ಪ್ರೇಮಿಗಳ ದಿನಕ್ಕೆ ಮೂರು ದಿನ ಮುಂಚೆ.. ಮದುವೆ ಮಾಡಲು ವಿಳಂಬ ಮಾಡಿದ್ದಕ್ಕೆ ನೇಣು ಬಿಗಿದುಕೊಂಡ ಪ್ರೇಮಿಗಳು

Lovers Suicide | ಫೆಬ್ರವರಿ 11ರಂದು ನಾಪತ್ತೆಯಾಗಿದ್ದ ಪ್ರೇಮಿಗಳು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಂತಹದೊಂದು ಭಯಾನಕ ಘಟನೆ ಜಿಲ್ಲೆಯ ಯಡ್ರಾಮಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಪರಶುರಾಮ ಪೂಜಾರಿ(23), ಭಾಗ್ಯಶ್ರೀ(19) ಮೃತ ಪ್ರೇಮಿಗಳು.

  • TV9 Web Team
  • Published On - 10:13 AM, 16 Feb 2021
ಪ್ರೇಮಿಗಳ ದಿನಕ್ಕೆ ಮೂರು ದಿನ ಮುಂಚೆ.. ಮದುವೆ ಮಾಡಲು ವಿಳಂಬ ಮಾಡಿದ್ದಕ್ಕೆ ನೇಣು ಬಿಗಿದುಕೊಂಡ ಪ್ರೇಮಿಗಳು
ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಪ್ರೇಮಿಗಳ ಶವ

ಕಲಬುರಗಿ: ಪ್ರೇಮಿಗಳ ದಿನಕ್ಕೆ ಮೂರು ದಿನ ಮುಂಚೆ ಅಂದ್ರೆ ಫೆಬ್ರವರಿ 11ರಂದು ನಾಪತ್ತೆಯಾಗಿದ್ದ ಪ್ರೇಮಿಗಳು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಂತಹದೊಂದು ಭಯಾನಕ ಘಟನೆ ಜಿಲ್ಲೆಯ ಯಡ್ರಾಮಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಪರಶುರಾಮ ಪೂಜಾರಿ(23), ಭಾಗ್ಯಶ್ರೀ(19) ಮೃತ ಪ್ರೇಮಿಗಳು. ಪ್ರೀತಿಗೆ ವಿರೋಧವಿದ್ದರೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲಿ ಪೂಜಾರಿ ಮತ್ತು ಭಾಗ್ಯಶ್ರೀ ಮನೆಯಲ್ಲಿ ಇವರಿಬ್ಬರ ಪ್ರೀತಿಗೆ ಯಾರು ವಿರೋಧಿಸಿರಲಿಲ್ಲ. ಆದರೂ ಪ್ರೀಮಿಗಳು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ಇವರ ಶವ ಪತ್ತೆಯಾಗಿದೆ.

ಪೂಜಾರಿ ಮತ್ತು ಭಾಗ್ಯಶ್ರೀ ಯಡ್ರಾಮಿ ತಾಲೂಕಿನ ಮಾನಶಿವನಗಿ ಗ್ರಾಮದ ನಿವಾಸಿಗಳು. ಇವರಿಬ್ಬರೂ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು ಮದುವೆ ಮಾಡುವುದಕ್ಕೆ 2 ಕುಟುಂಬಗಳಿಂದ ಒಪ್ಪಿಗೆ ಸಿಕ್ಕಿತ್ತು. ಆದ್ರೆ ಮದುವೆ ಮಾಡಲು ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಮನೆಯಿಂದ ನಾಪತ್ತೆಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ನಿನ್ನೆ ಸಂಜೆ ಯಡ್ರಾಮಿ ಪಟ್ಟಣದ ಹೊರವಲಯದಲ್ಲಿ ಒಂದೇ ಮರಕ್ಕೆ ಇಬ್ಬರೂ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಯಾದಗಿರಿಯಲ್ಲಿ ಪ್ರೇಮಿಗಳ ಆತ್ಮಹತ್ಯೆ: ಸಾವಿನಲ್ಲಿ ಒಂದಾದ ಜೋಡಿ ಹಕ್ಕಿಗಳು