ನಿಖಿಲ್‌ ರಾಜೀನಾಮೆಗೆ ಜೆಡಿಎಸ್​​ ಕಾರ್ಯಕರ್ತರಿಂದಲೇ ಒತ್ತಾಯ

ನಿಖಿಲ್‌ ರಾಜೀನಾಮೆಗೆ ಜೆಡಿಎಸ್​​ ಕಾರ್ಯಕರ್ತರಿಂದಲೇ ಒತ್ತಾಯ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. JDS ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂಬ ಪೋಸ್ಟ್ ಗಳನ್ನು ಹಾಕುವ ಮೂಲಕ JDS ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಯುವ ಜೆಡಿಎಸ್ ಅಧ್ಯಕ್ಷರಾಗಿ ನೇಮಕಗೊಂಡರು ಯಾವುದೇ ಪ್ರಯೋಜನವಾಗಿಲ್ಲ. ಪಕ್ಷ ಸಂಘಟನೆ ಅಥವಾ ಪಕ್ಷದ ಏಳಿಗೆಗೆ ಏನು ಮಾಡುತ್ತಿಲ್ಲ. ಹೀಗಾಗಿ ಇಂತಹ ಅಧ್ಯಕ್ಷ ಜೆಡಿಎಸ್​ಗೆ ಬೇಡ ಎಂಬ ಕೂಗುಗಳು ಜೆಡಿಎಸ್​ನಿಂದಲೇ ಕೇಳಿ ಬರುತ್ತಿವೆ.

ಮೊದಲು ರಾಜೀನಾಮೆ ನೀಡಿ, ನಂತರ ಸಿನಿಮಾ ಮಾಡಿ:  ನಿಖಿಲ್‌ ಕುಮಾರಸ್ವಾಮಿಗೆ ಯುವ ಜೆಡಿಎಸ್ ಅಧ್ಯಕ್ಷ ಸ್ಥಾನ ಯಾಕೆ ಬೇಕು? ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಆ ನಂತ್ರ ನೀವು ಸಿನಿಮಾಗಳನ್ನ ಮಾಡಿಕೊಂಡು ಇದ್ದು ಬಿಡಿ. ಯುವ ಘಟಕದ ಹಿಂದಿನ ಅಧ್ಯಕ್ಷರು ವಿದೇಶ ಸುತ್ತುತ್ತಿದ್ದರು, ಪಕ್ಷಕ್ಕಾಗಿ ದುಡಿಯುತ್ತಿದ್ದರು. ಆದರೆ ಈಗಿನ ರಾಜ್ಯಾಧ್ಯಕ್ಷರು ಮತ್ತೆ ಸಿನಿಮಾಗಳನ್ನ ಮಾಡ್ತಾರಂತೆ. ಪಾಪ ಸಿನಿಮಾ ಮಾಡುವುದು ಅವರ ಅಮ್ಮನ ಆಸೆಯಂತೆ ಎಂದು ನಿಖಿಲ್ ಕುಮಾರ್ ವಿರುದ್ಧ JDS ಕಾರ್ಯಕರ್ತರು ಲೇವಡಿ ಮಾಡುತ್ತಿದ್ದಾರೆ.

ನಿಖಿಲ್‌ಗೆ ಶೋಕಿಗೂ, ರಾಜಕೀಯಕ್ಕೂ ವ್ಯತ್ಯಾಸ ಗೊತ್ತಿಲ್ಲ. ಅವರನ್ನ ಅಧ್ಯಕ್ಷರನ್ನಾಗಿ ಮಾಡಿ ಮರ್ಯಾದೆ ತೆಗೀತಿದ್ದಾರೆ. ನಮ್ಮ ಪಕ್ಷವನ್ನು ನಂಬಿ ಬಂದವರು ನೆಲಸಮ ಆಗುತ್ತಾರೆ. ಇವರನ್ನ ನೋಡಿ ಜಿಗುಪ್ಸೆ ಬಂದಿದೆ ಎಂದು ನಿಖಿಲ್ ನಾಯಕತ್ವದ ವಿರುದ್ಧದ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Published On - 12:28 pm, Sun, 10 November 19

Click on your DTH Provider to Add TV9 Kannada