ಡ್ರಗ್ಸ್ದಂಧೆ, ಅದರ ಜಾಲ ಮತ್ತು ಅದರಲ್ಲಿ ಶಾಮೀಲಾಗಿರುವವರ ಬಗ್ಗೆ ಇಂದು ವಿಧಾನಪರಿಷತ್ನಲ್ಲಿ ಗಂಭೀರ ಸ್ವರೂಪದ ಚರ್ಚೆ ನಡೆದಿದೆ. ಸದಸ್ಯರು ಎತ್ತಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಶಾಲಾ–ಕಾಲೇಜುಗಳಲ್ಲಿ ಸಮಿತಿ ಮಾಡಿ ಜಾಗೃತಿ ಮೂಡಿಸುತ್ತೇವೆ, ಪೋಷಕರು ಸಹ ಮಕ್ಕಳ ಮುತುವರ್ಜಿ ವಹಿಸಬೇಕು, ಆರಂಭದಲ್ಲೇ ನಮಗೆ ಮಾಹಿತಿ ನೀಡಿದ್ರೆ ಅನುಕೂಲವಾಗುತ್ತದೆ ಎಂದು ಹೇಳಿದರು
‘‘ಸರ್ಕಾರ ಡ್ರಗ್ಸ್ ಪಿಡುಗಿನ ವಿರುದ್ಧ ನಮ್ಮ ಸರ್ಕಾರ ಸಮರ ಸಾರಿದೆ. 21 ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ 1.25 ಕೋಟಿ ಮೌಲ್ಯದ ಬೇರೆ ಬೇರೆ ವಿಧದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮೂವರು ವಿದೇಶಿಯರನ್ನು ಸಹ ವಶಕ್ಕೆ ಪಡೆಯಲಾಗಿದೆ ಮತ್ತು ನೈಜೀರಿಯಾ, ಶ್ರೀಲಂಕಾದ ಪ್ರಜೆಗಳನ್ನು ತನಿಖೆಗೊಳಪಡಿಸಲಾಗಿದೆ. ಇವರ ಜತೆಗೆ ನಟ–ನಟಿಯರು ಮತ್ತು ಸಮಾಜದಲ್ಲಿ ಪ್ರತಿಷ್ಠಿತರೆನಿಸಿಕೊಂಡಿರುವ ಕೆಲವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಸಮಾಜದಲ್ಲಿ ದೊಡ್ಡವರೆನಿಸಿಕೊಂಡವರನ್ನು ವಶಕ್ಕೆ ಪಡೆದು ತನಿಖೆ ಮಾಡೋದು ಅಷ್ಟು ಸುಲಭವಲ್ಲವೆಂದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಆದರೆ ಅಂಥದನ್ನೆಲ್ಲ ನಮ್ಮ ಸರ್ಕಾರ ಗಣನೆಗೆ ತೆಗೆದುಕೊಳ್ಳುವುದಿಲ್ಲ’’ ಎಂದು ಮಾಧುಸ್ವಾಮಿ ಹೇಳಿದರು.
ರಾಷ್ಟ್ರೀಯ ಕಾನೂನು ಶಾಲೆಯಿಂದ ಡ್ರಗ್ಸ್ ನಿಯಂತ್ರಣ ಬಗ್ಗೆ ಕರಡು ಕಾನೂನು ಶಿಫಾರಸು ನೀಡಲು ಮನವಿ ಮಾಡಲಾಗಿದೆ ಅದು ಲಭ್ಯವಾದ ನಂತರ ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಿ ಜಾರಿಗೊಳಿಸುಲಾಗುತ್ತದೆ ಅಂತಲೂ ಕಾನೂನು ಸಚಿವರು ಭರವಸೆ ನೀಡಿದರು.