ದುಬಾರಿ ದುನಿಯಾದಲ್ಲಿ ಬಿಜೆಪಿ ಸರ್ಕಾರದಿಂದ ಜನರ ಮೇಲೆ ತೆರಿಗೆ ದಾಳಿ; ಕಾಂಗ್ರೆಸ್ ವಾಗ್ದಾಳಿ

Karnataka News: ಇಂದಿನಿಂದ ಅಗತ್ಯ ವಸ್ತುಗಳು, ಆಹಾರ ವಸ್ತುಗಳ ದರ ಹೆಚ್ಚಳವಾಗುತ್ತದೆ. ಈ ಹಿನ್ನೆಲೆಯಲ್ಲಿ #ದುಬಾರಿದುನಿಯಾ ಎಂಬ ಹ್ಯಾಷ್​ಟ್ಯಾಗ್ ಅಡಿ ಸರಣಿ ಕೂ ಮಾಡಿರುವ ಕಾಂಗ್ರೆಸ್ ಬಿಜೆಪಿ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿದೆ.

ದುಬಾರಿ ದುನಿಯಾದಲ್ಲಿ ಬಿಜೆಪಿ ಸರ್ಕಾರದಿಂದ ಜನರ ಮೇಲೆ ತೆರಿಗೆ ದಾಳಿ; ಕಾಂಗ್ರೆಸ್ ವಾಗ್ದಾಳಿ
ಡಿಕೆ ಶಿವಕುಮಾರ
TV9kannada Web Team

| Edited By: Sushma Chakre

Jul 18, 2022 | 4:13 PM

ಬೆಂಗಳೂರು: ಮೊಸರು, ಮಜ್ಜಿಗೆ ಹಾಗೂ ಲಸ್ಸಿಗಳ ಮೇಲೆ ಶೇ. 5ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (GST) ವಿಧಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಈ ವಸ್ತುಗಳ ಬೆಲೆ 2ರಿಂದ 3 ರೂ.ಗಳಷ್ಟು ಹೆಚ್ಚಳವಾಗಲಿದೆ. ನಂದಿನಿ ಮೊಸರು 200 ಗ್ರಾಂ.ಗೆ 12 ರೂ., ಮೊಸರು 500 ಗ್ರಾಂ.ಗೆ 24 ರೂ., ಮೊಸರು 1 ಲೀ.ಗೆ 46 ರೂ., ಮಜ್ಜಿಗೆ 200 ಗ್ರಾಂ. ಪ್ಯಾಕ್‌ಗೆ 8 ರೂ., ಸಿಹಿ ಲಸ್ಸಿ 200 ಗ್ರಾಂ. ಪ್ಯಾಕ್‌ಗೆ 11 ರೂ.ನಂತೆ ಹೊಸ ಗರಿಷ್ಠ ದರವನ್ನು ನಿಗದಿಪಡಿಸಲಾಗಿದೆ. ಪ್ಯಾಕ್‌ ಮಾಡಲಾದ ಮೊಸರು, ಮಜ್ಜಿಗೆ ಮೇಲೆ ಜಿಎಸ್‌ಟಿ ವಿಧಿಸಿರುವುದರಿಂದ ನಂದಿನಿ ಉತ್ಪನ್ನಗಳ ಪೊಟ್ಟಣಗಳ ಮೇಲಿನ ದರಗಳನ್ನು ಪರಿಷ್ಕರಿಸಲಾಗಿದೆ.

ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದ್ದು, ಇಂದಿನಿಂದ ಅಗತ್ಯ ವಸ್ತುಗಳು, ಆಹಾರ ವಸ್ತುಗಳ ದರ ಹೆಚ್ಚಳವಾಗುತ್ತದೆ. ಈ ಹಿನ್ನೆಲೆಯಲ್ಲಿ #ದುಬಾರಿದುನಿಯಾ ಎಂಬ ಹ್ಯಾಷ್​ಟ್ಯಾಗ್ ಅಡಿ ಸರಣಿ ಕೂ ಮಾಡಿರುವ ಕಾಂಗ್ರೆಸ್ ಈ ನಿರ್ಧಾರವನ್ನು ಖಂಡಿಸಿದೆ.

ಅಕ್ಕಿ, ಮೊಸರು, ಹಾಲು ಸೇರಿದಂತೆ ಬಡ, ಮದ್ಯಮವರ್ಗದ ಅಗತ್ಯಗಳನ್ನೇ ಗುರಿಯಾಗಿಸಿ ’ತೆರಿಗೆ ದಾಳಿ’ ನಡೆಸಿದೆ ಬಿಜೆಪಿ ಸರ್ಕಾರ. ಜನರನ್ನು ಪೀಡಿಸಿ ಬೊಕ್ಕಸ ತುಂಬಿಸುವ ಸರ್ಕಾರ ಉತ್ತರಿಸಲಿ. ಬ್ಲಾಕ್ ಮನಿ ಎಲ್ಲಿ ಹೋಯಿತು? ನೋಟ್ ಬ್ಯಾನ್‌ನಿಂದ ಎಷ್ಟು ಹಣ ಸಿಕ್ಕಿತು? ಸಿರಿವಂತ ಉದ್ಯಮಿಗಳಿಗೆ NPA ಉಡುಗೊರೆ ಕೊಟ್ಟಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Koo App

ಇದನ್ನೂ ಓದಿ: ಇಂದಿನಿಂದ ಮೊಸರು, ಮಜ್ಜಿಗೆ, ಲಸ್ಸಿ ಬೆಲೆ ಹೆಚ್ಚಳ

ಬಡವರು, ಮಧ್ಯಮ ವರ್ಗದವರು ಬದುಕಲೇಬಾರದು ಎಂದು ಬಿಜೆಪಿ ಸರ್ಕಾರ ನಿರ್ಧರಿಸಿದಂತಿದೆ. ಉದ್ಯೋಗ ನೀಡಬೇಕಾದ, ಆರ್ಥಿಕ ಸಬಲೀಕರಣ ಮಾಡಬೇಕಾದ ಸರ್ಕಾರ ಬೆಲೆ ಏರಿಕೆಯ ’ಸರ್ಜಿಕಲ್ ಸ್ಟ್ರೈಕ್’ ನಡೆಸುತ್ತಿದೆ. ರಾಜ್ಯ ಸರ್ಕಾರ ನೇರವಾಗಿ ಬಡವರ ಅನ್ನದ ತಟ್ಟೆಗೆ ಕೈ ಹಾಕಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಜನಾರ್ದನ್ ಹೋಟೆಲ್ ಮೆನು ಕಾರ್ಡ್‌ ಈಗ ನೋಡಿ! ಎಂದು ಕಾಂಗ್ರೆಸ್ ಕೂ ಮಾಡಿದೆ.

Koo App

ವಿದ್ಯಾರ್ಥಿಗಳ ಮೇಲೆ ಬೆಲೆ ಏರಿಕೆಯ ಸರ್ಜಿಕಲ್ ಸ್ಟ್ರೈಕ್! ವಿದ್ಯಾರ್ಥಿಗಳು ಬಳಸುವ ಪರಿಕರಗಳಾದ ಅಟ್ಲಾಸ್, ಪೆನ್ಸಿಲ್ ಶಾರ್ಪ್‌ನರ್, ಮ್ಯಾಪ್, ಮುಂತಾದವುಗಳ ಮೇಲೆ 18% ತೆರಿಗೆ ವಿಧಿಸಿ, ವಿದ್ಯಾರ್ಥಿಗಳಿಂದಲೂ ಸುಲಿಗೆ ಮಾಡಿ ಸರ್ಕಾರ ನಡೆಸುವ ದುರ್ಗತಿ ಬಂದಿದೆಯೇ ಬಿಜೆಪಿಗೆ? ಬಿಜೆಪಿಗೆ ಶಿಕ್ಷಣದ ಬಗ್ಗೆ ಏಕಿಷ್ಟು ಅಸಹನೆ? #ದುಬಾರಿದುನಿಯಾ

ಕರ್ನಾಟಕ ಕಾಂಗ್ರೆಸ್ (@inckarnataka) 18 July 2022

ವಿದ್ಯಾರ್ಥಿಗಳ ಮೇಲೆ ಬೆಲೆ ಏರಿಕೆಯ ಸರ್ಜಿಕಲ್ ಸ್ಟ್ರೈಕ್! ವಿದ್ಯಾರ್ಥಿಗಳು ಬಳಸುವ ಪರಿಕರಗಳಾದ ಅಟ್ಲಾಸ್, ಪೆನ್ಸಿಲ್ ಶಾರ್ಪ್‌ನರ್, ಮ್ಯಾಪ್, ಮುಂತಾದವುಗಳ ಮೇಲೆ 18% ತೆರಿಗೆ ವಿಧಿಸಿ, ವಿದ್ಯಾರ್ಥಿಗಳಿಂದಲೂ ಸುಲಿಗೆ ಮಾಡಿ ಸರ್ಕಾರ ನಡೆಸುವ ದುರ್ಗತಿ ಬಂದಿದೆಯೇ ಬಿಜೆಪಿಗೆ? ಬಿಜೆಪಿಗೆ ಶಿಕ್ಷಣದ ಬಗ್ಗೆ ಏಕಿಷ್ಟು ಅಸಹನೆ? ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada