ಮೈಸೂರು: ಜಿಲ್ಲಾ ಜೆಡಿಎಸ್ ನಾಯಕ ಬೆಳವಾಡಿ ಶಿವಮೂರ್ತಿ ಅವರ ಪುತ್ರ ಪ್ರದೀಪ್ (32) ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ರಾತ್ರಿ ಮರಟಿಕ್ಯಾತನಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ಪ್ರದೀಪ್ ಸೂಸೈಡ್ ಮಾಡಿಕೊಂಡಿದ್ದಾರೆ. ಸೂಸೈಡ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬೆಳವಾಡಿ ಶಿವಮೂರ್ತಿ ಜಿಲ್ಲಾ ಜೆಡಿಎಸ್ ಖಜಾಂಚಿ ಆಗಿದ್ದಾರೆ. ಪ್ರದೀಪ್ ತಾಯಿ ಭಾಗ್ಯ ಶಿವಮೂರ್ತಿ ಮೈಸೂರು ಜಿಲ್ಲಾ ಪಂಂಚಾಯತ್ ಅಧ್ಯಕ್ಷರಾಗಿದ್ದರು.
ಚನ್ನಪಟ್ಟಣ: ತಾಯಿಯ ಕಗ್ಗೊಲೆ, ಪುತ್ರನ ಮೇಲೆ ಭೀಕರ ಹಲ್ಲೆ
ರಾಮನಗರ: ಗುರುವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಹೊಡೆದು ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದಿದೆ. ಹತ್ಯೆಯ ನಂತರ ಚಿನ್ನದ ಸರ, ವಾಲೆ ಕಿತ್ತುಕೊಂಡು ಕೊಲೆಗಡುಕ ಪರಾರಿಯಾಗಿದ್ದಾರೆ. ಜಯಮ್ಮ(60) ಮೃತ ಮಹಿಳೆ. ಜಯಮ್ಮ ಮಗ ಸಿದ್ದರಾಜು(42) ಮೇಲೆ ಕೂಡ ಹಲ್ಲೆ ನಡೆದಿದೆ. ಅಪರಿಚಿತ ಕೊಲೆಗಡುಕ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ. ಜಯಮ್ಮ ಮಗ ಸಿದ್ದರಾಜು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ನಂತರ ಸಿದ್ದರಾಜು ಅವರ ಬೈಕ್ ಅನ್ನು ಸಹ ಎತ್ತಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
52 ಬೈಕ್ ಕಳ್ಳತನ, ಮನೆಯಲ್ಲೇ ದಾಖಲೆ ಸೃಷ್ಟಿ ಮಾಡುತ್ತಿದ್ದ ವಿದ್ಯಾರಣ್ಯಪುರ ಪೊಲೀಸ್ ಕಾನ್ಸ್ಟೇಬಲ್ ಪೊಲೀಸರ ವಶಕ್ಕೆ ಬೆಂಗಳೂರು: ರಾಜಧಾನಿ ಬೆಂಗಳೂರು ಮಂದಿ ಬೆಚ್ಚಿಬೀಳುವಂತೆ ಭಾರೀ ವ್ಯವಸ್ಥಿತವಾಗಿ ದ್ವಿಚಕ್ರ ವಾಹನಗಳ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಅಂದರ್ ಆಗಿದೆ. ಬೆಂಗಳೂರು ಸುತ್ತಮುತ್ತ ಬೈಕ್ಗಳ ಕಳ್ಳತನಕ್ಕೆ ಕುಮ್ಮಕ್ಕು ನೀಡುತ್ತಿದ್ದ, ವಾಹನಗಳ್ಳರಿಗೆ ತನ್ನ ಮನೆಯಲ್ಲೇ ಆಶ್ರಯ ನೀಡುತ್ತಿದ್ದ, ಮನೆಯಲ್ಲೇ ಕದ್ದ ಬೈಕ್ಗಳ ದಾಖಲೆ ತಯಾರು ಮಾಡ್ತಿದ್ದ ಐನಾತಿ ಪೊಲೀಸ್ ಕಾನ್ಸ್ಟೇಬಲ್ನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಕ್ ಕಳ್ಳತನ ಪ್ರಕರಣದಲ್ಲಿ ವಿದ್ಯಾರಣ್ಯಪುರ ಪೊಲೀಸ್ ಕಾನ್ಸ್ಟೇಬಲ್ ಹೊನ್ನಪ್ಪ A1 ಆರೋಪಿಯಾಗಿದ್ದಾರೆ. ಹೊನ್ನಪ್ಪನ ಜೊತೆಗೆ ರವಿ ಎಂಬುವವನೂ ಶಾಮೀಲಾಗಿದ್ದು, ಇನ್ನೂ ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಗಡಿ ರಸ್ತೆ ಪೊಲೀಸರು ಈ ಸಂಬಂಧ ಯಶಸ್ವೀ ಕಾರ್ಯಾಚರಣೆ ನಡೆಸಿದ್ದಾರೆ.
ತನ್ನ ಮನೆಯಲ್ಲಿ ಹುಡುಗರಿಗೆ ಆಶ್ರಯ ನೀಡಿ, ಬೈಕ್ಗಳ ಕಳ್ಳತನ ಮಾಡಿಸುತ್ತಿದ್ದ ಬಂಧಿತ ಪೊಲೀಸ್ ಕಾನ್ಸ್ಟೇಬಲ್ ಹೊನ್ನಪ್ಪ. ರಮೇಶ್ ಮತ್ತು ಇಬ್ಬರು ಅಪ್ರಾಪ್ತರ ತಂಡವು ಬೆಂಗಳೂರು ಸುತ್ತಮುತ್ತ ಬೈಕ್ಗಳನ್ನು ಕದಿಯುತ್ತಿತ್ತು. ಇವರೆಲ್ಲರೂ ಕಾನ್ಸ್ಟೇಬಲ್ ಮನೆಯಲ್ಲೇ ಉಳಿದುಕೊಂಡು ಕುಕೃತ್ಯ ಎಸಗುತ್ತಿದ್ದರು.
ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ವೃದ್ಧೆ ಸರ ಕದ್ದ ಖದೀಮರು ತುಮಕೂರು: ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಸರ ಕಳವು ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ರೀಕ್ಷಣಾ ಮಂದಿರದ ಬಳಿ ನಡೆದಿದೆ. ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಸುಮಾರು 35 ಗ್ರಾಂ ಚಿನ್ನದ ಸರವನ್ನು ಖದೀಮರು ಕದ್ದಿದ್ದಾರೆ.
ಪಟ್ಟಣದ ಅಕ್ಕಮ್ಮ ಎಂಬುವರು ನಿರೀಕ್ಷಣಾ ಮಂದಿರದ ಬಳಿ ಹೋಗುವಾಗ ಬೈಕ್ನಲ್ಲಿ ಬಂದ ಮೂವರು ನಾವು ಸಿಐಡಿ ಅಧಿಕಾರಿಗಳು, ಚಿನ್ನದ ಸರ ಸೆರಗಿನಲ್ಲಿ ಕಟ್ಟಿಕೊಳ್ಳಿ ಎಂದು ಹೇಳಿದ್ದಾರೆ. ಅಲ್ಲದೆ ತಾವೇ ಕಟ್ಟಿಕೊಡುವುದಾಗಿ ತಿಳಿಸಿ ಚಿನ್ನದ ಸರ, ಉಂಗುರಗಳನ್ನು ಪಡೆದು ಪರಾರಿಯಾಗಿದ್ದಾರೆ. ಮನೆಗೆ ಹೋಗಿ ಸೆರಗಿನ ಗಂಟು ಬಿಚ್ಚಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಗಂಟಿನಲ್ಲಿ ಕಲ್ಲುಗಳು ಪತ್ತೆಯಾಗಿದ್ದು ವೃದ್ದೆ ಗಾಬರಿಯಾಗಿ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಯಿ-ಮಗಳ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆ ಸೂಪರ್ ಮಾರ್ಕೆಟ್ನಲ್ಲಿ ವಸ್ತುಗಳ ಖರೀದಿ ನೆಪದಲ್ಲಿ ತಾಯಿ-ಮಗಳು ತಮ್ಮ ಕೈ ಚಳಕ ತೋರಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳ್ಳಾರಿ ಸೂಪರ್ ಮಾರ್ಕೆಟ್ ನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ತಾಯಿ ಮಗಳು ಕಳ್ಳತನ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಘಟನೆ ಈಗ ಬೆಳಕಿಗೆ ಬಂದಿದೆ. ತಾಯಿ-ಮಗಳು ಅಂಗಡಿ ತುಂಬೆಲ್ಲಾ ಸುತ್ತಾಡಿ ವಸ್ತುಗಳ ಕಳ್ಳತನ ಮಾಡಿ ಬಟ್ಟೆಯೊಳಗೆ ಇಟ್ಟುಕೊಂಡು ಪರಾರಿಯಾಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇದನ್ನು ಓದಿ:
Humble Politiciann Nograj: ಮತ್ತೆ ‘ಹಂಬಲ್ ಪೊಲಿಟಿಶಿಯನ್’ ಆದ ದಾನಿಶ್; ಮಜವಾದ ಟ್ರೈಲರ್ ಇಲ್ಲಿದೆ