ಕಲಬುರಗಿ: ಭಾನಾಮತಿ ಮಾಡಿದ್ದಾರೆಂದು ತಾಯಿ, ಮಗ, ಸೊಸೆಯನ್ನು ಥಳಿಸಿದ ಸ್ಥಳೀಯರು

ಮಾಟ ಮಂತ್ರ ಮಾಡಿದ್ದಾರೆಂಬ ಶಂಕೆ ವ್ಯಕ್ತವಾದ ಹಿನ್ನೆಲೆ ಪರದಾರ ಮೋತಕಪಳ್ಳಿ ಗ್ರಾಮದ 14 ಜನರು ಶಿವಲೀಲಾ, ಬಕ್ಕಮ್ಮ, ಸಂಗಪ್ಪಾ ಎನ್ನುವವರನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಏಪ್ರಿಲ್ ಒಂದರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

  • TV9 Web Team
  • Published On - 6:41 AM, 14 Apr 2021
ಕಲಬುರಗಿ: ಭಾನಾಮತಿ ಮಾಡಿದ್ದಾರೆಂದು ತಾಯಿ, ಮಗ, ಸೊಸೆಯನ್ನು ಥಳಿಸಿದ ಸ್ಥಳೀಯರು
ಭಾನಾಮತಿ ಮಾಡಿದ್ದಾರೆಂದು ಮೂವರಿಗೆ ಥಳಿಸಿದ ಸ್ಥಳೀಯರು

ಕಲಬುರಗಿ: ಭಾನಾಮತಿ ಮಾಡಿದ್ದಾರೆಂದು ಮೂವರನ್ನು ಕಂಬಕ್ಕೆ ಕಟ್ಟಿಹಾಕಿ ಸ್ಥಳೀಯರು ಥಳಿಸಿದ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಮಾಟ ಮಂತ್ರ ಮಾಡಿದ್ದಾರೆಂಬ ಶಂಕೆ ವ್ಯಕ್ತವಾಗಿದ್ದ ಹಿನ್ನೆಲೆ ಪರದಾರ ಮೋತಕಪಳ್ಳಿ ಗ್ರಾಮದ 14 ಜನರು ಶಿವಲೀಲಾ, ಬಕ್ಕಮ್ಮ, ಸಂಗಪ್ಪಾ ಎನ್ನುವವರನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಏಪ್ರಿಲ್ ಒಂದರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣ ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ದಾವಣಗೆರೆ: ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ಘಟನೆ ದಾವಣಗೆರೆಯ ಆಜಾದ್ ನಗರದಲ್ಲಿ ತಡರಾತ್ರಿ ನಡೆದಿದೆ. ಅಸಾದುಲ್ಲಾ ಎಂಬುವವರಿಗೆ ಸೇರಿದ ಬೈಕ್​​ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಹಳೆಯ ದ್ವೇಷದ ಹಿನ್ನೆಲೆ ಈ ಕೃತ್ಯ ನಡೆದಿದೆ ಎಂಬ ಅನುಮಾನ ವ್ಯಕ್ಯವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಆಜಾದ್​​ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅಫೀಮು ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ
ಬೆಂಗಳೂರು: ಅಫೀಮು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಸುರೇಶ್ ಕುಮಾರ್ ಎಂಬಾತ ಬಂಧನಕ್ಕೊಳಗಾಗಿದ್ದಾನೆ. ಬೆಂಗಳೂರು ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತನಿಂದ 1 ಕೆಜಿ 90 ಗ್ರಾಂ ಅಫೀಮು ಮತ್ತು ಬೈಕ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ ಸುರೇಶ್ ಕುಮಾರ್

ಇದನ್ನೂ ಓದಿ

Ramadan: ರಂಜಾನ್ ಆಚರಣೆಗೆ ರಾಜ್ಯ ಸರ್ಕಾರದಿಂದ ಗೈಡ್​ಲೈನ್ಸ್ ಬಿಡುಗಡೆ

ಬ್ರಿಟನ್ ರಾಜಕುಮಾರ ಮದುವೆಯಾಗುವ ಭರವಸೆ ನೀಡಿ ಮೋಸ ಮಾಡಿದ್ದಾರೆ; ಪಂಜಾಬ್ ಮಹಿಳೆ ಅರ್ಜಿ ವಜಾ ಮಾಡಿದ ಕೋರ್ಟ್

(Kalaburagi Locals Thrash Mother, Son and daughter in-law on suspecting they did superstition)