ಕಲಬುರಗಿ ಪೊಲೀಸ್ ಠಾಣೆಯಿಂದ ನೂತನ ಪ್ರಯೋಗ; ವಾಟ್ಸಾಪ್ ಮತ್ತು ಫೇಸ್​ಬುಕ್ ಮೂಲಕ ದೂರು ದಾಖಲಿಸಲು ಅವಕಾಶ

ಕಲಬುರಗಿ ನಗರದಲ್ಲಿರುವ ಹನ್ನೆರಡು ಪೊಲೀಸ್ ಠಾಣೆಯ ಪ್ರತ್ಯೇಕ ಪೇಜ್​ಗಳನ್ನು ಫೇಸ್​ಬುಕ್​ನಲ್ಲಿ ಕ್ರಿಯೇಟ್ ಮಾಡಿದ್ದಾರೆ. ಅಲ್ಲಿ ದೂರುನ್ನು ನೀಡಲು ಸಂದೇಶದ ಬಟನ್ ಇದ್ದು. ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ಸಂದೇಶ ಕಳುಹಿಸಬಹುದು. ನಿಮ್ಮ ಸಂದೇಶ ತಲುಪಿದ ಕೆಲವೇ ನಿಮಿಷಗಳಲ್ಲಿ ಯಾವ ರೀತಿಯ ಸಹಾಯ ಮಾಡಬಹುದು ಎನ್ನುವುದನ್ನು ಪೊಲೀಸರು ಕೇಳುತ್ತಾರೆ.

ಕಲಬುರಗಿ ಪೊಲೀಸ್ ಠಾಣೆಯಿಂದ ನೂತನ ಪ್ರಯೋಗ; ವಾಟ್ಸಾಪ್ ಮತ್ತು ಫೇಸ್​ಬುಕ್ ಮೂಲಕ ದೂರು ದಾಖಲಿಸಲು ಅವಕಾಶ
ವಾಟ್ಸಾಪ್ ಮತ್ತು ಫೇಸ್​ಬುಕ್ ಮೂಲಕ ದೂರು ದಾಖಲಿಸಲು ಕಲಬುರಗಿ ಪೊಲೀಸರಿಂದ ಅವಕಾಶ

ಕಲಬುರಗಿ: ತಂತ್ರಜ್ಞಾನ ಬದಲಾದಂತೆ ಕೆಲವೊಂದು ನಿಯಮಗಳು ಬದಲಾಗುತ್ತದೆ. ಅಂತೆಯೇ ಕೆಲವು ಕಾರ್ಯಗಳ ನಿರ್ವಹಣೆಯೂ ಸರಳವಾಗುತ್ತದೆ. ಹೀಗಿರುವಾಗಲೇ ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಹತ್ತಿರವಾಗಲು ಕಲಬುರಗಿ ನಗರ ಪೊಲೀಸರು ಮುಂದಾಗಿದ್ದಾರೆ. ಕಲಬುರಗಿ ಜನರು ದೂರು ಕೊಡಲು ಈಗ ಮೊದಲಿನಂತೆ ಪೊಲೀಸ್ ಠಾಣೆಗೆ ಅಲೆಯಬೇಕಾಗಿಲ್ಲ. ಬದಲಿಗೆ ಇರುವ ಸ್ಥಳದಿಂದಲೇ ಸುಲಭವಾಗಿ ತಮ್ಮ ಫೇಸ್​ಬುಕ್ ಮತ್ತು ವಾಟ್ಸಾಪ್ ಮೂಲಕ ಕಲಬುರಗಿ ನಗರದ ಯಾವುದೇ ಠಾಣೆಗೆ ದೂರು ನೀಡಬಹುದು. ದೂರು ದಾಖಲಾದ ಕೆಲವೇ ನಿಮಿಷಗಳಲ್ಲಿ ಪೊಲೀಸರು ದೂರಿಗೆ ಸ್ಪಂಧಿಸಲಿದ್ದಾರೆ ಎನ್ನುವುದು ವಿಶೇಷವಾಗಿದ್ದು, ಜನರು ಕೂಡ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ಮೊಬೈಲ್​ಗಳಿಲ್ಲದೆ ಜನರಿಲ್ಲ, ಫೇಸ್​ಬುಕ್ ಮತ್ತು ವಾಟ್ಸಪ್ ಬಳಸದವರು ಬಹುಷಃ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಮಕ್ಕಳಿಂದ ಹಿಡಿದು ವೃದ್ಧರವರಗೆ ಅನೇಕರು ಪ್ರತಿನಿತ್ಯ ಫೇಸ್​ಬುಕ್ ಮತ್ತು ವಾಟ್ಸಪ್​ಗಳನ್ನು ಚಾಟ್ ಮಾಡಲು, ಪೋಸ್ಟ್ ಹಾಕಲು, ಬಳಸುತ್ತಿದ್ದಾರೆ. ಹೆಚ್ಚಿನ ಜನರು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯರಾಗಿದ್ದಾರೆ. ಇದೇ ಸೋಶಿಯಲ್ ಮೀಡಿಯಾಗಳನ್ನು ಜನರ ಸಂಕಷ್ಟಗಳನ್ನು ಬಗೆಹರಿಸಲು ಬಳಸಿಕೊಳ್ಳಬಹುದು ಎನ್ನುವುದನ್ನು ಕಲಬುರಗಿ ನಗರ ಪೊಲೀಸರು ಮಾಡಿ ತೋರಿಸಿದ್ದಾರೆ.

ಜನರಿಗೆ ಏನಾದರೂ ಸಮಸ್ಯೆಗಳಾದರೆ ಜನರು ಮೊದಲು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕಿತ್ತು. ದೂರು ದಾಖಲಾದ ನಂತರ ಪೊಲೀಸರು ವಿಚಾರಣೆ ಪ್ರಾರಂಭಿಸುತ್ತಿದ್ದರು. ಆದರೆ ಇದೀಗ ನೀವು ದೂರು ಕೊಡಲು ಪೊಲೀಸ್ ಠಾಣೆಗೆ ಹೋಗಬೆಕಿಂದಿಲ್ಲಾ. ಬದಲಾಗಿ ನಿಮ್ಮ ಬಳಿ ಫೇಸ್​ಬುಕ್ ಇದ್ದರೆ ನೀವು ಪೇಸುಬುಕ್ ಮೂಲಕ ಕೂಡಾ ದೂರು ನೀಡಬಹುದು. ವಾಟ್ಸಪ್ ಇದ್ರೆ, ವಾಟ್ಸಪ್ ಮೂಲಕ ಕೂಡಾ ದೂರು ದಾಖಲಿಸಬಹುದು. ದೂರು ದಾಖಲಾದ ಕೆಲವೇ ನಿಮಿಷಗಳಲ್ಲಿ ಪೊಲೀಸರು ದೂರಿಗೆ ಸ್ಪಂಧಿಸಲಿದ್ದಾರೆ ಮತ್ತು ನಿಮಗೆ ಯಾವ ರೀತಿಯ ಸಹಾಯ ಬೇಕು ಎನ್ನುವುದನ್ನು ಕೇಳಲಿದ್ದಾರೆ ಎಂದು ಕಲಬುರಗಿ ಡಿಸಿಪಿ ಡಿ. ಕಿಶೋರಬಾಬು ತಿಳಿಸಿದ್ದಾರೆ.

ಕಲಬುರಗಿ ನಗರದಲ್ಲಿರುವ ಹನ್ನೆರಡು ಪೊಲೀಸ್ ಠಾಣೆಯ ಪ್ರತ್ಯೇಕ ಪೇಜ್​ಗಳನ್ನು ಫೇಸ್​ಬುಕ್​ನಲ್ಲಿ ಕ್ರಿಯೇಟ್ ಮಾಡಿದ್ದಾರೆ. ಅಲ್ಲಿ ದೂರುನ್ನು ನೀಡಲು ಸಂದೇಶದ ಬಟನ್ ಇದ್ದು. ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ಸಂದೇಶ ಕಳುಹಿಸಬಹುದು. ನಿಮ್ಮ ಸಂದೇಶ ತಲುಪಿದ ಕೆಲವೇ ನಿಮಿಷಗಳಲ್ಲಿ ಯಾವ ರೀತಿಯ ಸಹಾಯ ಮಾಡಬಹುದು ಎನ್ನುವುದನ್ನು ಪೊಲೀಸರು ಕೇಳುತ್ತಾರೆ. ಜತೆಗೆ ವಾಟ್ಸಪ್ ಲಿಂಕ್ ಕೂಡಾ ಇದ್ದು. ಅದರ ಮೇಲೆ ಕ್ಲಿಕ್ ಮಾಡಿದರೆ, ಠಾಣೆಯ ಇನ್ಸ್​ಪೆಕ್ಟರ್ ನಂಬರ್ ವಾಟ್ಸಪ್​ಗೆ ಸಂದೇಶ ಕಳುಹಿಸಿ ದೂರು ನೀಡಬಹುದು ಎಂದು ಕಲಬುರಗಿ ಡಿಸಿಪಿ ಡಿ. ಕಿಶೋರಬಾಬು ಹೇಳಿದ್ದಾರೆ.

ಜನರು ಪೊಲೀಸ್ ಠಾಣೆಗೆ ಸಂಬಂಧಿಸಿದ ದೂರಗಳನ್ನು ಕೂಡ ವಾಟ್ಸಪ್ ಮತ್ತು ಫೇಸ್​ಬುಕ್​ ಮೂಲಕ ದಾಖಲಿಸಬಹುದಾಗಿದೆ. ದೂರು ದಾಖಲಾದ ನಂತರ ಅವಶ್ಯಕತೆ ಇದ್ದರೆ ಪೊಲೀಸರೇ ದೂರು ನೀಡಿದವರ ಮನೆಗೆ ಹೋಗಿ ಮಾಹಿತಿ ಪಡೆಯಲಿದ್ದಾರೆ. ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯದಂತಹ ದೂರುಗಳಿದ್ದರೆ ಕೂಡಲೇ ಪೊಲೀಸರು ನೊಂದವರ ಮನೆಗೆ ಹೋಗಿ ಅವರ ರಕ್ಷಣೆಗೆ ಬೇಕಾದ ಕ್ರಮ ಕೈಗೊಳ್ಳಲಿದ್ದಾರೆ. ಕಳ್ಳತನದಂತಹ ಪ್ರಕರಣಗಳಿದ್ದರು ಮನೆಗೆ ಭೇಟಿ ನೀಡಲಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಜನರು ನೆಮ್ಮದಿಯಿಂದ ಬದಕಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲು ಈ ರೀತಿಯ ಕ್ರಮವನ್ನು ಕಲಬುರಗಿ ನಗರದಲ್ಲಿ ಜಾರಿಗೆ ತರಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಪ್ರಾರಂಭವಾಗಿರುವ ಈ ಯೋಜನೆಗೆ ಜನರಿಂದ ಕೂಡಾ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗುತ್ತಿದೆ. ಅನೇಕರು ವಾಟ್ಸಪ್ ಮತ್ತು ಫೇಸ್​ಬುಕ್​ ಮೂಲಕ ದೂರು ನೀಡಿದ್ದು, ದೂರಿಗೆ ಪೊಲೀಸರು ಸ್ಪಂಧಿಸಿದ್ದಾರೆ. ಇದು ತಂತ್ರಜ್ಞಾನ ಯುಗ, ಹೀಗಾಗಿ ಜನರಿಗೆ ಜನಸ್ನೇಹಿ ಪೊಲೀಸ್​ ಜಾರಿಗೊಳಿಸುವ ಉದ್ದೇಶದಿಂದ ಇಂತಹದೊಂದು ಯೋಜನೆ ಜಾರಿಗೊಳಿಸಲಾಗಿದೆ. ಜನರು ಇದರ ಪ್ರಯೋಜನ ಪಡೆಯಬೇಕು ಎಂದು ಕಲಬುರಗಿ ನಗರ ಡಿಸಿಪಿ ಡಿ. ಕಿಶೋರಬಾಬು ತಿಳಿಸಿದ್ದಾರೆ.

ಕಲಬುರಗಿ ಪೊಲೀಸರ ಕಾರ್ಯ ಇದೀಗ ಮೆಚ್ಚುಗೆಗೆ ಕಾರಣವಾಗಿದೆ. ಕೇವಲ ಚಾಟ್​ಗಳಿಗೆ ಬಳಕೆಯಾಗುತ್ತಿದ್ದ ವಾಟ್ಸಪ್ ಮತ್ತು ಫೇಸ್​ಬುಕ್​ಗಳನ್ನ ದೂರು ದಾಖಲಿಸಲು, ಜನರ ಸಮಸ್ಯೆ ಪರಿಹರಿಸಲು ಬಳಸಿಕೊಳ್ಳುತ್ತಿರುವ ಕ್ರಮ ಶ್ಲಾಘನೀಯವಾಗಿದೆ. ಕಲಬುರಗಿ ನಗರ ಪೊಲೀಸರ ಕೆಲಸ ಉಳಿದ ಠಾಣೆಯ ಪೊಲೀಸರಿಗೆ ಕೂಡಾ ಮಾದರಿಯಾಗಿದೆ.

ಇದನ್ನೂ ಓದಿ:

Viral Video: ಅಸಹಾಯಕ ವೃದ್ಧೆಗೆ ತಿಂಡಿ ತಿನ್ನಿಸಿದ ಪೊಲೀಸ್​; ಮಾನವೀಯ ಕಾರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ

ಲಾಕ್​ಡೌನ್​ ಸಮಯದಲ್ಲಿ ಜನರ ಸಹಾಯಕ್ಕೆ ನಿಂತ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು