ಶುಕ್ರಗ್ರಹದ ಅನ್ವೇಷಣೆಗೆ ಭಾರತ ಸಿದ್ಧ: ಇಸ್ರೋ ಕಾರ್ಯಕ್ಕೆ ಕೈಜೋಡಿಸಿದ ಸರ್ಕಾರ
ವಿಜ್ಞಾನ ಲೋಕದಲ್ಲಿ ಭಾರತ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ದಾಖಲೆಗೆ ಈಗ ಮತ್ತೊಂದು ಸೇರ್ಪಡೆಯಾಗುವುದಕ್ಕೆ ಇಸ್ರೋ ವಿಜ್ಞಾನಗಳು ಸಜ್ಜಾಗುತ್ತಿದ್ದಾರೆ. ಆ ಮೂಲಕ ಶುಕ್ರಗ್ರಹದ ಮೇಲೆ ಸದ್ಯ ಅನ್ವೇಷಣೆ ಮಾಡಲು ಮುಂದಾಗುತ್ತಿದ್ದು, ಇದಕ್ಕೆ ಸರ್ಕಾರವು ಕೈ ಜೋಡಿಸಿದೆ.
ಬೆಂಗಳೂರು, ಅಕ್ಟೋಬರ್ 04: ಇಸ್ರೋ ಚಂದ್ರಯಾನ 3 ಉಡಾವಣೆ ಮಾಡಿ ವಿಶ್ವದಲ್ಲೇ ದಾಖಲೆ ಬರೆದಿತ್ತು. ಆದಾದ ನಂತರ ಸೂರ್ಯನ ಅನ್ವೇಷಣೆಗೆ ಆದಿತ್ಯ ಎಲ್ 1 ಉಡಾವಣೆ ಮಾಡಿ ಅದ್ರಲ್ಲೂ ಸಕ್ಸಸ್ ಆಗಿದ್ದ ಇಸ್ರೋ (ISRO) ಇದೀಗ ಶುಕ್ರಗ್ರಹದ ಮೇಲೆ ಅನ್ವೇಷಣೆ ಮಾಡುವುದಕ್ಕೆ ಮುಂದಾಗಿದೆ. ಆ ಮೂಲಕ ಭಾರತದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದೆ. 2028 ರ ವೇಳೆಗೆ ದಾಖಲೆ ಬರೆಯುವುದು ಖಚಿತವಾಗಿದೆ.
ಶುಕ್ರಗ್ರಹದ ಅನ್ವೇಷಣೆಗೆ ಮುಂದಾದ ಇಸ್ರೋ
ಹೌದು. ಇಸ್ರೋ ಶುಕ್ರಗ್ರಹದ ಅನ್ವೇಷಣೆ ಮುಂದಾಗಿದ್ದು, ಇದಕ್ಕೆ ಸರ್ಕಾರವು ಕೈ ಜೋಡಿಸಿದೆ. 1200 ಕೋಟಿ ರೂ. ಪರವಾನಿಗೆಯನ್ನ ಸಹ ನೀಡಿದ್ದು, ಶುಕ್ರಗ್ರಹ ಉಡಾವಣೆಗೆ ಬೇಕಾದ ಸಿದ್ದತೆಯನ್ನ ವಿಜ್ಞಾನಿಗಳು ಶುರುಮಾಡಿದ್ದಾರೆ. ಅಂದಹಾಗೇ ಇಸ್ರೋ ಚಂದ್ರ, ಮಂಗಳಗ್ರಹ ಸೂರ್ಯನಿಗೆ ಸಂಬಂಧಿಸಿದಂತೆ ಹಲವು ಅನ್ವೇಷಣೆ ಮಾಡಿದೆ. ಅದೇ ರೀತಿ ಶುಕ್ರಗ್ರಹದ ಮೇಲೆ ಸದ್ಯ ಅನ್ವೇಷಣೆ ಮಾಡಲು ಮುಂದಾಗುತ್ತಿದೆ.
ಇದನ್ನೂ ಓದಿ: ಮಂಗಳಯಾನ ಕಕ್ಷೆಗೆ ತಲುಪಿ 10 ವರ್ಷ, ನೆಹರು ತಾರಾಲಯದಲ್ಲಿ ವಿಶೇಕ್ಷ ಪ್ರದರ್ಶನ ಕಂಡು ಹೆಮ್ಮೆ ಪಟ್ಟ ಜನ
ಶುಕ್ರಗ್ರಹ ಭೂಮಿಗೆ ಹತ್ತಿರವಿರುವ ಗ್ರಹ. ಇದು ಭೂಮಿಗೆ ಹತ್ತಿರದಲ್ಲಿದ್ದರು 4 ಸಾವಿರ ಕೋಟಿ ಕಿಲೋ ಮೀಟರ್ ವಾಪ್ತಿಯಲ್ಲಿದೆ. ಇದಕ್ಕೆ ಹೋಲಿಕೆ ಮಾಡಿದರೆ ಚಂದ್ರಗ್ರಹ 4 ಲಕ್ಷ ಕಿಲೋಮೀಟರ್ ದೂರದಲ್ಲಿದ್ದು, ಕೊಂಚ ಹತ್ತಿರದಲ್ಲಿದ್ದಾನೆ. ಆದರೆ ಈ ಶುಕ್ರಗ್ರಹ ಗಾತ್ರದಲ್ಲಿ ಭೂಮಿಯಷ್ಟೇ ದೊಡ್ಡದಾಗಿದ್ದರು, ಶುಕ್ರಗ್ರಹ ನರಕಸದೃಶವಾದ ಗ್ರಹವಾಗಿದೆ.
ಶುಕ್ರಗ್ರಹ ಮೇಲ್ಮೈ 450 ಸೆಂಟಿ ಗ್ರೇಯೆಟ್ ಉಷ್ಣಾಂಶ, ದಟ್ಟವಾದ ವಾತಾವರಣ ಹಾಗೂ ಕಾರ್ಬಾನ್ ಡೈಯಾಕ್ಸೈಡ್ ಇದೆ. ಈ ಕಾರಣದಿಂದಾಗಿ ಮನುಷ್ಯ ಎಂದಿಗೂ ಶುಕ್ರಗ್ರಹದಲ್ಲಿ ಇರಲು ಸಾಧ್ಯವಿಲ್ಲ. ಇಷ್ಟೊಂದು ಗಂಭೀರ ಪರಿಸ್ಥಿತಿಯಲ್ಲಿ ಶುಕ್ರಗ್ರಹ ಇರುವುದು ಯಾಕೆ ಎನ್ನುವುದನ್ನ ತಿಳಿದುಕೊಳ್ಳಲು ಹಲವು ದೇಶಗಳು ಪ್ರಯತ್ನ ಪಟ್ಟಿವೆ. ಆದರೆ ಭಾರತ ಶುಕ್ರಗ್ರಹದ ಮೇಲ್ಮೈನ ಪ್ರಕ್ರಿಯೆಗಳು, ಸಕ್ರಿಯ ಅಗ್ನಿಪರ್ವತ ಪ್ರದೇಶಗಳು ಮತ್ತು ಲಾವಾ ಹರಿವು ಸೇರಿದಂತೆ ಹೆಚ್ಚು ಆಳವಿಲ್ಲದ ಭೂಗರ್ಭ ಸ್ತರಗಳ ಕುರಿತಾದ ತನಿಖೆ, ವಾತಾವರಣದ ರಚನೆ, ಸಂಯೋಜನೆ ಮತ್ತು ಕ್ರಿಯಾಶೀಲತೆಯ ಅಧ್ಯಯನ ಹಾಗೂ ಶುಕ್ರನ ಅಯಾನುಗೋಳದ ಜತೆಗಿನ ಸೌರ ವಾಯುವಿನ ಮುಖಾಮುಖಿಯ ಬಗ್ಗೆ ತಿಳಿದುಕೊಳ್ಳಲು ಇಸ್ರೋ ಶುಕ್ರಯಾನ ಯೋಜನೆಯನ್ನ ರೂಪಿಸಿದ್ದು, 2028 ಮಾರ್ಚ್ ಅಂತ್ಯದ ವೇಳೆಗೆ ರಾಕೆಟ್ ಉಡಾವಣೆ ಮಾಡಲು ಸಜ್ಜಾಗುತ್ತಿದೆ.
ಇದನ್ನೂ ಓದಿ: National Space Day 2024 : ಭಾರತಕ್ಕೆ ಹೆಮ್ಮೆ ತಂದ ಇಸ್ರೋ, ಈ ಸಾಹಸದ ಹಿಂದಿದೆ ಹಲವು ವಿಜ್ಞಾನಿಗಳ ಶ್ರಮ
ಇನ್ನು ಶುಕ್ರಗ್ರಹ ಉಡಾವಣೆ ಮಾಡಿದ 128 ದಿನಗಳಲ್ಲಿ ಭೂಮಿಯಿಂದ ಶುಕ್ರಗ್ರಹವನ್ನ ರಾಕೆಟ್ ತಲುಪಲಿದ್ದು, ಈ ಶುಕ್ರಗ್ರಹಯಾನವನ್ನ ಮಾಡಲು ಚಂದ್ರಯಾನ 3 ಬಳಕೆ ಮಾಡಿದ ರಾಕೆಟ್ನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸದ್ಯ ಶುಕ್ರಯಾನ ಸಕ್ಸಸ್ಗೆ ವಿಜ್ಞಾನಿಗಳು ಸಿದ್ದತೆ ಮಾಡುತ್ತಿದ್ದಾರೆ.
ಇನ್ನು ವಿಜ್ಞಾನ ಲೋಕದಲ್ಲಿ ಭಾರತ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಶುಕ್ರಗ್ರಹದ ಬಗ್ಗೆ ಇಸ್ರೋ ಅನ್ವೇಷಣೆ ಮಾಡಲು ಮುಂದಾಗುತ್ತಿರುವುದರಿಂದ ಹಲವು ವಿಚಾರ ತಿಳಿದುಕೊಳ್ಳಬಹುದು. ನಮ್ಮ ವಿಜ್ಞಾನಿಗಳು ಇದರಲ್ಲಿ ಯಶಸ್ವಿಯಾಗಲಿ ಅಂತ ಸಿಲಿಕಾನ್ ಮಂದಿ ಹೇಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.