ತಿಂಡಿ ತಿನ್ನಲು ಇಳಿದಿದ್ದ ವ್ಯಕ್ತಿ ಚಲಿಸುತ್ತಿದ್ದ ರೈಲಿನ ಚಕ್ರಕ್ಕೆ ಸಿಲುಕಿ ಸಾವು

ನಾಗರಕೋಯಿಲ್ ರೈಲಿನಲ್ಲಿ ಕುಟುಂಬಸ್ಥರ ಜೊತೆ ಮುಂಬೈನಿಂದ ಮಧುರೈಗೆ ತೆರಳುತ್ತಿದ್ದ ಅಯ್ಯಪ್ಪ ರಾಜ್ ಅವರು ವಾಡಿ ರೈಲ್ವೆ ನಿಲ್ದಾಣದಲ್ಲಿ ತಿಂಡಿ ತಿನ್ನಲು ಇಳಿದ್ದರು. ಈ ವೇಳೆ ಘಟನೆ ನಡೆದಿದೆ.

ತಿಂಡಿ ತಿನ್ನಲು ಇಳಿದಿದ್ದ ವ್ಯಕ್ತಿ ಚಲಿಸುತ್ತಿದ್ದ ರೈಲಿನ ಚಕ್ರಕ್ಕೆ ಸಿಲುಕಿ ಸಾವು
ಸಾಂದರ್ಭಿಕ ಚಿತ್ರ
TV9kannada Web Team

| Edited By: Ayesha Banu

Sep 22, 2022 | 7:39 AM

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಚಕ್ರಕ್ಕೆ ಸಿಲುಕಿ ಮುಂಬೈ ಮೂಲದ ಅಯ್ಯಪ್ಪ ರಾಜ್(56) ಮೃತಪಟ್ಟಿದ್ದಾರೆ. ನಾಗರಕೋಯಿಲ್ ರೈಲಿನಲ್ಲಿ ಕುಟುಂಬಸ್ಥರ ಜೊತೆ ಮುಂಬೈನಿಂದ ಮಧುರೈಗೆ ತೆರಳುತ್ತಿದ್ದ ಅಯ್ಯಪ್ಪ ರಾಜ್ ಅವರು ವಾಡಿ ರೈಲ್ವೆ ನಿಲ್ದಾಣದಲ್ಲಿ ತಿಂಡಿ ತಿನ್ನಲು ಇಳಿದ್ದರು. ಈ ವೇಳೆ ರೈಲು ತೆರಳುತ್ತಿರುವುದು ಕಂಡು ಅವಸರದಲ್ಲಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಚಕ್ರಕ್ಕೆ ಸಿಲುಕಿ ನರಳಿ ಪ್ರಾಣ ಬಿಟ್ಟಿದ್ದಾರೆ. ಘಟನೆಯಲ್ಲಿ ವ್ಯಕ್ತಿಯ ಎರಡು ಕಾಲುಗಳು ಹಾಗೂ ಒಂದು ಕೈ ತುಂಡಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾವಿಗೆ ಹಾರಿ ದಂಪತಿ ಆತ್ಮಹತ್ಯೆಗೆ ಶರಣು

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಂಬ್ರವಳ್ಳಿ ಗ್ರಾಮದ ತೋಟದಲ್ಲಿದ್ದ ಬಾವಿಗೆ ಹಾರಿ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬೆಟ್ಟಪ್ಪ(50), ರುಕ್ಮಿಣಿ(43) ಆತ್ಮಹತ್ಯೆ ಮಾಡಿಕೊಂಡವರು. ಸಾಲಬಾಧೆಯಿಂದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  Breaking News: ಮಂಗಳೂರು ಸೇರಿ ದೇಶಾದ್ಯಂತ ಪಿಎಫ್​ಐ, ಎಸ್​ಡಿಪಿಐ ಕಚೇರಿಗಳ ಮೇಲೆ ಎನ್​ಐಎ ದಾಳಿ

ಗ್ರಾಮದ ಜಮೀರ್ ಸಾಹೇಜ್ ತೋಟದಲ್ಲಿ‌ ಕಳೆದ 20 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿ ಕೆಲಸ ಮಾಡುತ್ತಿದ್ದ ತೋಟದ ಮನೆಯಲ್ಲೇ ವಾಸವಿದ್ದರು. ಇತ್ತೀಚಿಗೆ ಮಕ್ಕಳ ಮದುವೆ ಹಾಗೂ ಸಂಬ್ರವಳ್ಳಿಯಲ್ಲಿ ಸಾಲ ಮಾಡಿ ಮನೆ ಸಹ ಕಟ್ಟಿದರು. ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಏಳು ಅಡಿ ಉದ್ದದ ಕೆರೆಯ ಹಾವು ರಕ್ಷಣೆ

ತುಮಕೂರು: ತಿಮ್ಮಲಾಪುರ ಗ್ರಾಮದ ಮನೆಯೊಳಗೆ‌ ಸೇರಿಕೊಂಡಿದ್ದ ಏಳು ಅಡಿ ಉದ್ದದ ಕೆರೆಯ ಹಾವನ್ನು ರಕ್ಷಿಸಲಾಗಿದೆ. ಗ್ರಾಮದ ಹನುಮಂತರಾಜು ಎಂಬುವರ ಮನೆಯೊಳಗೆ ಹಾವು ಸೇರಿಕೊಂಡಿತ್ತು. ಆಗ ಸ್ಥಳಕ್ಕೆ ಉರಗ ಸಂರಕ್ಷಕ ದಿಲೀಪ್ ಭೇಟಿ ನೀಡಿ ಹಾವನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಇನ್ನು ಇದೇ ರೀತಿ ತುಮಕೂರು ಹೊರವಲಯದ ಭೋವಿ ಪಾಳ್ಯದ ಖಾಸಗಿ ಶಾಲೆಯ ಆವರಣದ ಗಿಡದ ಪಾರ್ಟ್ ಪಕ್ಕ ಸೇರಿಕೊಂಡಿದ್ದ ಮತ್ತೊಂದು ನಾಗರಹಾವನ್ನು ರಕ್ಷಿಸಲಾಗಿದೆ. ಶಾಲಾ ಶಿಕ್ಷಕರು ಹಾವನ್ನು ಗಮನಿಸಿ ಉರಗ ಸಂರಕ್ಷಕರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಉರಗ ಸಂರಕ್ಷಣ ದಿಲೀಪ್ ಭೇಟಿ ನೀಡಿ ಹಾವು ರಕ್ಷಿಸಿದ್ದಾರೆ. ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಹಾವುಗಳನ್ನು ಬಿಟ್ಟಿದ್ದಾರೆ.

ಒನಕೆಯಿಂದ ತಲೆಗೆ ಹೊಡೆದು ವ್ಯಕ್ತಿ ಕೊಲೆ

ಒನಕೆಯಿಂದ ತಲೆಗೆ ಹೊಡೆದು ವ್ಯಕ್ತಿಯ ಬರ್ಬರ ಕೊಲೆ ಮಾಡಲಾಗಿದೆ. ರಾಯಚೂರು ತಾಲ್ಲೂಕಿನ ಗಿಲ್ಲೆಸುಗೂರು ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ನರಸಿಂಹಲು (35)ಮೃತ ವ್ಯಕ್ತಿ. ನಿನ್ನೆ ಸಂಜೆ ಪತ್ನಿ ಮಲ್ಲಮ್ಮ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಬಳಿಕ ಇಡಪನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆ ಕೊಲೆಯಾಗಿರೊ ಶಂಕೆ ವ್ಯಕ್ತವಾಗಿದೆ. ಪೊಲೀಸರು ಹಲವರನ್ನ ವಿಚಾರಣೆಗೊಳಪಡಿಸಿದ್ದಾರೆ. ಮೃತ ನರಸಿಂಹಲು ಪತ್ನಿ ಮಲ್ಲಮ್ಮ ಇಬ್ಬರು ಮಕ್ಕಳೊಂದಿಗೆ ಹೊರಗೆ ಹೋಗಿದ್ದರು. ಆಕೆ ಮರಳಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada