ ಕಾಪಿ ಮತ್ತು ವೈದ್ಯಕೀಯ ಪ್ರಮಾಣ ಪತ್ರ (ಫಾರ್ಮ್ 1ಎ) ಅಪ್​ಲೋಡ್ ಮಾಡಬೇಕು. ಒಂದು ವೇಳೆ ವಿಳಾಸ ಬದಲಾವಣೆಗೆ ಆಯ್ಕೆ ಮಾಡಿಕೊಂಡಿದ್ದಲ್ಲಿ ವಿಳಾಸ ದೃಢೀಕರಣ ದಾಖಲೆಯನ್ನು ಅಪ್​ಲೋಡ್ ಮಾಡಬೇಕು. ಎಲ್ಲ ದಾಖಲೆಗಳನ್ನು ಒಂದೇ ಸಲಕ್ಕೆ ಅಪ್​ಲೋಡ್ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಎಂಬಿಬಿಎಸ್ ವೈದ್ಯರ ವೈದ್ಯಕೀಯ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಫೋಟೋ ಮೇಲೆ ಅಡ್ಡವಾಗಿ ವೈದ್ಯರು ಸಹಿ ಮತ್ತು ಸೀಲ್ ಹಾಕಿರಬೇಕು. ವೈದ್ಯರ ವೈದ್ಯಕೀಯ ನೋಂದಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿರಬೇಕು.

ಮತ್ತೊಮ್ಮೆ ಲಾಗ್ ಇನ್ ಆಗಬೇಕು ಒಂದು ಸಲ ವೈದ್ಯಕೀಯ ಪ್ರಮಾಣಪತ್ರ ಸಿಕ್ಕ ಮೇಲೆ ಉಳಿದ ದಾಖಲೆಗಳ ಜತೆಗೆ ಅಪ್​ಲೋಡ್ ಮಾಡಬಹುದು. ಇದಕ್ಕಾಗಿ ಸಾರಥಿ ಪರಿವಾಹನ್ ಪುಟಕ್ಕೆ ಮತ್ತೆ ಲಾಗಿನ್ ಆಗಬೇಕು. ಈ ಸಲ ಅಪ್​ಲೋಡ್ ಡಾಕ್ಯುಮೆಂಟ್ ಮತ್ತು ಪ್ರೊಸೀಡ್ ಎಂಬುದನ್ನು ಆರಿಸಿಕೊಂಡರೆ ಆಯಿತು. ನಿಮ್ಮ ಅಪ್ಲಿಕೇಷನ್ ಸಂಖ್ಯೆ ಮತ್ತು ಜನ್ಮದಿನಾಂಕ ಅಗತ್ಯ ಇರುತ್ತದೆ. ಇದೇ ಪುಟದಲ್ಲಿ ಶುಲ್ಕ ಪಾವತಿ (ಶುಲ್ಕ ಪಾವತಿ ಲಿಂಕ್) ಮಾಡಬಹುದು. ಹಾಗೂ ಭೇಟಿಗೆ (ಅಪಾಯಿಂಟ್​ಮೆಂಟ್ ಲಿಂಕ್) ನಂತರ ಬುಕ್ ಮಾಡಬಹುದು. ಒಂದು ಸಲ ಎಲ್ಲ ದಾಖಲಾತಿಗಳನ್ನು ಅಪ್​ಲೋಡ್ ಮಾಡಿದ ಮೇಲೆ ಅವುಗಳಿಗೆ ಟಿಕ್ ಮಾರ್ಕ್ ಬರುತ್ತದೆ: ನಿಮ್ಮ ಕಾರ್ಯ ಪೂರ್ಣಗೊಂಡಿದೆ ಎಂದಿರುತ್ತದೆ.

ನಂತರದಲ್ಲಿ ಶುಲ್ಕ ಪಾವತಿಸಿ, ಅಪಾಯಿಂಟ್​ಮೆಂಟ್ ಪಡೆಯಬೇಕು. ಸದ್ಯಕ್ಕೆ ಪಾವತಿ ಸೈಟ್​ನಿಂದ ಅಪ್ಲಿಕೇಷನ್ ಸಂಖ್ಯೆಗೆ ಒಂದು ಸಲ ಮಾತ್ರ ಶುಲ್ಕ ಸ್ವೀಕೃತವಾಗುತ್ತಿದೆ. ಆದ್ದರಿಂದ ಮೊದಲಿಗೆ ರಿನೀವಲ್​ಗೆ ಅರ್ಜಿ ಹಾಕಿಕೊಂಡು, ಅದಕ್ಕೆ ಪಾವತಿಸಬೇಕು. ಆ ನಂತರ ವಿಳಾಸ ಬದಲಾವಣೆಗಾಗಿ ಅಪ್ಲೈ ಮಾಡಿ, ಅದಕ್ಕೆ ಆರ್​ಟಿಒ ಕೌಂಟರ್​ನಲ್ಲಿ ಮ್ಯಾನ್ಯುಯೆಲ್ ಆಗಿ ಪಾವತಿಸಬೇಕು. ನೀವು ಪಾವತಿ ಮಾಡಿದ ನಂತರ ರಸೀದಿ ಡೌನ್​ಲೋಡ್ ಮಾಡಿಕೊಂಡು, ಅದರ ಪ್ರಿಂಟ್ ಪಡೆಯಬೇಕು. ಆ ನಂತರ ಅಪಾಯಿಂಟ್​ಮೆಂಟ್​ಗೆ ಬುಕ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಬೇಕು. ನಿಮಗೆ ಗೊತ್ತಿರಲಿ, ಪಾವತಿಯು ತಕ್ಷಣ ಕಾಣಿಸದಿರಬಹುದು. ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸಾರಥಿ ಪರಿವಾಹನ್ ಪುಟದಲ್ಲಿ ಪಾವತಿಯ ಸ್ಥಿತಿಯನ್ನು ಪರಿಶೀಲಿಸಬಹುದು.

ಆರ್​ಟಿಒಗೆ ತೆರಳುವಾಗ ಈ ಕೆಳಕಂಡ ದಾಖಲೆಗಳು ಇರಬೇಕು: 1. ಅರ್ಜಿ ಸಲ್ಲಿಕೆ ಮಾಡಿದ್ದಕ್ಕೆ ದೃಢೀಕರಣ (ಎರಡು ಇಟ್ಟುಕೊಳ್ಳಬೇಕು ಮತ್ತು ಒಂದನ್ನು ಹಿಂತಿರುಗಿಸುತ್ತಾರೆ. 2. ಅಪಾಯಿಂಟ್​ಮೆಂಟ್ ಪಡೆದ ಸಮಯದ ಅವಧಿ 3. ಮೂಲ ಡ್ರೈವಿಂಗ್ ಲೈಸೆನ್ಸ್ ಪ್ಲಾಸ್ಟಿಕ್ ಪೌಚ್​ನಲ್ಲಿ 4. ಪಾವತಿ ರಸೀದಿ ಸಂಖ್ಯೆ 5. ವೈದ್ಯಕೀಯ ಪ್ರಮಾಣ ಪತ್ರ (ಫಾರ್ಮ್ 1ಎ) 6. ವೈದ್ಯಕೀಯ ಸ್ವಪ್ರಮಾಣ ಪತ್ರ (ಸಿಎಂವಿ ಫಾರ್ಮ್ 1) 7. ಡ್ರೈವಿಂಗ್ ಲೈಸೆನ್ಸ್ ನಕಲು 8. ವಿಳಾಸ ದೃಢೀಕರಣದ ಮೂಲಪ್ರತಿ (ಬದಲಾವಣೆಗೆ ಅರ್ಜಿ ಹಾಕಿಕೊಂಡಿದ್ದಲ್ಲಿ) 9. ವಿಳಾಸ ದೃಢೀಕರಣದ ನಕಲು ಪ್ರತಿ (ಬದಲಾವಣೆಗೆ ಅರ್ಜಿ ಹಾಕಿಕೊಂಡಿದ್ದಲ್ಲಿ) 10. ನಿಮ್ಮದೇ ವಿಳಾಸವನ್ನು ಒಳಗೊಂಡಂಥ ಹಸಿರು ಎನ್ವಲಪ್ ಮತ್ತು ಅದಕ್ಕೆ ಸ್ಪೀಡ್ ಪೋಸ್ಟ್ ಸ್ಟ್ಯಾಂಪ್​ಗಳಿರಬೇಕು. 11. ಅರ್ಜಿ (ಫಾರ್ಮ್ 2) 13. ಆಧಾರ್ ಕಾರ್ಡ್ ಇಟ್ಟುಕೊಂಡಿದ್ದಲ್ಲಿ ಉತ್ತಮ

ಈ ಅಂಶಗಳೂ ನಿಮ್ಮ ಗಮನದಲ್ಲಿರಲಿ 1. ಯಾರೇ ಆಗಲಿ ಡಿಎಲ್ ಅವಧಿ ಮುಕ್ತಾಯದ ಒಂದು ವರ್ಷದ ಮುಂಚೆ ಅಥವಾ ಅವಧಿ ಮುಗಿದ ಒಂದು ವರ್ಷದ ಅವಧಿಯೊಳಗೆ ಅಪ್ಲೈ ಮಾಡಬಹುದು 2. ಒಂದು ವೇಳೆ ಲೈಸೆನ್ಸ್ ಅವಧಿ ಮುಗಿದ ಒಂದು ವರ್ಷದ ಮೇಲೆ ರಿನೀವಲ್ ಅರ್ಜಿ ಫೈಲ್ ಮಾಡಿದರೆ ಮತ್ತೊಮ್ಮೆ ಲರ್ನರ್ಸ್ ಡ್ರೈವಿಂಗ್ ಪರೀಕ್ಷೆ ತೆಗೆದುಕೊಳ್ಳಬೇಕು. ಆಗ ಹೊಸ ಅರ್ಜಿದಾರ ಎಂದು ಪರಿಗಣಿಸಲಾಗುತ್ತದೆ. 3. ಅವಧಿ ಮುಗಿದ ಲೈಸೆನ್ಸ್ ಅಥವಾ ಡಿಎಲ್ ಇಲ್ಲದೆ ವಾಹನ ಚಲಾಯಿಸಿದರೆ ರೂ. 5000 ದಂಡ 4. ಒಂದು ವೇಳೆ ನೀವು ನವೀಕರಣಕ್ಕೆ ಅರ್ಜಿ ಹಾಕಿದ್ದಲ್ಲಿ ಲೈಸೆನ್ಸ್ ಬದಲಿಗೆ ಅರ್ಜಿ ಸಲ್ಲಿಸಿದ ದೃಢೀಕರಣ ಪತ್ರದೊಂದಿಗೆ ವಾಹನ ಚಲಾಯಿಸಬಹುದು.

ಮಾಹಿತಿ ಕೃಪೆ: ಸಿಟಿಜನ್ ಮ್ಯಾಟರ್ಸ್

ಇದನ್ನೂ ಓದಿ: How to link Aadhaar to PAN card: ಆಧಾರ್ ಜತೆಗೆ ಪ್ಯಾನ್ ಕಾರ್ಡ್ ಜೋಡಣೆ ಹೇಗೆ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ