ಎಲೆಕ್ಟ್ರಿಕ್ ವಾಹನ, ಏರೊಸ್ಪೇಸ್‌ ಪಾರ್ಕ್‌ ಸೇರಿದಂತೆ ರಾಜ್ಯದಲ್ಲಿ ₹ 21,746 ಕೋಟಿ ಹೂಡಿಕೆಗೆ ಒಪ್ಪಿಗೆ ನೀಡಿದ ಸರ್ಕಾರ

ಬೆಂಗಳೂರಿನ ಏರೊಸ್ಪೇಸ್‌ ಪಾರ್ಕ್‌, ಎಲೆಕ್ಟ್ರಿಕ್‌ ವಾಹನ ಉತ್ಪಾದನೆ ಸೇರಿದಂತೆ ರಾಜ್ಯದಲ್ಲಿ ₹ 21,746 ಕೋಟಿ ಹೂಡಿಕೆಯ 3 ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಮಿತಿ ಅನುಮತಿ ನೀಡಿದೆ.

ಎಲೆಕ್ಟ್ರಿಕ್ ವಾಹನ, ಏರೊಸ್ಪೇಸ್‌ ಪಾರ್ಕ್‌ ಸೇರಿದಂತೆ ರಾಜ್ಯದಲ್ಲಿ ₹ 21,746 ಕೋಟಿ ಹೂಡಿಕೆಗೆ ಒಪ್ಪಿಗೆ ನೀಡಿದ ಸರ್ಕಾರ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
guruganesh bhat

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 21, 2020 | 8:45 PM

ಬೆಂಗಳೂರು: ಬೆಂಗಳೂರಿನ ಏರೊಸ್ಪೇಸ್‌ ಪಾರ್ಕ್‌, ಎಲೆಕ್ಟ್ರಿಕ್‌ ವಾಹನ ಉತ್ಪಾದನೆ ಸೇರಿದಂತೆ ರಾಜ್ಯದಲ್ಲಿ ₹ 21,746 ಕೋಟಿ ಹೂಡಿಕೆಯ 3 ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಮಿತಿ ಅನುಮತಿ ನೀಡಿದೆ.

ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಯ 55ನೇ ಸಭೆಯಲ್ಲಿ 3 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್‌, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

ಒಪ್ಪಿಗೆ ನೀಡಲಾಗಿರುವ ಯೋಜನೆಗಳು ಬೋಯಿಂಗ್‌ ಇಂಡಿಯಾ ಪ್ರೈ. ಲಿ. ಎಲೆಕ್ಟ್ರಾನಿಕ್‌ ಏವಿಯಾನಿಕ್ಸ್ ಬೆಂಗಳೂರಿನ ಏರೋಸ್ಪೇಸ್‌ ಪಾರ್ಕ್‌ನ 36.5 ಎಕರೆಯಲ್ಲಿ ₹ 1,152 ಕೋಟಿ ಹೂಡಿಕೆ ಮಾಡಿ ವೈಮಾನಿಕ ಕ್ಷೇತ್ರದ ಉತ್ಪನ್ನಗಳ ಉತ್ಪಾದನೆ ಮತ್ತು ಜೋಡಣೆ ಮಾಡಲಿದೆ.

ಎಲೆಸ್ಟ್‌ ಪ್ರೈ ಲಿ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ 85 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಿಕ್‌ ವಾಹನ ಉತ್ಪಾದನೆ ಘಟಕ ಆರಂಭಿಸಲಿದ್ದು, ₹ 14,255 ಕೋಟಿ ರೂ. ಹೂಡಿಕೆ ಮಾಡಲಿದೆ.ಇದರಿಂದ 867 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಎಲೆಸ್ಟ್‌ ಪ್ರೈ. ಲಿ. ಹುಬ್ಬಳ್ಳಿ ಧಾರವಾಡದಲ್ಲಿ 88 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಿಕ್‌ ವಾಹನ ತಯಾರಿಕೆಗೆ ಅಗತ್ಯ ಇರುವ ಲಿಥಿಯಂ ಅಯಾನ್‌ ಸೆಲ್‌ ಮತ್ತು ಬ್ಯಾಟರಿ ಉತ್ಪಾದನೆ ಘಟಕ ಸ್ಥಾಪಿಸಲಿದ್ದು, ₹ 6,339 ಕೋಟಿ ರೂ. ಹೂಡಿಕೆ ಮಾಡಲಿದೆ. ಇದರಿಂದ 1,804 ಉದ್ಯೋಗ ಸೃಷ್ಟಿಯ ನಿರೀಕ್ಷೆಯಿದೆ.

ವಿದೇಶಿ ಬಂಡವಾಳ ಹೂಡಿಕೆ: 2ನೇ ಸ್ಥಾನಕ್ಕೇರಿದ ಅಮೆರಿಕಾ! ತಂತ್ರಜ್ಞಾನ ಕಂಪೆನಿಗಳಿಂದಲೇ ಹೆಚ್ಚು ಹೂಡಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada