ದಾವಣಗೆರೆ: ಜೈನ ಸಮುದಾಯದ ಒಂದೇ ಕುಟುಂಬದ ಐದು ಮಂದಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ನಗರದ ಹೊರವಲಯದ ಆವರಗೆರೆ ನಾಗೇಶ್ವರ್ ಪಾರ್ಶ್ವ ಭೈರವ ಜೈನ ದೇವಸ್ಥಾನದಲ್ಲಿ ಸನ್ಯಾಸತ್ವ ದೀಕ್ಷೆ ಪಡೆದಿದ್ದಾರೆ. ಕುಟುಂಬದ ಎಲ್ಲ ಸದಸ್ಯರಿಂದ ಸನ್ಯಾಸ ಸ್ವೀಕಾರ ಮಾಡಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲಾಗಿದೆ.
ವರದಿಚಂದ್ ಜಿ(75), ಮಗ ಅಶೋಕ್ಕುಮಾರ್(47), ಸೊಸೆ ಭಾವನಾ(45), ಮೊಮ್ಮೊಕ್ಕಳಾದ ಪಕ್ಷಾಲ್(17) ಹಾಗೂ ಜಿನಾಂಕ(16) ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ. ಸಕಲ ವಿಧಿ ವಿಧಾನದ ಮೂಲಕ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಲಾಗಿದೆ.
ಆಚಾರ್ಯ ಮೇಘ ದರ್ಶನ, ಸುರೀಜಿ ಮಹಾರಾಜ ಆಚಾರ್ಯ ಗಚ್ಚಾಧಿಪತಿ ಉದಯ ಪ್ರಭಾ ಸುರೀಜಿ ಮಹಾರಾಜ ನೇತೃತ್ವದಲ್ಲಿ ಒಂದೇ ಕುಂಬದ ಐವರು ಸನ್ಯಾಸತ್ವ ಸ್ವೀಕರಿಸಿದ್ದಾರೆ. ದೀಕ್ಷೆ ಪಡೆದ ಐವರು ಸನ್ಯಾಸಿಗಳು ಜೈನ ಧರ್ಮದ ಪ್ರಸಾರ ಮಾಡಲಿದ್ದಾರೆ.
ಇದನ್ನೂ ಓದಿ: ಜೈನ ಸನ್ಯಾಸಿಯಾದರು ಕೋಟ್ಯಧೀಶನ ಏಕೈಕ ಪುತ್ರಿ