ರಾಜ್ಯದ 4 ಜಿಲ್ಲೆಗಳಲ್ಲಿ 2030ಕ್ಕೆ ವಾಯು ಮಾಲಿನ್ಯ ಶೇ38 ರಷ್ಟು ಹೆಚ್ಚಳ ಸಾಧ್ಯತೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. 2030ರ ವೇಳೆಗೆ ಕರ್ನಾಟಕದ ಈ ನಾಲ್ಕು ಜಿಲ್ಲಗಳಲ್ಲಿ ಶೇ38ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.

ರಾಜ್ಯದ 4 ಜಿಲ್ಲೆಗಳಲ್ಲಿ 2030ಕ್ಕೆ ವಾಯು ಮಾಲಿನ್ಯ ಶೇ38 ರಷ್ಟು ಹೆಚ್ಚಳ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
| Updated By: ವಿವೇಕ ಬಿರಾದಾರ

Updated on: Aug 30, 2024 | 9:29 AM

ಬೆಂಗಳೂರು, ಆಗಸ್ಟ್​ 30: ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯದ (air pollution) ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ವಾಯುಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡಲು ಸಿಎಸ್ಟಿಪಿ ಎಂಬ ಸಂಸ್ಥೆ ವರದಿ ತಯಾರು ಮಾಡಿದ್ದು, ಬೆಂಗಳೂರು ನಗರವೊಂದರಲ್ಲೇ ವಾಯುಮಾಲಿನ್ಯ ಪ್ರಮಾಣ ಕಡಿಮೆ ಮಾಡಲು 3230 ಕೋಟಿ ರೂಪಾಯಿ ಬೇಕು ಎಂದು ವರದಿ ನೀಡಿದೆ.

ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲು ರಾಜ್ಯದ ಜಿಲ್ಲೆಗಳಿಗೆ ಸುಮಾರು 1,000 ಕೋಟಿ ರೂಪಾಯಿ ಬೇಕು. ಬೆಂಗಳೂರಿನ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿಯ (CSTEP) ಸಂಶೋಧಕರು, 2030 ರ ವೇಳೆಗೆ ಕರ್ನಾಟಕದ ನಗರಗಳಲ್ಲಿ ಹಾನಿಕಾರಕ ಮಾಲಿನ್ಯಕಾರಕಗಳ ಮಟ್ಟವು ಹೆಚ್ಚಾಗಲಿದೆ ಎಂದಿದ್ದಾರೆ.

ಕರ್ನಾಟಕದ ಮೂರು ನಗರಗಳಾದ ದಾವಣಗೆರೆ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ವಾಯುಮಾಲಿನ್ಯದ ಪ್ರವೃತ್ತಿಗಳು ಮತ್ತು ಸಣ್ಣ ಕಣಗಳ (PM2.5) ಸಾಂದ್ರತೆಯ ಪ್ರಕ್ಷೇಪಗಳು, ಕಾರ್ಸಿನೋಜೆನಿಕ್ ಮಾಲಿನ್ಯದ ಮಟ್ಟವು 2030ಕ್ಕೆ ಶೇ 31 ರಿಂದ 38 ರಷ್ಟು ಹೆಚ್ಚಾಗಬಹುದು ಎಂದು ವರದಿ ನೀಡಿದೆ. ವಾಯು ಮಾಲಿನ್ಯವನ್ನು ನಿಯಂತ್ರಿಸಲು ಈ ನಗರಗಳಿಗೆ ಅಂದಾಜು 582 ರಿಂದ 968 ಕೋಟಿ ರೂ. ಸರ್ಕಾರ ವ್ಯಯಿಸಬೇಕು ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರತಿ ದಿನ ರಸ್ತೆಗಿಳಿಯುತ್ತಿವೆ 2000 ಹೊಸ ವಾಹನ! ವಾಯು ಮಾಲಿನ್ಯದಲ್ಲಿ ದೆಹಲಿಯನ್ನೂ ಮೀರಿಸುವ ಆತಂಕ

ವಾಹನಗಳ ಹೆಚ್ಚಳ, ಕೈಗಾರಿಕೆಗಳಿಂದ ಬರುವ ವಿಷಕಾರಿ ಅನಿಲ, ರಸ್ತೆಗಳಿಂದ ಮತ್ತು ಕಾಮಗಾರಿಗಳಿಂದ ಬರುವ ಧೂಳುಗಳಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಸುಮಾರು 3230 ಕೋಟಿ ರುಪಾಯಿ ಬೇಕಾಗುತ್ತದೆ ಎಂದು ವರದಿಯಲ್ಲಿದೆ.

ಇನ್ನು ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿಯಲ್ಲಿ ವಾಯುಮಾಲಿನ್ಯ ಪ್ರಮಾಣ PM2.5 ಇದೆ. ಆದರೆ ಎಲ್ಲ ಮೂರು ನಗರಗಳಲ್ಲಿ SO2 ಮತ್ತು NOx ಮಾಲಿನ್ಯಕ್ಕೆ ಕೈಗಾರಿಕೆಗಳು ಮತ್ತು ಸಾರಿಗೆಯು ಪ್ರಮುಖ ಕಾರಣವಾಗಿವೆ. ದಾವಣಗೆರೆಯಲ್ಲಿ ಸುಮಾರು 950 ಪಫ್ಡ್ ರೈಸ್ ಮಿಲ್‌ಗಳಿವೆ ಇದರಿಂದ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ತಿಳಿಸಿದೆ.

ಈ ಪಫ್ಡ್ ರೈಸ್ ಮಿಲ್​ಗಳಲ್ಲಿ ಎಲ್ಪಿಜಿ ಮತ್ತು ಫಿಲ್ಟರ್​ಗಳನ್ನು ಹಾಕಲು ಆದೇಶ ಮಾಡಬೇಕು ಎಂದು ಸಂಶೋಧಕರು ಸೂಚಿಸಿದ್ದಾರೆ. ಇದರಿಂದ ವಾಯುಮಾಲಿನ್ಯ ಪ್ರಮಾಣವನ್ನು ಶೇ 40 ರಷ್ಟು ಕಡಿಮೆ ಮಾಡಬಹುದು ಎಂದಿದ್ದಾರೆ. ಈ ಬಗ್ಗೆ ತಜ್ಞರು ಮಾತನಾಡಿದ್ದು ವರದಿಯಲ್ಲಿ ವರದಿಯಲ್ಲಿ ತಿಳಿಸಿರುವಂತೆ ವಾಯು ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ಸರ್ಕಾರ ಕ್ರಮವನ್ನು ಕೈಗೊಳ್ಳಬೇಕು ಮತ್ತು ಹಣವನ್ನು ಮೀಸಲಿಡಬೇಕು ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವಾಯುಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಪ್ರತಿ ಜಿಲ್ಲೆಗೆ ಸುಮಾರು 500 ರಿಂದ 1 ಸಾವಿರ ಕೋಟಿ ವೆಚ್ಚವಾದರೆ, ಬೆಂಗಳೂರು ನಗರಕ್ಕೆ ಮಾತ್ರ ಸುಮಾರು 3 ಸಾವಿರ ಕೋಟಿಯಷ್ಟು ಹಣ ಬೇಕಾಗುತ್ತದೆ ಎಂದು ವರದಿ ನೀಡಿದೆ ಆದರೆ ಇದನ್ನು ರಾಜ್ಯ ಸರ್ಕಾರ ಯಾವ ರೀತಿಯಲ್ಲಿ ಪರಿಗಣಿಸಲಿದೆ ಎಂದು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ
ನಾಗರ ಹಾವಿನ ಮೇಲೆ ಧಾರಾಳ ಮಮಕಾರ ತೋರಿದ ಹಸು
ನಾಗರ ಹಾವಿನ ಮೇಲೆ ಧಾರಾಳ ಮಮಕಾರ ತೋರಿದ ಹಸು
ಆನೆಗಳು ಮೈಸೂರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತವೆ: ಡಾ ಪ್ರಭುಗೌಡ, ಡಿಸಿಎಫ್
ಆನೆಗಳು ಮೈಸೂರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತವೆ: ಡಾ ಪ್ರಭುಗೌಡ, ಡಿಸಿಎಫ್
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್
ಹೆಬ್ಬಾಳದಲ್ಲಿ ಪ್ರತಿನಿತ್ಯ ಆಗುವ ಟ್ರಾಫಿಕ್ ಜಾಮ್​ಗಳಿಗೆ ಕೊನೆ ಯಾವತ್ತು?
ಹೆಬ್ಬಾಳದಲ್ಲಿ ಪ್ರತಿನಿತ್ಯ ಆಗುವ ಟ್ರಾಫಿಕ್ ಜಾಮ್​ಗಳಿಗೆ ಕೊನೆ ಯಾವತ್ತು?
ಮುಡಾ ಆರೋಪಿ ಸಿದ್ದರಾಮಯ್ಯ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ: ಕೃಷ್ಣ
ಮುಡಾ ಆರೋಪಿ ಸಿದ್ದರಾಮಯ್ಯ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ: ಕೃಷ್ಣ