ಕಲಬುರ್ಗಿ ಸಿಪಿಐ ಮೇಲೆ ಮಹಾರಾಷ್ಟ್ರದ ಗಾಂಜಾ ದಂಧೆಕೋರರಿಂದ ಹಲ್ಲೆ: ಸರ್ವಿಸ್ ಪಿಸ್ತೂಲ್, ಉಂಗುರ ಕಿತ್ತುಕೊಂಡ ದುಷ್ಕರ್ಮಿಗಳು

| Updated By: ಆಯೇಷಾ ಬಾನು

Updated on: Sep 25, 2022 | 7:50 AM

ಸಿಪಿಐ ಶ್ರೀಮಂತ್ ಇಲ್ಲಾಳ್ ಮೇಲೆ ಹಲ್ಲೆ ನಡೆಸಿ ಖದೀಮರು ಪಿಸ್ತೂಲ್ ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸಿಪಿಐ ಬಳಿ ಇದ್ದ ಸರ್ವಿಸ್ ಪಿಸ್ತೂಲ್​, ಹಣ, ಮೊಬೈಲ್​​, ಚಿನ್ನದ ಉಂಗುರವನ್ನು ಗಾಂಜಾ ದಂಧೆಕೋರರು ಕದ್ದೊಯ್ದಿದ್ದಾರೆ.

ಕಲಬುರ್ಗಿ ಸಿಪಿಐ ಮೇಲೆ ಮಹಾರಾಷ್ಟ್ರದ ಗಾಂಜಾ ದಂಧೆಕೋರರಿಂದ ಹಲ್ಲೆ: ಸರ್ವಿಸ್ ಪಿಸ್ತೂಲ್, ಉಂಗುರ ಕಿತ್ತುಕೊಂಡ ದುಷ್ಕರ್ಮಿಗಳು
ಮಂಠಾಳ ಠಾಣೆ
Follow us on

ಕಲಬುರಗಿ: ಕಲಬುರಗಿ ಗ್ರಾಮೀಣ ಠಾಣೆಯ ಸಿಪಿಐ ಶ್ರೀಮಂತ್ ಇಲ್ಲಾಳ್ ಮೇಲೆ ಗಾಂಜಾ ದಂಧೆಕೋರರಿಂದ ಮಾರಣಾಂತಿಕ ಹಲ್ಲೆ ಕೇಸ್‌ ಸಂಬಂಧಿಸಿ ಮಂಠಾಳ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಮಹಾರಾಷ್ಟ್ರದ ಉಮ್ಮರ್ಗಾ ಠಾಣಾ ವ್ಯಾಪ್ತಿಯಲ್ಲಿ ಸಿಪಿಐ ಮೇಲೆ ಹಲ್ಲೆ ನಡೆದಿತ್ತು. ಗಾಂಜಾ ಬೆಳೆದ ಜಮೀನು ಇರೋದು ಮಂಠಾಳ ಠಾಣಾ ವ್ಯಾಪ್ತಿಯಲ್ಲಿ ಹೀಗಾಗಿ ಪ್ರಕರಣ ದಾಖಲಿಸುವ ಬಗ್ಗೆ ಪೊಲೀಸರು ಗೊಂದಲದಲ್ಲಿದ್ದರು. ಕೊನೆಗೆ ಹಲ್ಲೆ ಕೇಸ್‌ ಸಂಬಂಧ ಮಂಠಾಳ ಠಾಣೆಯಲ್ಲಿ ಮೊಕದ್ದಮೆ ಹೂಡಿದ್ದಾರೆ.

ಘಟನೆ ನಡೆದು 27 ಗಂಟೆಗಳ ನಂತರ ಪ್ರಕರಣ ದಾಖಲಾಗಿದೆ. ಕಳೆದ ರಾತ್ರಿ 11 ಗಂಟೆಗೆ ಅಧಿಕೃತವಾಗಿ ದೂರು ದಾಖಲಾಗಿದೆ. ಹಲ್ಲೆ ನಡೆದ ಸ್ಥಳ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿರೋದರಿಂದ ದೂರು ದಾಖಲಿಸುವ ಬಗ್ಗೆ ಗೊಂದಲ ಇತ್ತು. ಸದ್ಯ ಈಗ ಮಹಗಾಂವ್ ಠಾಣೆಯ ಪಿಎಸ್ಐ ಆಶಾ ಮಂಠಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಲ್ಲೆ ನಡೆಸಿ ಸರ್ವಿಸ್ ಪಿಸ್ತೂಲ್ ಕದ್ದ ಖದೀಮರು

ಇನ್ನು ಸಿಪಿಐ ಶ್ರೀಮಂತ್ ಇಲ್ಲಾಳ್ ಮೇಲೆ ಹಲ್ಲೆ ನಡೆಸಿ ಖದೀಮರು ಪಿಸ್ತೂಲ್ ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸಿಪಿಐ ಬಳಿ ಇದ್ದ ಸರ್ವಿಸ್ ಪಿಸ್ತೂಲ್​, ಹಣ, ಮೊಬೈಲ್​​, ಚಿನ್ನದ ಉಂಗುರವನ್ನು ಗಾಂಜಾ ದಂಧೆಕೋರರು ಕದ್ದೊಯ್ದಿದ್ದಾರೆ. ಪೊಲೀಸ್ ಸಿಬ್ಬಂದಿ ಬಳಿ ಇದ್ದ ಹಣವನ್ನೂ ದೋಚಿದ್ದಾರೆ. ಸರ್ವಿಸ್​ ಪಿಸ್ತೂಲ್​ನಲ್ಲಿ 8 ಜೀವಂತ ಗುಂಡುಗಳು ಇದ್ದ ಮಾಹಿತಿ ಇದೆ. ಸರ್ವಿಸ್ ಪಿಸ್ತೂಲ್ ನಾಪತ್ತೆಯಾಗಿರುವುದು ಪೊಲೀಸ್ ಇಲಾಖೆಗೆ ತಲೆ ನೋವು ತಂದಿದೆ. ಹೀಗಾಗಿ ಗಾಂಜಾ ದಂಧೆಕೋರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇದನ್ನೂ ಓದಿ: ಸಿಪಿಐ ಮೇಲೆ ಮಾರಣಾಂತಿಕ ಹಲ್ಲೆ ಕೇಸ್‌: ಚಿಕಿತ್ಸೆಗೆ ಸ್ಪಂದಿಸುತ್ತಿರುವ ಸಿಪಿಐ ಶ್ರೀಮಂತ್​ ಇಲ್ಲಾಳ್: ಡಾ ವಿಕ್ರಮ ಸಿದ್ದಾರೆಡ್ಡಿ

ಗಾಂಜಾ ದಂಧೆಕೋರರು ಅರ್ಧ ಎಕರೆ ಜಾಗದಲ್ಲಿ ಗಾಂಜಾ ಬೆಳದಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹೊನ್ನಳ್ಳಿ ಹೊರವಲಯದ ಕೃಷಿ‌ ಜಮೀನಿನ ಸೋಯಾ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದಾರೆ. ಆರೋಪಿಗಳು ಮಹಾರಾಷ್ಟ್ರ ಮೂಲದವರು. ಇವರು ವಿವಿಧ ಬೆಳೆಗಳ ನಡುವೆ ಗಾಂಜಾ ಬೆಳೆದು ಗಾಂಜಾ ಗಿಡಗಳು ಒಣಗಿದ ನಂತರ ಮಾರಾಟ ಮಾಡುತ್ತಿದ್ದರು. ಇದೇ ಮಾಹಿತಿ ಮೇರೆಗೆ ದಾಳಿಗೆ ಹೋಗಿದ್ದ ಕಲಬುರಗಿ ಸಿಪಿಐ ಶ್ರೀಮಂತ ಇಲ್ಲಾಳ್ ಮತ್ತು ತಂಡದವರ ಮೇಲೆ ದಾಳಿ ನಡೆಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಾಗೂ ಅವರ ಬಳಿ ಇದ್ದ ಎಲ್ಲವನ್ನೂ ಕದ್ದಿದ್ದಾರೆ.

ಘಟನೆ ಹಿನ್ನೆಲೆ

ಸೆ.23ರಂದು ಮಂಠಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದು. ಕಲಬುರಗಿ ಗ್ರಾಮೀಣ ಠಾಣೆಯ ಸಿಪಿಐ ಶ್ರೀಮಂತ್ ಇಲ್ಲಾಳ್ ರ ಮೇಲೆ ಅಂದು ರಾತ್ರಿ ಗಾಂಜಾ ದಂಧೆದೋಕರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನೆರೆಯ ಮಹರಾಷ್ಟ್ರದ ಉಮ್ಮರ್ಗಾ ತಾಲೂಕಿನ ತರೂರಿ ಅನ್ನೋ ಗ್ರಾಮದ ಹೊರವಲಯದಲ್ಲಿ ಮೂವತ್ತಕ್ಕೂ ಹೆಚ್ಚು ಗಾಂಜಾ ದಂದೆಕೋರರು, ಕಬ್ಬಿಣದ ರಾಡ್, ಬಡಿಗೆಯಿಂದ ಸಿಪಿಐ ಶ್ರೀಮಂತ್ ಇಲ್ಲಾಳ್ ಮೇಲೆ ಅಟ್ಯಾಕ್ ಮಾಡಿದ್ದಾರೆ.

ಎರಡು ದಿನದ ಹಿಂದೆ ಶ್ರೀಮಂತ್ ಇಲ್ಲಾಳ್, ಕಲಬುರಗಿಯ ಬಾಬು ನಗರದ ನಿವಾಸಿಯಾಗಿದ್ದ ನವಿನ್ ಅನ್ನೋ ಗಾಂಜಾ ಮಾರಾಟಗಾರನನ್ನು ಕಮಲಾಪುರ ತಾಲೂಕಿನ ದಸ್ತಾಪುರ ಬಳಿ ಬಂಧಿಸಿದ್ರು. ಆತನಿಗೆ ಬೆಂಡೆತ್ತಿದಾಗ ಗಾಂಜಾವನ್ನು ಮಹಾರಾಷ್ಟ್ರದ ಗಡಿಭಾಗದಿಂದ ತರೋದಾಗಿ ಬಾಯ್ಬಿಟ್ಟಿದ್ದ ಕೂಡಲೇ ಅಲರ್ಟ್ ಆದ ಸಿಪಿಐ ಶ್ರೀಮಂತ್ ಇಲ್ಲಾಳ್ ಮತ್ತು ಅವರ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಸೆ.23ರ ರಾತ್ರಿ ಸುಮಾರು 9 ಗಂಟೆಗೆ ಮಹಾರಾಷ್ಟ್ರದ ಉಮ್ಮರ್ಗಾಕ್ಕೆ ತೆರಳಿದ್ರು. ಕೆಲ ಪೊಲೀಸ್ರು ಉಮ್ಮರ್ಗಾ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲು ಹೋದ್ರೆ, ಇತ್ತ ಸಿಪಿಐ ಶ್ರೀಮಂತ್ ಇಲ್ಲಾಳ್ ಮತ್ತು ಕೆಲ ಸಿಬ್ಬಂದಿ ಗಾಂಜಾ ಬೆಳದಿದ್ದ ಜಮೀನಿನ ಬಳಿ ನಿಂತುಕೊಂಡಿದ್ರು. ಈ ವೇಳೆ ಏಕಾಏಕಿ 30ಕ್ಕೂ ಹೆಚ್ಚು ಗಾಂಜಾ ದಂಧೆಕೋರರು ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಕೆಲ ಪೊಲೀಸ್ರು ಓಡಿ ಹೋದ್ರೆ ಕೈಗೆ ಸಿಕ್ಕ ಶ್ರೀಮಂತ್ ಇಲ್ಲಾಳ್ ಮೇಲೆ ಕ್ರಿಮಿಗಳು ಕಬ್ಬಿಣದ ರಾಡ್, ಕೋಲುಗಳಿಂದ ಮನಸೋಇಚ್ಚೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: Immunity: ಈ ಲಕ್ಷಣಗಳು ಕಂಡುಬಂದರೆ, ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದೆ ಎಂದರ್ಥ!

ಬಳಿಕ ಉಮ್ಮರ್ಗಾ ಪೊಲೀಸರು ಸ್ಥಳಕ್ಕೆ ಬಂದ ಮೇಲೆ ಶ್ರೀಮಂತ್ ಇಲ್ಲಾಳರನ್ನು ಹುಡುಕಿದ ಪೊಲೀಸರು, ಬಸವಕಲ್ಯಾಣದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಶ್ರೀಮಂತ್ ಇಲ್ಲಾಳ್, ಮುಖದ ಎಲಬು, ಪಕ್ಕೆಲಬುಗಳು ಮುರಿದಿದ್ದು, ಮೆದುಳಿಗೆ ಗಂಭೀರ ಗಾಯಗಳಾಗಿ ಪರಿಸ್ಥಿತಿ ಚಿಂತಾಜನಕವಾಗಿದೆ.

ಗೃಹ ಸಚಿವರು ಕೂಡಾ ಎಸ್​ಪಿ​ಗೆ ಕರೆ ಮಾಡಿ ಅವಶ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಅಥವಾ ಹೈದ್ರಾಬಾದ್​ಗೆ ಏರ್ ಲಿಫ್ಟ್ ಮಾಡಲು ಸೂಚಿಸಿದ್ದಾರೆ. ಇನ್ನು ಸಿಪಿಐ ಮೇಲೆ ಹಲ್ಲೆ ನಡೆಸಿದವರ ಬಂಧನಕ್ಕೆ ಆಗ್ರಹಿಸಿ ಖಾಸಗಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:49 am, Sun, 25 September 22