Mallikarjun Kharge: ಲೋಕಸಭಾ ಚುನಾವಣೆ; ಮಲ್ಲಿಕಾರ್ಜುನ ಖರ್ಗೆಗೆ ಜಾತಿ ವೈಷಮ್ಯದ ಭೀತಿ

| Updated By: ಸುಷ್ಮಾ ಚಕ್ರೆ

Updated on: May 06, 2024 | 6:27 PM

ಲೋಕಸಭಾ ಚುನಾವಣೆಯ 3ನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಚುನಾವಣೆ ನಡೆಯಲಿದೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾತಿ ವೈಷಮ್ಯದ ಭಯ ಎದುರಾಗಿದೆ. ಆ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

Mallikarjun Kharge: ಲೋಕಸಭಾ ಚುನಾವಣೆ; ಮಲ್ಲಿಕಾರ್ಜುನ ಖರ್ಗೆಗೆ ಜಾತಿ ವೈಷಮ್ಯದ ಭೀತಿ
ಮಲ್ಲಿಕಾರ್ಜುನ ಖರ್ಗೆ
Follow us on

ಬೆಂಗಳೂರು: ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ (Kalburgi Lok Sabha Elections) ಇತ್ತೀಚೆಗೆ ಒಂದರ ಹಿಂದೊಂದರಂತೆ ನಡೆದ 2 ಜಾತಿ ಹಿಂಸಾಚಾರದ ಘಟನೆಗಳು 2019ರಲ್ಲಿ ಬಿಜೆಪಿಯಿಂದ ಸೋತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಸ್ಥಾನವನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಹೊಡೆತ ಬೀಳಬಹುದು. 2009 ಮತ್ತು 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆದ್ದಿರುವ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಕಲಬುರ್ಗಿಯಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ (Radhakrishna Doddamani) ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆಯು ಈ ಹಿಂದೆ ಮಲ್ಲಿಕಾರ್ಜುನ ಖರ್ಗೆಯವರ ಹಿಂದಿನ ವಿಧಾನಸಭಾ ಕ್ಷೇತ್ರವನ್ನು ನಿರ್ವಹಿಸುತ್ತಿದ್ದ 60 ವರ್ಷದ ರಾಧಾಕೃಷ್ಣ ದೊಡ್ಡಮನಿ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿದ್ದಾರೆ.

ಏಪ್ರಿಲ್ 30ರಂದು ದಲಿತ ಯುವಕರ ಗುಂಪೊಂದು ಕಲಬುರ್ಗಿ ಜಿಲ್ಲೆಯಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಜನವರಿಯಲ್ಲಿ ಅಪವಿತ್ರಗೊಳಿಸಿದ್ದಕ್ಕಾಗಿ ಪ್ರಬಲ ಲಿಂಗಾಯತ ಸಮುದಾಯದ ಸದಸ್ಯರೊಬ್ಬರ ಮನೆಯ ಮೇಲೆ ದಾಳಿ ಮಾಡಿತ್ತು. ಮರುದಿನ, ಎಸ್‌ಸಿ/ ಎಸ್‌ಟಿ ದೌರ್ಜನ್ಯ ಪ್ರಕರಣದ ಆರೋಪಿ ಹಿಂದುಳಿದ ಜಾತಿಯ ಯುವಕನ ಆತ್ಮಹತ್ಯೆ ನಡೆದಿತ್ತು. ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರವಾಗಿ ಏಪ್ರಿಲ್ 24ರಂದು ಮತದಾರರಿಗೆ ಖರ್ಗೆಯವರು ಮಾಡಿದ ಮನವಿ ಮನ ಮುಟ್ಟುವಂತಿತ್ತು ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಕಲಬುರ್ಗಿಯಲ್ಲಿ ಕರ್ನಾಟಕದ ಉಳಿದ 13 ಸ್ಥಾನಗಳೊಂದಿಗೆ ರಾಧಾಕೃಷ್ಣ ದೊಡ್ಡಮನಿ ಪರವಾಗಿ ಮತ ಚಲಾಯಿಸುವುದು ಅಷ್ಟು ಸುಲಭವಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಇದನ್ನು ಸ್ಥಳೀಯ ಕಾಂಗ್ರೆಸ್ ಮುಖಂಡ ಸಿ.ಬಿ ಪಾಟೀಲ್ ಒಪ್ಪಿಕೊಂಡಿದ್ದಾರೆ. ಕಲಬುರ್ಗಿಯಲ್ಲಿ ರಾತ್ರೋರಾತ್ರಿ ಪರಿಸ್ಥಿತಿ ಬದಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಹೆಚ್ಚಳ; ರಾಹುಲ್ ಗಾಂಧಿ ಭರವಸೆ

ಅಂಬೇಡ್ಕರ್ ಪ್ರತಿಮೆಯನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಲಾದ ಲಿಂಗಾಯತ ಸದಸ್ಯನ ಮನೆಯ ಮೇಲೆ ಏಪ್ರಿಲ್ 30ರಂದು ನಡೆದ ದಾಳಿಯಲ್ಲಿ ಮಹಿಳೆಯರನ್ನು ಸಹ ಥಳಿಸಿದ್ದಾರೆ ಎಂದು ಹೇಳಿದ್ದಾರೆ. ಸುಮಾರು 60% ಜನರು ಕಾಂಗ್ರೆಸ್ ಪರವಾಗಿದ್ದಾರೆ. ಆದರೆ ಈಗ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಸಮುದಾಯವು ಕೋಪಗೊಂಡಿದೆ ಎಂದಿದ್ದಾರೆ. ”

ಈ ಹಿಂದೆ ಕಾಂಗ್ರೆಸ್‌ನ ಗೆಲುವಿನ ವಿಶ್ವಾಸಕ್ಕೆ ಮತ್ತೊಂದು ಕಾರಣವೆಂದರೆ ಹಾಲಿ ಬಿಜೆಪಿ ಸಂಸದ ಉಮೇಶ್ ಜಾಧವ್, ಲಂಬಾಣಿಗಳ ಎಸ್‌ಸಿ ಉಪ ಸಮುದಾಯಕ್ಕೆ ಸೇರಿದ ವೈದ್ಯರಾದ ಉಮೇಶ್ ಜಾಧವ್ ಈ ಪ್ರದೇಶಕ್ಕೆ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಪರಿಗಣಿಸಲಾಗಿದೆ. ಉಮೇಶ್ ಜಾಧವ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಈ ಯೋಜನೆಯನ್ನು ಉದ್ಘಾಟಿಸಲು ರಿಬ್ಬನ್ ಸಹ ಕತ್ತರಿಸಲಿಲ್ಲ. ಅವರು ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಅವರು ನರೇಂದ್ರ ಮೋದಿಯವರ ಹೆಗಲ ಮೇಲೆ ನಿಂತಿದ್ದಾರೆ ಎಂಬ ಅಸಮಾಧಾನ ಉಂಟಾಗಿತ್ತು.

ಕಲಬುರ್ಗಿಯ ಜನಸಂಖ್ಯೆಯಲ್ಲಿ ದಲಿತರು ಸುಮಾರು ಶೇ. 35ರಷ್ಟಿದ್ದರೆ, ಲಿಂಗಾಯತರು ಸುಮಾರು ಶೇ. 30ರಷ್ಟು ಇದ್ದಾರೆ. ಲಿಂಗಾಯತರು ಬಿಜೆಪಿ ಮತಬ್ಯಾಂಕ್ ಆಗಿದ್ದರೆ, ಕಾಂಗ್ರೆಸ್ ದಲಿತ ಸಮುದಾಯ, ಮುಸ್ಲಿಮರು ಮತ್ತು OBCಗಳನ್ನು ಮತಬ್ಯಾಂಕ್ ಮಾಡಿಕೊಂಡಿದೆ.

ಇದನ್ನೂ ಓದಿ: ಮೆಡಿಕಲ್ ಸೀಟು ಹಂಚಿಕೆಯಲ್ಲಿ 800 ಕೋಟಿ ರೂ. ಹಗರಣ ಆರೋಪ: ಖರ್ಗೆ ಅಳಿಯ ವಿರುದ್ಧ ದೂರು

2019ರಲ್ಲಿ ಕಲಬುರ್ಗಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೊದಲ ಬಾರಿಗೆ ಉಮೇಶ್ ಜಾಧವ್ ಅವರು 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ಮೇ 3ರಂದು ವೀರಶೈವ ಲಿಂಗಾಯತರಿಗೆ ನಡೆದ ಸಮಾವೇಶದಲ್ಲಿ ಕಾಂಗ್ರೆಸ್‌ನ ಕಟ್ಟಾ ಲಿಂಗಾಯತ ನಾಯಕರು ಮಲ್ಲಿಕಾರ್ಜುನ ಖರ್ಗೆಯವರಿಗೆ ಬೆನ್ನು ಹಾಕಬೇಡಿ ಎಂದು ಮನವಿ ಮಾಡಿದ್ದಲ್ಲದೆ, ಕಾಂಗ್ರೆಸ್ ಮೈತ್ರಿಕೂಟ ಗೆದ್ದರೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಬಹುದು ಎಂದು ಕಾಂಗ್ರೆಸ್ ನಾಯಕರು ಮತದಾರರಿಗೆ ಹೇಳುತ್ತಿದ್ದಾರೆ.

ಭಾರತದಲ್ಲಿ 7 ಹಂತಗಳ ಲೋಕಸಭೆ ಚುನಾವಣೆ ಏಪ್ರಿಲ್ 19ರಿಂದ ಪ್ರಾರಂಭವಾಯಿತು. ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. 44 ದಿನಗಳ ಕಾಲ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ 10.5 ಲಕ್ಷ ಮತಗಟ್ಟೆಗಳಲ್ಲಿ 97 ಕೋಟಿಗೂ ಹೆಚ್ಚು ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಅದರಲ್ಲಿ 49.7 ಕೋಟಿ ಪುರುಷರು ಮತ್ತು 47.1 ಕೋಟಿ ಮಹಿಳೆಯರು ಮತದಾನ ಮಾಡಲು ಅರ್ಹರಾಗಿದ್ದಾರೆ. 3ನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ನಂತರದ ಹಂತಗಳು ಮೇ 13, ಮೇ 20, ಮೇ 25 ಮತ್ತು ಜೂನ್ 1ರಂದು ನಡೆಯಲಿದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ