Big News: ವಿಧಾನಸಭೆ ಚುನಾವಣೆ ತಯಾರಿಗೆ ಅಖಾಡಕ್ಕಿಳಿದ ಕಾಂಗ್ರೆಸ್; ಎಲೆಕ್ಷನ್ ತಂತ್ರಗಾರಿಕೆಯ ನೀಲನಕ್ಷೆ ಸಿದ್ಧ

ವಿಧಾನಸಭೆ ಚುನಾವಣೆ ತಯಾರಿಗೆ ಕಾಂಗ್ರೆಸ್ ಸಂಪೂರ್ಣವಾಗಿ ಅಖಾಡಕ್ಕಿಳಿದಿದೆ. ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ವಾರ್ ರೂಮ್ ಸಭೆ ನಡೆಸಲಾಗಿದೆ. ಚುನಾವಣಾ ತಂತ್ರಗಾರಿಕೆ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ.

Big News: ವಿಧಾನಸಭೆ ಚುನಾವಣೆ ತಯಾರಿಗೆ ಅಖಾಡಕ್ಕಿಳಿದ ಕಾಂಗ್ರೆಸ್; ಎಲೆಕ್ಷನ್ ತಂತ್ರಗಾರಿಕೆಯ ನೀಲನಕ್ಷೆ ಸಿದ್ಧ
ರಣದೀಪ್ ಸುರ್ಜೇವಾಲ
Image Credit source: India Today
TV9kannada Web Team

| Edited By: Sushma Chakre

Aug 16, 2022 | 1:52 PM

ಬೆಂಗಳೂರು: ಕಾಂಗ್ರೆಸ್ ಚುನಾವಣೆ ತಂತ್ರಗಾರಿಕೆಯ ನೀಲನಕ್ಷೆ (Blue Print) ಈಗಾಗಲೇ ರೆಡಿಯಾಗಿದೆ. 5 ಪ್ರಮುಖ ಅಂಶಗಳ ಬ್ಲ್ಯೂ ಪ್ರಿಂಟ್ ಅನ್ನು ಚುನಾವಣಾ ತಂತ್ರಗಾರಿಕಾ ತಂಡ ಕಾಂಗ್ರೆಸ್ ನಾಯಕರ ಮುಂದಿಟ್ಟಿದೆ. ರಣದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ನೇತೃತ್ವದ ಕಾಂಗ್ರೆಸ್ ನಾಯಕರ ಮುಂದೆ ನೀಲನಕ್ಷೆ ಬಿಚ್ಚಿಡಲಾಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರಚಾರದ ಸಿದ್ಧತೆ ಕುರಿತಂತೆ ಬ್ಲ್ಯೂ ಪ್ರಿಂಟ್ ರೆಡಿ ಮಾಡಿರುವ ಸುನಿಲ್ ಕನುಗೋಳು ಹಾಗೂ ವಾರ್ ರೂಂ ಇನ್ ಚಾರ್ಜ್ ಸೆಂಥಿಲ್ ಅದನ್ನು ಪಿಪಿಟಿ ಪ್ರೆಸೆಂಟೇಷನ್ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ತಯಾರಿಗೆ ಕಾಂಗ್ರೆಸ್ ಸಂಪೂರ್ಣವಾಗಿ ಅಖಾಡಕ್ಕಿಳಿದಿದೆ. ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ವಾರ್ ರೂಮ್ ಸಭೆ ನಡೆಸಲಾಗಿದೆ. ಚುನಾವಣಾ ತಂತ್ರಗಾರಿಕೆ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಈ ಸಭೆಯಲ್ಲಿ ಚುನಾವಣಾ ತಂತ್ರಗಾರ ಸುನೀಲ್ ಕನಗೋಳು ಹಾಗೂ ವಾರ್ ರೂಂ ಉಸ್ತುವಾರಿ ಸೆಂಥಿಲ್ ಅವರಿಂದ ಪಿಪಿಟಿ ಪ್ರೆಸೆಂಟೇಷನ್ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಸೋಲು ಶತಸಿದ್ಧ: ಸಿದ್ದರಾಮಯ್ಯ

5 ಅಂಶಗಳ ಬ್ಲ್ಯೂ ಪ್ರಿಂಟ್ ನಲ್ಲಿ ಬಿಜೆಪಿಯನ್ನು ಸದೆಬಡೆಯುವ ಕುರಿತು ತಂತ್ರಗಾರಿಕೆಯನ್ನು ಈ ತಂಡ ಪ್ರಸ್ತಾಪಿಸಿದೆ. ಮುಂದಿನ ದಿನಗಳಲ್ಲಿ ವಲಯವಾರು ವಿಂಗಡಣೆ ಮಾಡಿಕೊಂಡು ಪ್ರಚಾರದ ನಡೆಸಲು ತಂತ್ರ ರೂಪಿಸಲಾಗಿದೆ. ಒಂದೊಂದು ವಲಯಕ್ಕೆ ಒಬ್ಬೊಬ್ಬ ನಾಯಕರಿಗೆ ಜವಾಬ್ದಾರಿ ಹಂಚಿಕೆ ನೀಡುವ ಸಾಧ್ಯತೆಯಿದೆ.

ಸುನಿಲ್ ಕನುಗೋಳು ಕಾಂಗ್ರೆಸ್ ಚುನಾವಣಾ ಸಮೀಕ್ಷೆ ನಡೆಸಿದ್ದಾರೆ. ಪಿಪಿಟಿ ಪ್ರಸೆಂಟೇಷನ್​​ನಲ್ಲಿ ಕರ್ನಾಟಕ ಮ್ಯಾಪ್ ಹಾಕಿ ವಿಭಾಗವಾರು ಚರ್ಚೆ ನಡೆಸಲಾಗಿದೆ. ಯಾವ ಭಾಗದಲ್ಲಿ ಯಾವ ವಿಚಾರಗಳನ್ನು ಪ್ರಚಾರ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಚರ್ಚೆ ನಡೆಸಲಿದ್ದಾರೆ. ಚುನಾವಣಾ ತಂತ್ರಗಾರಿಕೆ ಬಗ್ಗೆ ಪ್ರತಿಯೊಬ್ಬರು ಅಭಿಪ್ರಾಯ ತಿಳಿಸಲು ಸೂಚಿಸಲಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ಪ್ರವಾಸ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಕೆಪಿಸಿಸಿ ಅಧ್ಯಕ್ಷರು ಯಾವ ಭಾಗದಲ್ಲಿ ಪ್ರವಾಸ ಮಾಡಬೇಕು, ವಿಪಕ್ಷ ನಾಯಕರು ಎಲ್ಲೆಲ್ಲಿ ಪ್ರವಾಸ ಮಾಡಬೇಕು, ಪ್ರಚಾರ ಸಮಿತಿ ಅಧ್ಯಕ್ಷರು ಆಗಸ್ಟ್ 19ರಿಂದ ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎಂದು ಚರ್ಚೆ ನಡೆಸಲಾಗಿದೆ.

ಇದನ್ನೂ ಓದಿ: 1 ಲಕ್ಷ ಜನ, 1 ಲಕ್ಷ ರಾಷ್ಟ್ರಧ್ವಜಗಳೊಂದಿಗೆ ಕಾಂಗ್ರೆಸ್​ನಿಂದ ಬೆಂಗಳೂರಿನಲ್ಲಿ ಫ್ರೀಡಂ ಜಾಥಾ ಶುರು

ಬೆಂಗಳೂರಿನಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಕಚೇರಿಯನ್ನು ಉದ್ಘಾಟನೆ ಮಾಡಲಾಗಿದೆ. ರಣದೀಪ್ ಸಿಂಗ್ ಸುರ್ಜೇವಾಲ ಈ ಕಚೇರಿ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಹಿರಿಯ ಕಾಂಗ್ರೆಸ್ ನಾಯಕ ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada